ADVERTISEMENT

ಧನುಷ್‌ ಅಭಿಮಾನಿಗಳಿಗೆ ಸಿಹಿಸುದ್ದಿ: ಹೊಸ ಸಿನಿಮಾ ಘೋಷಣೆ

ಪಿಟಿಐ
Published 15 ಜನವರಿ 2026, 9:58 IST
Last Updated 15 ಜನವರಿ 2026, 9:58 IST
<div class="paragraphs"><p>ತಮಿಳಿನ ಸ್ಟಾರ್‌ ನಟ ಧನುಷ್</p></div>

ತಮಿಳಿನ ಸ್ಟಾರ್‌ ನಟ ಧನುಷ್

   

ವಿಘ್ನೇಶ್ ರಾಜ ನಿರ್ದೇಶನದಲ್ಲಿ ತಮಿಳಿನ ಸ್ಟಾರ್‌ ನಟ ಧನುಷ್ ಅವರ ಹೊಸ ಚಿತ್ರ ಘೋಷಣೆಯಾಗಿದೆ. ಸಿನಿಮಾಕ್ಕೆ ‘ಕರಾ’ ಎಂದು ಹೆಸರು ಇಡಲಾಗಿದೆ.

ಈ ಕುರಿತು ಮಾಹಿತಿ ಹಂಚಿಕೊಂಡಿರುವ ನಿರ್ದೇಶಕ ವಿಘ್ನೇಶ್, ಸಂಕ್ರಾಂತಿಯ ಹಬ್ಬದಂದು ಅಭಿಮಾನಿಗಳಿಗೆ ಸಿಹಿ ಸುದ್ಧಿ ನೀಡಿದ್ದಾರೆ.

ADVERTISEMENT

ಸಾಮಾಜಿಕ ಮಾಧ್ಯಮದಲ್ಲಿ ನಿರ್ದೇಶಕ ವಿಘ್ನೇಶ್, ಧನುಷ್‌ ಅವರ ಫಸ್ಟ್‌ ಲುಕ್‌ ಪೋಸ್ಟರ್ ಹಂಚಿಕೊಂಡಿದ್ದಾರೆ. ಆದರೆ ಸಿನಿಮಾ ಕಥೆಯ ಬಗ್ಗೆ ಬಹಿರಂಗಪಡಿಸಿಲ್ಲ.

2023ರಲ್ಲಿ ಇವರ ನಿರ್ದೇಶನದಲ್ಲಿ ಮೂಡಿಬಂದಿದ್ದ ಕ್ರೈಮ್ ಥ್ರಿಲ್ಲರ್ ಸಿನಿಮಾ ‘ಪೋರ್ ತೋಝಿಲ್‘ ಎಲ್ಲೆಡೆ ಮೆಚ್ಚಗೆಯನ್ನು ಗಳಿಸಿತ್ತು. ಇದೀಗ ‘ಕರಾ’ ಸಿನಿಮಾ ಇಶಾರಿ ಕೆ. ಗಣೇಶ್ ಅವರ ವೆಲ್ಸ್ ಫಿಲ್ಮ್ ಇಂಟರ್‌ನ್ಯಾಷನಲ್ ಬ್ಯಾನರ್ ಅಡಿ ನಿರ್ಮಾಣವಾಗಲಿದೆ.

ರಾಷ್ಟ್ರ ಪ್ರಶಸ್ತಿ ವಿಜೇತ ಜಿವಿ ಪ್ರಕಾಶ್ ಕುಮಾರ್ ಅವರ ಸಂಗೀತ ಚಿತ್ರಕ್ಕಿರಲಿದೆ. ಈ ವರ್ಷ ಬೇಸಿಗೆಯಲ್ಲಿ ಸಿನಿಮಾ ಬಿಡುಗಡೆ ಕಾಣುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.

2025ರಲ್ಲಿ ಧನುಷ್ ಅವರ ‘ಕುಬೇರ’, ‘ಇಡ್ಲಿ ಕಡಾಯಿ’ ಹಾಗೂ ‘ತೇರೆ ಇಷ್ಕ್ ಮೆ’ ಸಿನಿಮಾಗಳು ಬಿಡುಗಡೆಯಾಗಿವೆ. ಈ ವರ್ಷ ಅವರು ‘ಕರಾ’ ಹಾಗೂ ಎಪಿಜೆ ಅಬ್ದುಲ್ ಕಲಾಂ ಅವರ ಜೀವನವನ್ನು ಆಧರಿಸಿದ ‘ಕಲಾಂ: ದಿ ಮಿಸೈಲ್ ಮ್ಯಾನ್ ಆಫ್ ಇಂಡಿಯಾ’ ಸಿನಿಮಾಗಳಲ್ಲಿ ನಟಿಸಲಿದ್ದಾರೆ ಎಂದು ವರದಿಯಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.