ADVERTISEMENT

ಮಿ–ಟೂ: ಹೃತಿಕ್ ರೋಷನ್ ಶಿಕ್ಷೆಗೆ ಅರ್ಹ ವ್ಯಕ್ತಿ ಎಂದ ಕಂಗನಾ 

ಜೀ ನ್ಯೂಸ್‌ಗೆ ನೀಡಿದ ಸಂದರ್ಶನದಲ್ಲಿ ಕಿಡಿ

ಏಜೆನ್ಸೀಸ್
Published 12 ಅಕ್ಟೋಬರ್ 2018, 9:01 IST
Last Updated 12 ಅಕ್ಟೋಬರ್ 2018, 9:01 IST
   

ಮಿ ಟೂ ಅಭಿಯಾನಕ್ಕೆ ಬೆಂಬಲ ಸೂಚಿಸಿರುವ ನಟಿ ಕಂಗನಾರನೋಟ್‌ ಈ ಮೂಲಕ ಪುನಃ ನಟ ಹೃತಿಕ್ ರೋಷನ್ ಮೇಲೆ ಕೆಂಡಕಾರಿದ್ದಾರೆ.

ಸಿನಿಮಾ ವಲಯದಲ್ಲಿ ಯಾರೊಬ್ಬರೂ ನಟ ಹೃತಿಕ್ ರೋಷನ್ ಜತೆ ಕೆಲಸ ಮಾಡಬಾರದು. ಮಿಟೂ ಅಭಿಯಾನದ ಅಡಿಯಲ್ಲಿ ಹೃತಿಕ್ ಶಿಕ್ಷೆಗೆ ಅರ್ಹ ವ್ಯಕ್ತಿ ಎಂದು ಜೀನ್ಯೂಸ್‌ಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ ಎಂದು ಹಿಂದೂಸ್ತಾನ್ ಟೈಮ್ಸ್ ವರದಿ ಮಾಡಿದೆ

ನಿರ್ದೇಶಕ ವಿಕಾಸ್ ಬಾಹ್ಲ್‌ ಕೇಳಿ ಬಂದಿರುವ ಎಲ್ಲಾ ಆರೋಪಗಳು ಸತ್ಯವಾಗಿವೆ. ಮಹಿಳೆಯರ ಜೊತೆ ಅಸಭ್ಯವಾಗಿ ವರ್ತಿಸುವ ಸಾಕಷ್ಟು ಮಂದಿ ನಮ್ಮ ಕ್ಷೇತ್ರದಲ್ಲಿದ್ದಾರೆ. ದೌರ್ಜನ್ಯ ಎಸಗುತ್ತಾರೆ, ಕಿರುಕುಳ ನೀಡುತ್ತಾರೆ. ಇಂತಹವರನ್ನು ಶಿಕ್ಷಿಸಲೇಬೇಕು ಎಂದು ಕಿಡಿಕಾರಿದ್ದಾರೆ.

ADVERTISEMENT

ಹೃತಿಕ್ ರೋಷನ್ ಅವರ ನಿದರ್ಶನದೊಂದಿಗೆ ಮಾತನಾಡಿದ ಕಂಗನಾ, ಕೆಲವು ಮಂದಿ ತಮ್ಮ ಪತ್ನಿಯರನ್ನು ಟ್ರೋಫಿಗಳ ರೀತಿಯಲ್ಲಿ ಇಟ್ಟುಕೊಳ್ಳುತ್ತಾರೆ. ಯುವತಿಯರನ್ನು ಪತ್ನಿಯರ ರೀತಿ ಸತ್ಕರಿಸುತ್ತಾರೆ. ಅಂತಹವರಿಗೆ ಶಿಕ್ಷೆಯಾಗಬೇಕು ಎಂದಿದ್ದಾರೆ.

ಇವರ ಈ ಮಾತಿಗೆ ಹೃತಿಕ್ ರೋಷನ್ ಇದುವರೆಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.