
ಇಕೋ ಚಿತ್ರತಂಡ
ಈ ವಾರ ಮತ್ತೊಂದು 'ಇಕೋ' (EKO) ಎಂಬ ವರ್ಲ್ಡ್ ಕ್ಲಾಸ್ ಮಲಯಾಳಂ ಸಿನಿಮಾವನ್ನ ರಿಲೀಸ್ ಮಾಡಿದೆ. ಅತ್ಯತ್ತಮ ವಿಮರ್ಶೆಗಳನ್ನು ಪಡೆದಿರುವ ಇಕೋ ಸಿನಿಮಾ ಲೋಕಾ ತರಹನೇ ದೊಡ್ಡ ಯಶಸ್ಸಿನತ್ತ ದಾಪುಗಾಲು ಇಡುತ್ತಿದೆ. ವಾರಾಂತ್ಯದಲ್ಲಿ ಕರ್ನಾಟಕದಲ್ಲಿ ಹೌಸ್ ಫುಲ್ ಪ್ರದರ್ಶನಗಳನ್ನ ಕಂಡಿದೆ.
ಇಕೋ ಚಿತ್ರತಂಡ
ಈ ಮೂಲಕ ಲೈಟರ್ ಬುದ್ದ ಫಿಲಂಸ್ ಈ ವರ್ಷ ಮುಟ್ಟಿದ್ದೆಲ್ಲಾ ಚಿನ್ನವಾಗಿದೆ. ‘ಸು ಫ್ರಮ್ ಸೋ’ ನಿರ್ಮಿಸಿದ ಉದ್ಯಮದಲ್ಲಿ ದಾಖಲೆಯ ಯಶಸ್ಸು ಗಳಿಸಿ, ಲೋಕಾ ವಿತರಿಸಿ ದೊಡ್ಡ ಯಶಸ್ಸು ಕಂಡು, ಈಗ ವರ್ಷಾಂತ್ಯದಲ್ಲಿ ‘ಇಕೋ’ ಚಿತ್ರದೊಂದಿಗೆ 2025ರಲ್ಲಿ ಮೂರು ಸೂಪರ್ ಹಿಟ್ ಸಿನಿಮಾಗಳನ್ನು ಕೊಟ್ಟ ಹೆಗ್ಗಳಿಕೆಗೆ ಪಾತ್ರವಾಗುತ್ತಿದೆ.
ಇಕೋ ಚಿತ್ರತಂಡ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.