
ಮಹಾನಟಿ ಖ್ಯಾತಿಯ ವಂಶಿ,
ಚಿತ್ರ: ಇನ್‌ಸ್ಟಾಗ್ರಾಮ್
ಮಹಾನಟಿ ಸೀಸನ್ 2ರಲ್ಲಿ ಭಾಗವಹಿಸಿದ್ದ ವಂಶಿ ಸದ್ಯ ‘ಲವ್ ಕೇಸ್’ ಚಿತ್ರದಲ್ಲಿ ನಾಯಕಿಯಾಗಿ ನಟಿಸಲು ಸಜ್ಜಾಗಿದ್ದಾರೆ. ನಟಿ ವಂಶಿ ಮಹಾನಟಿ ಶೋ ಆರಂಭದಿಂದ ತಮ್ಮ ಅಭಿನಯದಿಂದಲೇ ಎಲ್ಲರ ಗಮನ ಸೆಳೆದಿದ್ದರು. ಹೊಸ ಸಿನಿಮಾದಲ್ಲಿ ವಂಶಿಗೆ ಜೋಡಿಯಾಗಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಚಿತ್ರದಲ್ಲಿ ನಟಿಸಿದ್ದ ಪ್ರವೀಣ ಖ್ಯಾತಿಯ ರಂಜನ್ ಅವರು ನಟನಾಗಿ ಕಾಣಿಸಿಕೊಳ್ಳಲಿದ್ದಾರೆ.
ಪ್ರಜಾವಾಣಿ ಚಿತ್ರ
ಎಂ.ಬಿ ಕ್ರಿಯೇಷನ್ಸ್ ಬ್ಯಾನರ್ ಅಡಿಯಲ್ಲಿ ಮೋಹನ್ ಬಾಬು ನಿರ್ಮಾಣದಲ್ಲಿ ಹಾಗೂ ಜೈಶ್ ನಿರ್ದೇಶನದಲ್ಲಿ ‘ಲವ್ ಕೇಸ್’ ಸಿನಿಮಾದ ಮುಹೂರ್ತ ಬಂಡೆ ಮಹಾಕಾಳಿ ದೇವಸ್ಥಾನದಲ್ಲಿ ನೆರವೇರಿದೆ. ಶ್ರೀನಗರ ಕಿಟ್ಟಿ, ಟಗರು ಪಲ್ಯ ನಾಗಭೂಷಣ್, ಸಾಯಿಕುಮಾರ್, ಸುಧಾರಾಣಿ, ಪ್ರಮೋದ್ ಶೆಟ್ಟಿ, ಮಹಾನಟಿ ಖ್ಯಾತಿಯ ವಂಶಿ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಖ್ಯಾತಿಯ ರಂಜನ್ ಮುಖ್ಯಭೂಮಿಕೆಯಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.
ಪ್ರಜಾವಾಣಿ ಚಿತ್ರ
ಪ್ರಜಾವಾಣಿ ಚಿತ್ರ
ಲವ್ ಕೇಸ್ ಸಿನಿಮಾ ಸಂಪೂರ್ಣ ಪ್ರೇಮ ಕಥೆ ಎನ್ನುವ ಅಡಿ ಬರಹವಿರುವ ಈ ಚಿತ್ರಕ್ಕೆ ವಿ. ಹರಿಕೃಷ್ಣರವರ ಪುತ್ರ ಆದಿ ಹರಿಕೃಷ್ಣ ಸಂಗೀತ ಸಂಯೋಜಿಸುತ್ತಿದ್ದಾರೆ. ಮಾಸ್ತಿ ಸಂಭಾಷಣೆ ಲವ್ ಕೇಸ್ ಚಿತ್ರಕ್ಕಿದ್ದು, ಕೆ.ಎಸ್ ಚಂದ್ರಶೇಖರ್ ಛಾಯಾಗ್ರಹಣ ಅನುಕೃಷ್ಣ ಸಂಕಲನ ಚಿತ್ರಕ್ಕಿದೆ.
ಲವ್ ಕೇಸ್ ಚಿತ್ರದ ಶೀರ್ಷಿಕೆಯನ್ನು ಚಿಂತಾಮಣಿ ಮಾಜಿ ಶಾಸಕ ಜೆ.ಕೆ. ಕೃಷ್ಣಾರೆಡ್ಡಿ ಬಿಡುಗಡೆ ಮಾಡಿದರು. ವೇದಿಕೆಯಲ್ಲಿ ಹಿರಿಯ ನಟಿ ಸುಧಾರಾಣಿ , ಶ್ರೀನಗರ ಕಿಟ್ಟಿ, ನಾಗಭೂಷಣ್, ಮಾಸ್ತಿ ಹಾಗೂ ನಿರ್ದೇಶಕ ಜೈಶ್ ಇದ್ದರು. ಸಿನಿಮಾವನ್ನು 6 ತಿಂಗಳಲ್ಲಿ ತೆರೆಗೆ ತರುವ ಯೋಜನೆಯಲ್ಲಿರುವುದಾಗಿ ಚಿತ್ರತಂಡ ಹೇಳಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.