ADVERTISEMENT

OTTಗೆ ಲಗ್ಗೆ ಇಟ್ಟ ಬಹುನಿರೀಕ್ಷಿತ ಮಿರಾಯ್ ಸಿನಿಮಾ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 10 ಅಕ್ಟೋಬರ್ 2025, 6:07 IST
Last Updated 10 ಅಕ್ಟೋಬರ್ 2025, 6:07 IST
<div class="paragraphs"><p>ಚಿತ್ರ ಕೃಪೆ:&nbsp;&nbsp;<a href="https://x.com/JioHotstarTel_">@JioHotstarTel_</a></p></div>

ಚಿತ್ರ ಕೃಪೆ:  @JioHotstarTel_

   

ಕಾರ್ತಿಕ್ ಘಟ್ಟಮನೇನಿ ನಿರ್ದೇಶನದ ‘ಮಿರಾಯ್‘ ಚಿತ್ರವು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿ ಸಖತ್ ಸದ್ದು ಮಾಡಿತ್ತು. ಇದೀಗ ಈ ಸಿನಿಮಾ ಇಂದಿನಿಂದ (ಅಕ್ಟೋಬರ್ 10) ಒಟಿಟಿಯಲ್ಲಿ ಬಿಡುಗಡೆಗೊಂಡಿದೆ. ಜಿಯೋಹಾಟ್‌ಸ್ಟಾರ್‌ ಇದರ ಪ್ರಾಯೋಜಕತ್ವ ಪಡೆದುಕೊಂಡಿದೆ.

ಒಟಿಟಿಯಲ್ಲಿ ಬಿಡುಗಡೆಯಾಗಿರುವ ಈ ಮಿರಾಯ್ ಚಿತ್ರ ಸದ್ಯ ಕನ್ನಡ ತೆಲುಗು, ತಮಿಳು ಮತ್ತು ಮಲಯಾಳಂ ಭಾಷೆಗಳಲ್ಲಿ ಲಭ್ಯವಿದೆ ಎಂದು ಚಿತ್ರತಂಡ ಮಾಹಿತಿ ನೀಡಿದೆ.

ADVERTISEMENT

ಹನುಮಾನ್ ಚಿತ್ರದ ಮೂಲಕ ಜನಪ್ರಿಯತೆ ಪಡೆದುಕೊಂಡಿದ್ದ ತೇಜ ಸಜ್ಜಾ ಅವರು ಈ ಸಿನಿಮಾದ ಮೂಲಕ ಇನ್ನಷ್ಟು ಪ್ರೇಕ್ಷಕರ ಗಮನ ಸೆಳೆದಿದ್ದಾರೆ.

ವಿಶ್ವ ಪ್ರಸಾದ್, ಕೃತಿ ಪ್ರಸಾದ್ ಮತ್ತು ವಿವೇಕ್ ಕುಚಿಬೋಟ್ಲಾ ಅವರು ಪೀಪಲ್ ಮೀಡಿಯಾ ಫ್ಯಾಕ್ಟರಿ ನಿರ್ಮಾಣದ ಅಡಿಯಲ್ಲಿ ‘ಮಿರಾಯ್' ಚಿತ್ರವನ್ನು ನಿರ್ಮಿಸಿದ್ದಾರೆ. ಮಂಚು ಮನೋಜ್, ರಿತಿಕಾ ನಾಯಕ್, ಶ್ರಿಯಾ ಸರನ್, ಜಯರಾಮ್, ಮತ್ತು ಜಗಪತಿ ಬಾಬು ಅನೇಕರು ನಟಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.