ADVERTISEMENT

ತೆರೆ ಮೇಲೆ ಮೂಡಿದ ಮಾರ್ಕ್‌: ಕಿಚ್ಚ ಸುದೀಪ್ ಎಂಟ್ರಿಗೆ ಅಭಿಮಾನಿಗಳ ಸಂಭ್ರಮ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 25 ಡಿಸೆಂಬರ್ 2025, 6:31 IST
Last Updated 25 ಡಿಸೆಂಬರ್ 2025, 6:31 IST
   

ಕಿಚ್ಚ ಸುದೀಪ್ ನಟನೆಯ ಬಹುನಿರೀಕ್ಷಿತ ‘ಮಾರ್ಕ್’ ಚಿತ್ರವು ಇಂದು ಬಿಡುಗಡೆಯಾಗಿದೆ. ಅಭಿಮಾನಿಗಳು ಚಿತ್ರಮಂದಿರದ ಒಳಗೆ ಹೆಜ್ಜೆ ಹಾಕಿ ಸಂಭ್ರಮಿಸಿರುವ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದೆ.

‘ಮಾರ್ಕ್’ ಚಿತ್ರದಲ್ಲಿ ಸುದೀಪ್ ಅವರ ಎಂಟ್ರಿ ದೃಶ್ಯಕ್ಕೆ ಹಾಗೂ ‘ಮಸ್ತ್ ಮಲೈಕಾ’ ಹಾಡಿಗೆ ಅವರ ಅಭಿಮಾನಿಗಳು ಚಿತ್ರಮಂದಿರದ ಒಳಗೆ ಶಿಳ್ಳೆ‌, ಚಪ್ಪಾಳೆ ಹೊಡೆದು ಸಂಭ್ರಮಿಸಿದ್ದಾರೆ.

ಕಳೆದ ಶನಿವಾರ ಹುಬ್ಬಳ್ಳಿ ನಗರದ ನೆಹರೂ ಮೈದಾನದಲ್ಲಿ ಈ ಚಿತ್ರದ 'ಪ್ರೀ ರಿಲೀಸ್ ಇವೆಂಟ್' ಕಾರ್ಯಕ್ರಮ ಆಯೋಜಿಸಲಾಗಿತ್ತು. ಆ ವೇಳೆ ಲಕ್ಷಕ್ಕೂ ಅಧಿಕ ಮಂದಿ ಭಾಗಿಯಾಗಿ ಸುದೀಪ್ ಅವರಿಗೆ ಶುಭಹಾರೈಸಿದ್ದರು.

ADVERTISEMENT

'ಸತ್ಯಜ್ಯೋತಿ ಫಿಲ್ಮ್ಸ್' ಮತ್ತು 'ಕಿಚ್ಚ ಕ್ರಿಯೇಷನ್ಸ್' ಮೂಲಕ 'ಮಾರ್ಕ್' ಸಿನಿಮಾ ನಿರ್ಮಾಣಗೊಂಡಿದೆ. ಚಿತ್ರಕ್ಕೆ ಅಜನೀಶ್ ಲೋಕನಾಥ್ ಸಂಗೀತ, ಶೇಖರ್ ಚಂದ್ರ ಅವರ ಛಾಯಾಚಿತ್ರವಿದೆ.

ತಮಿಳು ಚಿತ್ರರಂಗದ ಖ್ಯಾತ ನಟ ಯೋಗಿಬಾಬು, ಮಲಯಾಳದ ಶೈನ್ ಟಾಮ್ ಚಾಕೋ ಸೇರಿದಂತೆ ಹಲವು ಪ್ರಮುಖ ಕಲಾವಿದರು ಸಿನಿಮಾದಲ್ಲಿ ನಟಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.