ADVERTISEMENT

Marnami Movie: ನಟ ರಿತ್ವಿಕ್ ಮಠದ್ ಅಭಿನಯ ‘ಮಾರ್ನಮಿ’ ನ.21ಕ್ಕೆ ತೆರೆಗೆ

​ಪ್ರಜಾವಾಣಿ ವಾರ್ತೆ
Published 14 ಅಕ್ಟೋಬರ್ 2025, 23:30 IST
Last Updated 14 ಅಕ್ಟೋಬರ್ 2025, 23:30 IST
ಮಾರ್ನಮಿ ಸಿನಿಮಾ ಪೋಸ್ಟರ್‌ 
ಮಾರ್ನಮಿ ಸಿನಿಮಾ ಪೋಸ್ಟರ್‌    

ರಿಶಿತ್ ಶೆಟ್ಟಿ ನಿರ್ದೇಶನದ ‘ಮಾರ್ನಮಿ’ ಚಿತ್ರ ನ.21ರಂದು ತೆರೆಕಾಣಲಿದೆ.

‘ಗಿಣಿರಾಮ’, ‘ನಿನಗಾಗಿ’ ಧಾರಾವಾಹಿಗಳ ಮೂಲಕ ಖ್ಯಾತಿ ಪಡೆದಿರುವ ನಟ ರಿತ್ವಿಕ್ ಮಠದ್ ಈ ಸಿನಿಮಾದಲ್ಲಿ ನಾಯಕನಾಗಿ ರಗಡ್‌ ಅವತಾರವೆತ್ತಿದ್ದಾರೆ. ಶೀಘ್ರದಲ್ಲೇ ಸಿನಿಮಾದ ಟ್ರೇಲರ್‌ ಬರಲಿದೆ. ನಿಶಾಂತ್‌ ಈ ಸಿನಿಮಾ ನಿರ್ಮಾಣ ಮಾಡಿದ್ದು, ಚಿತ್ರದಲ್ಲಿ ನಾಯಕಿಯಾಗಿ ಚೈತ್ರಾ ಜೆ.ಆಚಾರ್‌ ನಟಿಸಿದ್ದಾರೆ. ದಸರಾ ಸುತ್ತಮುತ್ತ ಚಿತ್ರದ ಕಥೆಯಿದ್ದು, ಗ್ಯಾಂಗ್‌ಗಳ ನಡುವಿನ ಗಲಾಟೆ, ಅದರ ನಡುವೆಯೊಂದು ಪ್ರೇಮಕಥೆ ಸಿನಿಮಾದಲ್ಲಿದೆ. ‘ದೀಕ್ಷಾ’ ಎನ್ನುವ ಪಾತ್ರದಲ್ಲಿ ಚೈತ್ರಾ ಕಾಣಿಸಿಕೊಂಡಿದ್ದಾರೆ.  

ರಿಶಿತ್ ಶೆಟ್ಟಿ ಈ ಚಿತ್ರಕ್ಕೆ ಚಿತ್ರಕಥೆ ಹಾಗೂ ಸಂಭಾಷಣೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ.  ಸುಮನ್ ತಲ್ವಾರ್, ಪ್ರಕಾಶ್ ತುಮಿನಾಡು, ಸೋನು ಗೌಡ, ಜ್ಯೋತೀಶ್ ಶೆಟ್ಟಿ, ರೋಚಿತ್, ಸ್ವರಾಜ್ ಶೆಟ್ಟಿ, ಮೈಮ್ ರಾಮದಾಸ್ ಹಾಗೂ ಚೈತ್ರಾ ಶೆಟ್ಟಿ ಸೇರಿದಂತೆ ಹಲವರು ತಾರಾಬಳಗದಲ್ಲಿದ್ದಾರೆ. ಶಿವಸೇನ ಛಾಯಾಚಿತ್ರಗ್ರಹಣ, ಚರಣ್‌ರಾಜ್ ಸಂಗೀತ ಸಂಯೋಜನೆ ಚಿತ್ರಕ್ಕಿದೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.