ADVERTISEMENT

‘KGF’ ಸಹ ನಿರ್ದೇಶಕ ಕೀರ್ತನ್‌ ಅವರ 4 ವರ್ಷದ ಮಗು ಲಿಫ್ಟ್‌ನಲ್ಲಿ ಸಿಲುಕಿ ಸಾವು

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 18 ಡಿಸೆಂಬರ್ 2025, 14:35 IST
Last Updated 18 ಡಿಸೆಂಬರ್ 2025, 14:35 IST
<div class="paragraphs"><p>ಕೀರ್ತನ್ ನಾಡಗೌಡ ಅವರ ಕುಟುಂಬ</p></div>

ಕೀರ್ತನ್ ನಾಡಗೌಡ ಅವರ ಕುಟುಂಬ

   

ಚಿತ್ರಕೃಪೆ: ಸಾಮಾಜಿಕ ಮಾಧ್ಯಮ

ಬೆಂಗಳೂರು: ಲಿಫ್ಟ್‌ನಲ್ಲಿ ಸಿಲುಕಿ ಕೆಜಿಎಫ್–2, ಸಲಾರ್ ಸಿನಿಮಾದ ಸಹ ನಿರ್ದೇಶಕ ಕೀರ್ತನ್ ನಾಡಗೌಡ ಅವರ 4 ವರ್ಷದ ಮಗ ಮೃತಪಟ್ಟಿರುವುದಾಗಿ ವರದಿಯಾಗಿದೆ.

ADVERTISEMENT

ಕೀರ್ತನ್ ನಾಡಗೌಡ ಅವರ ಕುಟುಂಬಕ್ಕೆ ಸಂತಾಪ ಸೂಚಿಸಿ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ನಟ, ಆಂಧ್ರಪ್ರದೇಶ ಉಪಮುಖ್ಯಮಂತ್ರಿ ಪವನ್ ಕಲ್ಯಾಣ್‌, ‘ಲಿಫ್ಟ್‌ನಲ್ಲಿ ಸಿಲುಕಿ ನಿರ್ದೇಶಕ ಕೀರ್ತನ್‌ ನಾಡಗೌಡ ಅವರ ಮಗ ಸೋನಾರ್ಶ್ ಕೆ. ನಾಡಗೌಡ ಮೃತಪಟ್ಟಿರುವ ವಿಷಯ ತಿಳಿದು ತುಂಬಾ ದುಃಖವಾಯಿತು. ಕೀರ್ತನ್‌ ಮತ್ತು ಅವರ ಪತ್ನಿ ಸಮೃದ್ಧಿ ಪಟೇಲ್‌ ಅವರಿಗೆ ನನ್ನ ಸಂತಾಪಗಳು. ಈ ದುಃಖವನ್ನು ಸಹಿಸುವ ಶಕ್ತಿಯನ್ನು ದೇವರು ಅವರಿಗೆ ಕರುಣಿಸಲಿ ಎಂದು ಪ್ರಾರ್ಥಿಸುತ್ತೇನೆ’ ಎಂದು ಹೇಳಿದ್ದಾರೆ.

ಸೋಮವಾರ ಈ ದುರ್ಘಟನೆ ಸಂಭವಿಸಿದೆ ಎಂದು ಕೆಲ ಮಾಧ್ಯಮಗಳು ವರದಿ ಮಾಡಿವೆ. ಆದರೆ, ಕೀರ್ತನ್‌ ಅವರ ಕುಟುಂಬದಿಂದ ಯಾವುದೇ ಅಧಿಕೃತ ಹೇಳಿಕೆ ಬಂದಿಲ್ಲ.

ಕನ್ನಡ ಹಲವಾರು ಚಿತ್ರಗಳಲ್ಲಿ ಕೆಲಸ ಮಾಡಿರುವ ಕೀರ್ತನ್‌ ಅವರು, ಪ್ರಶಾಂತ್ ನೀಲ್‌ ಅವರೊಂದಿಗೆ ಕೆಜಿಎಫ್‌ 2, ಸಲಾರ್‌ ಚಿತ್ರದಲ್ಲಿ ಸಹ ನಿರ್ದೇಶಕರಾಗಿ ಕೆಲಸ ಮಾಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.