ADVERTISEMENT

‘ಮಾರ್ಕ್‌’ ಸಿನಿಮಾದ ಚಿತ್ರೀಕರಣ ಮುಕ್ತಾಯ: ನಟ ಸುದೀಪ್‌ ಹೇಳಿದ್ದೇನು?

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 13 ನವೆಂಬರ್ 2025, 10:34 IST
Last Updated 13 ನವೆಂಬರ್ 2025, 10:34 IST
<div class="paragraphs"><p>ನಟ ಕಿಚ್ಚ ಸುದೀಪ್</p></div>

ನಟ ಕಿಚ್ಚ ಸುದೀಪ್

   

ಚಿತ್ರ: ಫೇಸ್‌ಬುಕ್‌

ನಟ ಕಿಚ್ಚ ಸುದೀಪ್‌ ಅಭಿನಯದ ‘ಮಾರ್ಕ್’ ಚಿತ್ರತಂಡವು ಅಭಿಮಾನಿಗಳಿಗೆ ಮತ್ತೊಂದು ಅಪ್‌ಡೇಟ್ ಕೊಟ್ಟಿದೆ. ಇತ್ತೀಚೆಗೆ ಮಾರ್ಕ್ ಸಿನಿಮಾದ ಮೊದಲ ಟೀಸರ್ ಬಿಡುಗಡೆಯಾಗಿ ಸದ್ದು ಮಾಡುತ್ತಿದೆ. ಈಗ ಮಾರ್ಕ್ ಸಿನಿಮಾದ ಕೊನೆ ಹಂತದ ಚಿತ್ರೀಕರಣ ಮುಗಿಸಿದೆ.

ADVERTISEMENT

ಮಾರ್ಕ್ ಚಿತ್ರೀಕರಣ ಮುಕ್ತಾಯದ ಬಗ್ಗೆ ನಟ ಸುದೀಪ್‌ ಸಾಮಾಜಿಕ ಮಾಧ್ಯಮ ಫೇಸ್‌ಬುಕ್‌ ಖಾತೆಯಲ್ಲಿ ಪೋಸ್ಟ್‌ ಒಂದನ್ನು ಹಂಚಿಕೊಂಡಿದ್ದಾರೆ. ಅದರ ಜೊತೆಗೆ ‘ಜುಲೈ 7ರಂದು, ನಮ್ಮ ತಂಡವು ಒಂದೇ ಉದ್ದೇಶದಿಂದ ಹೊರಟಿತು. ಆರಂಭದಲ್ಲಿ ಸಿನಿಮಾ ಮಾಡಲು ಅಸಾಧ್ಯ ಎನಿಸಿದರು ಬಳಿಕ ಸಾಧಿಸಿದೇವು. ಕಡಿಮೆ ಸಮಯದಲ್ಲಿ ಸಿನಿಮಾವನ್ನು ಪೂರ್ಣಗೊಳಿಸುವುದು ದೊಡ್ಡ ಕೆಲಸವಾಗುತ್ತು. ಅದನ್ನು ಸಾಧ್ಯವಾಗಿಸಿದ್ದು ಕೆಲವರ ಪ್ರಯತ್ನವಲ್ಲ, ತಂಡದ ಪ್ರತಿಯೊಬ್ಬ ವ್ಯಕ್ತಿಯ ಕಠಿಣ ಪರಿಶ್ರಮದಿಂದ ಆಯಿತು. ಕೆಲಸದ ಮೇಲೆ ಗಮನ ಹರಿಸಿ ಒಟ್ಟಾಗಿ ಕೆಲಸ ಮಾಡಿದರು. ಗುರಿ ತಲುಪುವವರೆಗೆ ಪ್ರತಿಯೊಬ್ಬರು ಅಡಚಣೆಯನ್ನು ಎದುರಿಸಿದರು’ ಎಂದರು.

‘ಮಾರ್ಕ್‌ ಸಿನಿಮಾ ಸುಮಾರು 110 ದಿನಗಳ ಅಗಾಧ ಶ್ರಮ ಮತ್ತು ಲೆಕ್ಕವಿಲ್ಲದಷ್ಟು ಕಾಲ್‌ಶೀಟ್‌ಗಳ ನಂತರ ಮುಕ್ತಾಯಗೊಳ್ಳುತ್ತದೆ. ಗ್ರಾಫಿಕ್, ಹಿನ್ನೆಲೆ ಸಂಗೀತ, ಡಬ್ಬಿಂಗ್ ಮತ್ತು ಹೆಚ್ಚಿನ ಪೋಸ್ಟ್-ಪ್ರೊಡಕ್ಷನ್ ಕೆಲಸವನ್ನು ಪೂರ್ಣಗೊಳಿಸಿದ್ದೇವೆ. ಈ ಪ್ರಯಾಣವನ್ನು ನೆನಪಿಸಿಕೊಂಡರೆ ಭಯ ಆಗುತ್ತದೆ. ನಾವು ಹೇಗೆ ಧೈರ್ಯ ಮಾಡಿದೆವು ಮತ್ತು ಅದನ್ನು ಹೇಗೆ ಸಾಧಿಸಿದೆವು? ಈ ತಂಡವು ಯಾವಾಗಲೂ ಹೇಳಿದಂತೆ ಹಾಗೂ ಭರವಸೆ ನೀಡಿದಂತೆ ಈ ಕ್ರಿಸ್ಮಸ್‌ಗೆ ಬರುತ್ತಿದ್ದೇವೆ’ ಎಂದು ಬರೆದುಕೊಂಡಿದ್ದಾರೆ.

‌ನಟ ಸುದೀಪ್‌ ನಟನೆಯ 47ನೇ ಸಿನಿಮಾ ಇದಾಗಿದ್ದು, ಈ ಸಿನಿಮಾದಲ್ಲಿ ಅಜಯ್ ಮಾರ್ಕಂಡೆ ಎಂಬ ಪಾತ್ರದಲ್ಲಿ ಸುದೀಪ್ ಕಾಣಿಸಿಕೊಳ್ಳುತ್ತಿದ್ದಾರೆ. ಕ್ರಿಸ್ಮಸ್ ಹಬ್ಬದ ಪ್ರಯುಕ್ತ ಡಿಸೆಂಬರ್ 25ರಂದು ‘ಮಾರ್ಕ್’ ಸಿನಿಮಾ ಚಿತ್ರಮಂದಿರಗಳಲ್ಲಿ ತೆರೆಕಾಣಲಿದೆ. ಮಾರ್ಕ್ ಸಿನಿಮಾವನ್ನು ‘ಸತ್ಯಜ್ಯೋತಿ ಫಿಲ್ಮ್ಸ್‌’ ನಿರ್ಮಾಣ ಮಾಡುತ್ತಿದೆ. ಮ್ಯಾಕ್ಸ್‌ ಸಿನಿಮಾ ನಿರ್ದೇಶಿಸಿದ್ದ ತಮಿಳಿನ ವಿಜಯ್ ಕಾರ್ತಿಕೇಯ್ ಅವರೇ ‘ಮಾರ್ಕ್’ ಚಿತ್ರವನ್ನು ನಿರ್ದೇಶಿಸಿದ್ದಾರೆ. ಈ ಚಿತ್ರಕ್ಕೆ ಶೇಖರ್ ಚಂದ್ರ ಅವರು ಛಾಯಾಗ್ರಹಣ ಮಾಡಿದ್ದಾರೆ. ಅಜನೀಶ್ ಬಿ. ಲೋಕನಾಥ್ ಅವರು ಸಂಗೀತ ನೀಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.