ADVERTISEMENT

L2: Empuraan Trailer: ಮೋಹನ್‌ಲಾಲ್‌ ನಟನೆಯ 'ಎಂಪುರಾನ್‌' ಟ್ರೇಲರ್ ಬಿಡುಗಡೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 20 ಮಾರ್ಚ್ 2025, 10:56 IST
Last Updated 20 ಮಾರ್ಚ್ 2025, 10:56 IST
<div class="paragraphs"><p>ಎಂಪುರಾನ್‌</p></div>

ಎಂಪುರಾನ್‌

   

(ಚಿತ್ರ ಕೃಪೆ: X/@hombalefilms)

ಬೆಂಗಳೂರು: ಮೋಹನ್‌ಲಾಲ್‌ ನಟನೆಯ 'ಎಲ್‌–2: ಎಂಪುರಾನ್‌' ಚಿತ್ರದ ಟ್ರೇಲರ್ ಇಂದು (ಗುರುವಾರ) ಬಿಡುಗಡೆಯಾಗಿದೆ.

ADVERTISEMENT

2019ರಲ್ಲಿ ತೆರೆಕಂಡಿದ್ದ ಪೃಥ್ವಿರಾಜ್‌ ಸುಕುಮಾರನ್‌ ನಿರ್ದೇಶನದ 'ಲೂಸಿಫರ್‌' ಚಿತ್ರದ ಎರಡನೇ ಭಾಗ ಇದಾಗಿದೆ. ನಿರ್ದೇಶನದ ಜೊತೆಗೆ ಪೃಥ್ವಿರಾಜ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.

'ಎಲ್‌–2: ಎಂಪುರಾನ್‌' ಮಾರ್ಚ್‌ 27ರಂದು ಮಲಯಾಳ, ತೆಲುಗು, ತಮಿಳು, ಕನ್ನಡ ಮತ್ತು ಹಿಂದಿ ಭಾಷೆಗಳಲ್ಲಿ ಬಿಡುಗಡೆಯಾಗಲಿದೆ.

ಈ ಸಿನಿಮಾವನ್ನು ಕರ್ನಾಟಕದಲ್ಲಿ ಹೊಂಬಾಳೆ ಫಿಲ್ಮ್ಸ್‌ ವಿತರಣೆ ಮಾಡುತ್ತಿದೆ.

ಸಾಮಾಜಿಕ ಮಾಧ್ಯಮಗಳಲ್ಲಿ ಚಿತ್ರದ ಟ್ರೇಲರ್‌ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಚಿತ್ರದ ಟ್ರೇಲರ್ ರೋಮಾಂಚನಕಾರಿಯಾಗಿದೆ ಎಂದು ಪ್ರೇಕ್ಷಕರು ಪ್ರತಿಕ್ರಿಯಿಸಿದ್ದಾರೆ.

ಮೋಹನ್‌ಲಾಲ್ ಮತ್ತೊಮ್ಮೆ ತಮ್ಮ ಸಿಗ್ನೇಚರ್ ಸ್ಟೈಲ್‌ನಲ್ಲಿ ಮೋಡಿ ಮಾಡಲಿದ್ದಾರೆ ಎಂದು ಅಭಿಮಾನಿಗಳು ಅಭಿಪ್ರಾಯಪಟ್ಟಿದ್ದಾರೆ.

ಚಿತ್ರಕ್ಕೆ ಮುರಳಿ ಗೋಪಿ ಕಥೆ, ಚಿತ್ರಕಥೆ ಹಾಗೂ ಸಂಭಾಷಣೆ ಬರೆದಿದ್ದಾರೆ. ಇಂದ್ರಜಿತ್ ಸುಕುಮಾರನ್, ಟೊವಿನೋ ಥಾಮಸ್, ಮಂಜು ವಾರಿಯರ್, ಸಾಯಿ ಕುಮಾರ್ ಮುಂತಾದವರು ತಾರಾಬಳಗದಲ್ಲಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.