ADVERTISEMENT

ವಿಕ್ಕಿ ಕೌಶಲ್ ನಟನೆಯ ‘ಮಹಾವತಾರ್’ ಚಿತ್ರ ದೊಡ್ಡ ಜವಾಬ್ದಾರಿ: ಅಮರ್ ಕೌಶಿಕ್

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 24 ಅಕ್ಟೋಬರ್ 2025, 6:39 IST
Last Updated 24 ಅಕ್ಟೋಬರ್ 2025, 6:39 IST
   

ವಿಕ್ಕಿ ಕೌಶಲ್ ನಟನೆಯ ‘ಮಹಾವತಾರ್’ ಸಿನಿಮಾ ಒಂದು ದೊಡ್ಡ ಜವಾಬ್ದಾರಿಯಾಗಿದೆ ಎಂದು ನಿರ್ದೇಶಕ ಅಮರ್ ಕೌಶಿಕ್ ಸಂದರ್ಶನವೊಂದರಲ್ಲಿ ಹೇಳಿದ್ದಾರೆ.

ಮಹಾವತಾರ್’ ಚಿತ್ರಕ್ಕಾಗಿ ಸೆಟ್‌ಗಳು ತಯಾರಿಯಾಗುತ್ತಿದ್ದು ಮುಂದಿನ ದಿನಗಳಲ್ಲಿ ಚಿತ್ರೀಕರಣ ಆರಂಭ ಆಗಲಿದೆ ಎಂದು ನಿರ್ದೇಶಕ ಅಮರ್ ಕೌಶಿಕ್ ಹೇಳಿದ್ದಾರೆ.

‘ಮಹಾವತಾರ್' ನನ್ನ ಜೀವನದಲ್ಲಿ ವಿಶೇಷ ಸಿನಿಮಾ ಆಗಿದೆ. ನಾವು ಅರುಣಾಚಲ ಪ್ರದೇಶದ ಪರಶುರಾಮ ಕುಂಡದ ಪಕ್ಕದಲ್ಲಿ ವಾಸಿಸುತ್ತಿದ್ದೆವು. ಈ ಚಿತ್ರದ ಮೂಲಕ ಬಾಲ್ಯದ ನೆನಪುಗಳನ್ನು ಕಾಣಬಹುದು ಎಂದು ನಿರ್ದೇಶಕರು ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.

ADVERTISEMENT

ಈ ಚಿತ್ರದಲ್ಲಿ ವಿಕ್ಕಿ ಕೌಶಲ್ ಚಿರಂಜೀವಿ ಪರಶುರಾಮನಾಗಿ ನಟಿಸಿದ್ದಾರೆ. ಕೆಲ ತಿಂಗಳ ಹಿಂದೆ ಈ ಚಿತ್ರದ ಫಸ್ಟ್ ಲುಕ್‌ಗೆ ಪ್ರೇಕ್ಷಕರು ಮೆಚ್ಚುಗೆ ವ್ಯಕ್ತಪಡಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.