ADVERTISEMENT

ಅಪ್ಪನ ಹುಟ್ಟುಹಬ್ಬಕ್ಕೆ ವಿಶೇಷ ಉಡುಗೊರೆ ನೀಡಿದ ಸಾನ್ವಿ ಸುದೀಪ್

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 3 ಸೆಪ್ಟೆಂಬರ್ 2025, 13:38 IST
Last Updated 3 ಸೆಪ್ಟೆಂಬರ್ 2025, 13:38 IST
<div class="paragraphs"><p>ಚಿತ್ರ ಕೃಪೆ: <strong><a href="https://www.instagram.com/sanvisudeepofficial/">sanvisudeepofficial</a></strong></p></div>
   

ಚಿತ್ರ ಕೃಪೆ: sanvisudeepofficial

ಸ್ಯಾಂಡಲ್‌ವುಡ್‌ ನಟ ಸುದೀಪ್ ಅವರ ಹುಟ್ಟುಹಬ್ಬದ ಪ್ರಯುಕ್ತ ಮಗಳು ಸಾನ್ವಿ ವಿಶೇಷ ಉಡುಗೊರೆಯನ್ನು ಕೊಟ್ಟಿದ್ದಾರೆ.

ಕಿಚ್ಚ ಸುದೀಪ್‌ ಮಗಳು ಸಾನ್ವಿ ತನ್ನ ಕೈಯಾರೆ ಅಪ್ಪನ ಚಿತ್ರವನ್ನು ಬಿಡಿಸಿದ್ದಾರೆ. ಈ ಕಲಾಕೃತಿಯನ್ನು ಅಪ್ಪನ ಹುಟ್ಟುಹಬ್ಬಕ್ಕೆ ಉಡುಗೊರೆಯಾಗಿ ಕೊಟ್ಟಿದ್ದಾರೆ. ಇದೇ ಕಲಾಕೃತಿಯನ್ನು ಅಪ್ಪನಿಗೆ ಕೊಟ್ಟ ಸಾನ್ವಿ ಚಂದದ ಫೋಟೋವನ್ನು ಕ್ಲಿಕ್ಕಿಸಿಕೊಂಡಿದ್ದಾರೆ. ಇವರ ಜೊತೆಗೆ ಕಿಚ್ಚ ಸುದೀಪ್‌ ಪತ್ನಿ ಪ್ರಿಯಾ ಅವರು ಕಾಣಿಸಿಕೊಂಡಿದ್ದಾರೆ.

ADVERTISEMENT

ಒಟ್ಟಾಗಿ ಕುಟುಂಬದ ಜೊತೆಗೆ ಕ್ಲಿಕ್ಕಿಸಿಕೊಂಡ ಚಿತ್ರವನ್ನು ಸಾನ್ವಿ ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಅದರ ಜೊತೆಗೆ Gift Was A Success ಅಂತ ಬರೆದುಕೊಂಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.