ADVERTISEMENT

ಸಂಚಾರಕ್ಕೆ ಮೆಟ್ರೊನೇ ಇಷ್ಟ ಎಂದ ನಟ ಸುದೀಪ್‌: ಕಿಚ್ಚ ಹಂಚಿಕೊಂಡ ಕುತೂಹಲದ ಸಂಗತಿ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 20 ಡಿಸೆಂಬರ್ 2025, 7:55 IST
Last Updated 20 ಡಿಸೆಂಬರ್ 2025, 7:55 IST
ಕಿಚ್ಚ ಸುದೀಪ್
ಕಿಚ್ಚ ಸುದೀಪ್    

ಕನ್ನಡದ ಜನಪ್ರಿಯ ನಟ ಕಿಚ್ಚ ಸುದೀಪ್ ಅವರು ಸಿನಿಮಾ, ರಿಯಾಲಿಟಿ ಶೋ ಸೇರಿದಂತೆ ಇತರೆ ಕೆಲಸಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿರುತ್ತಾರೆ. ಇದೇ ಡಿಸೆಂಬರ್ 25ರಂದು ಅವರ ನಟನೆಯ ಮಾರ್ಕ್ ಸಿನಿಮಾ ಬಿಡುಗಡೆಗೆ ಸಿದ್ಧವಾಗಿದೆ. ಈ ನಡುವೆ ಅವರು ವಿದೇಶಕ್ಕೆ ಹೋದಾಗ ಸ್ಥಳೀಯವಾಗಿ ಪ್ರಯಾಣಿಸಲು ಯಾವ ಸಾರಿಗೆ ಬಳಸುತ್ತಾರೆ ಎಂಬುದನ್ನು ಅವರು ವಿವರಿಸಿದ್ದಾರೆ.

ಸದ್ಯ, ಕಿಚ್ಚ ಸುದೀಪ್ ಅವರು, ತಾವು ವಿದೇಶಗಳಿಗೆ ಹೋದಾಗ ಯಾವ ಸಾರಿಗೆ ಬಳಸುತ್ತೇನೆ ಎಂಬುದನ್ನು ಪ್ರಜಾವಾಣಿ ಜೊತೆ ಮಾಹಿತಿ ಹಂಚಿಕೊಂಡಿದ್ದಾರೆ.

‘ವಿದೇಶಗಳಿಗೆ ಹೋದಾಗ ನಾನು ಹೆಚ್ಚಾಗಿ ಮೆಟ್ರೋವನ್ನು ಬಳಕೆ ಮಾಡುತ್ತೇನೆ. ಬೆಂಗಳೂರಿನಲ್ಲೂ ಮೆಟ್ರೋ ಬಳಕೆ ಮಾಡಬೇಕು ಎಂಬುದು ನನ್ನ ಬಯಕೆ. ಆದರೆ, ಇಲ್ಲಿ ಅದು ಕಷ್ಟವಾಗುತ್ತದೆ. ಆದರೆ, ವಿದೇಶಗಳಿಗೆ ಹೋದಾಗ ಯಾವಾಗಲು ಮೆಟ್ರೋ ಬಳಕೆ ಮಾಡುತ್ತೇನೆ, ಇದರಿಂದ ಸಮಯ ಉಳಿತಾಯವಾಗುತ್ತದೆ. ತೀರಾ ಅನಿವಾರ್ಯ ಇದ್ದಾಗ ಮಾತ್ರ ಕಾರು ಬಳಕೆ ಮಾಡುತ್ತೇನೆ’ ಎಂದು ತಿಳಿಸಿದ್ದಾರೆ.

ADVERTISEMENT

ಇದರ ಜೊತೆಗೆ ‘ಮಾರ್ಕ್ ಸಿನಿಮಾದ ಕುರಿತಾಗಿ ಆರಂಭವಾಗಿರುವ ‘ಮಾರ್ಕ್ ಮ್ಯಾರಥಾನ್’ ಅಭಿಯಾನವನ್ನು ಪ್ರಜಾವಾಣಿಯಂತಹ ಒಂದು ಅತ್ಯನ್ನತ ಸಂಸ್ಥೆ ಜೊತೆ ಮಾಡುತ್ತಿರುವುದಕ್ಕೆ ಸಂತಸವಾಗುತ್ತಿದೆ. ವಿಶೇಷವಾಗಿ, ಪ್ರಜಾವಾಣಿ ಪತ್ರಿಕೆಯ ಸಂಪಾದಕರಾದ ರವೀಂದ್ರ ಭಟ್ ಸರ್ ಹಾಗೂ ಪತ್ರಿಕೆಯ ಮಾರ್ಕೆಟಿಂಗ್ ಮುಖ್ಯಸ್ಥರಾದ ಶ್ರೀರಾಮ್ ಅವರಿಗೆ ಧನ್ಯವಾದ ತಿಳಿಸುತ್ತೇನೆ’ ಎಂದು ಕಿಚ್ಚ ಸುದೀಪ್ ಅವರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.