ADVERTISEMENT

‘ಲ್ಯಾಂಡ್‌ಲಾರ್ಡ್’ ಟ್ರೇಲರ್ ಬಿಡುಗಡೆ: ಮಹಾ ಅವತಾರದಲ್ಲಿ ತ್ರಿಮೂರ್ತಿಗಳು

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 18 ಜನವರಿ 2026, 12:37 IST
Last Updated 18 ಜನವರಿ 2026, 12:37 IST
<div class="paragraphs"><p>ರಚಿತಾ ರಾಮ್, ದುನಿಯಾ ವಿಜಯ್, ರಾಜ್‌ ಬಿ ಶೆಟ್ಟಿ</p></div>

ರಚಿತಾ ರಾಮ್, ದುನಿಯಾ ವಿಜಯ್, ರಾಜ್‌ ಬಿ ಶೆಟ್ಟಿ

   

ಚಿತ್ರ: ಯ್ಯೂಟೂಬ್

ನಟ ದುನಿಯಾ ವಿಜಯ್‌, ನಟಿ ರಚಿತಾ ರಾಮ್‌, ರಾಜ್‌ ಬಿ ಶೆಟ್ಟಿ ಅವರ ಅಭಿನಯದಲ್ಲಿ ಮೂಡಿಬರುತ್ತಿರುವ ‘ಲ್ಯಾಂಡ್‌ಲಾರ್ಡ್‌’ ಸಿನಿಮಾದ ಟ್ರೇಲರ್‌ ಇಂದು (ಜ.18) ಬಿಡುಗಡೆಯಾಗಿದೆ. ಜಡೇಶ್ ಹಂಪಿ ನಿರ್ದೇಶನದ ಲ್ಯಾಂಡ್‌ಲಾರ್ಡ್ ಸಿನಿಮಾ ವಿಶ್ವದಾದ್ಯಂತ ಜನವರಿ 23ರಂದು ಬಿಡುಗಡೆಯಾಗುತ್ತಿದೆ.

ADVERTISEMENT

ಇದೀಗ ಲ್ಯಾಂಡ್‌ಲಾರ್ಡ್ ಸಿನಿಮಾದ ಟ್ರೇಲರ್ ಬಿಡುಗಡೆಯಾಗಿದ್ದು, ಪ್ರೇಕ್ಷಕರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಸಿನಿಮಾದ ಹೆಸರೇ ಸೂಚಿಸುತ್ತಿರುವಂತೆ ಭೂಮಾಲಿಕರ ದರ್ಪ, ಜೀತದಾಳುಗಳ ನೋವಿನ ಕತೆ ಇದಾಗಿದೆ. ಇದೇ ಮೊದಲ ಬಾರಿಗೆ ದುನಿಯಾ ವಿಜಯ್ ಭಿನ್ನ ಪಾತ್ರದಲ್ಲಿ ನಟಿಸಿದ್ದಾರೆ.

ರಿತನ್ಯಾ, ರಚಿತಾ ರಾಮ್, ದುನಿಯಾ ವಿಜಯ್,

ಇನ್ನು, ಅಜನೀಶ್ ಲೋಕನಾಥ್ ಸಂಗೀತ ನಿರ್ದೇಶನದಲ್ಲಿ ಸುಂದರ ಹಾಡುಗಳು ಮೂಡಿಬಂದಿವೆ. ಈ ಚಿತ್ರವನ್ನು ‘ಕಾಟೇರ’ ಸಿನಿಮಾದ ಕಥೆಗಾರ ಜಡೇಶ ಕೆ. ಹಂಪಿ ನಿರ್ದೇಶನ ಮಾಡಿದ್ದು, ಕೆ.ವಿ ಸತ್ಯಪ್ರಕಾಶ್ ಹಾಗೂ ಹೇಮಂತ್ ಗೌಡ ಅವರು ನಿರ್ಮಾಣ ಮಾಡುತ್ತಿದ್ದಾರೆ. ರಚಿತಾ ರಾಮ್, ರಿತನ್ಯಾ, ಶಿಶಿರ್ ಬೈಕಾಡಿ, ರಾಕೇಶ್ ಅಡಿಗ, ಅಚ್ಯುತ್ ಕುಮಾರ್, ಮಿತ್ರ, ಅಭಿಷೇಕ್ ದಾಸ್ ಹೀಗೆ ಕಲಾವಿದರ ದಂಡೇ ಈ ಸಿನಿಮಾದಲ್ಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.