ADVERTISEMENT

ಸಂಗೀತ ನಿರ್ದೇಶಕ ಕೋಟಿ ಪುತ್ರ ರಾಜೀವ್‌ಸಲೂರಿ ಅಭಿನಯದ 11:11 ಶೀರ್ಷಿಕೆ ಅನಾವರಣ

​ಪ್ರಜಾವಾಣಿ ವಾರ್ತೆ
Published 17 ನವೆಂಬರ್ 2021, 7:24 IST
Last Updated 17 ನವೆಂಬರ್ 2021, 7:24 IST
11:11 ಶೀರ್ಷಿಕೆ ಅನಾವರಣ ಕಾರ್ಯಕ್ರಮದಲ್ಲಿ ವರ್ಷಾ ವಿಶ್ವನಾಥ್‌, ಚಿರಂಜೀವಿ ಮತ್ತು ರಾಜೀವ್‌ ಸಲೂರಿ
11:11 ಶೀರ್ಷಿಕೆ ಅನಾವರಣ ಕಾರ್ಯಕ್ರಮದಲ್ಲಿ ವರ್ಷಾ ವಿಶ್ವನಾಥ್‌, ಚಿರಂಜೀವಿ ಮತ್ತು ರಾಜೀವ್‌ ಸಲೂರಿ   

ಖ್ಯಾತ ಸಂಗೀತ ನಿರ್ದೇಶಕ ಕೋಟಿ ಅವರ ಪುತ್ರ ರಾಜೀವ್‌ಸಲೂರಿ ಬೆಳ್ಳಿತೆರೆಗೆ ಕಾಲಿಟ್ಟಿದ್ದಾರೆ.

11:11 ಅವರ ಹೊಸ ಚಿತ್ರ. ಟೈಗರ್‌ ಹಿಲ್ಸ್‌ ಮತ್ತು ಸ್ವಸ್ತಿಕಾ ಫಿಲ್ಮ್ಸ್‌ ಬ್ಯಾನರ್‌ ಅಡಿ ಗಾಜುಲ ವೀರೇಶ್‌ ಅವರು ಈ ಚಿತ್ರ ನಿರ್ಮಿಸುತ್ತಿದ್ದಾರೆ. ಅವರ ಜೊತೆ ಗಾಳಿ ಸಂದೀಪ್‌ ಕೈಜೋಡಿಸಿದ್ದಾರೆ.

ಮೆಗಾಸ್ಟಾರ್‌ ಚಿರಂಜೀವಿ ಅವರು ಚಿತ್ರದ ಫಸ್ಟ್‌ಲುಕ್‌ ಬಿಡುಗಡೆ ಮಾಡಿದರು.

ADVERTISEMENT

ಫಸ್ಟ್‌ಲುಕ್‌ ಬಗ್ಗೆ ಮಾತನಾಡಿದ ಚಿರಂಜೀವಿ, ‘ನಾಯಕ ಸ್ಟೈಲಿಶ್ ಆಗಿ ಸೂಟ್‌ಕೇಸ್‌ನ್ನು ಹಿಡಿದುಕೊಂಡಿರುವ ಫಸ್ಟ್ ಲುಕ್ ನೋಡಿದರೆ, ವಿನೂತನ ಕತೆ ಹಾಗೂ ತಾಂತ್ರಿಕ ಗುಣಮಟ್ಟ ತೋರಿಸಿದೆ’ ಎಂದು ಹೇಳಿದರು.

ಚಿತ್ರ ಪ್ಯಾನ್‌ ಇಂಡಿಯಾ ಆಗಿ ಮೂಡಿಬರಲಿದೆ. ವರ್ಷಾ ವಿಶ್ವನಾಥ್‌ ನಾಯಕಿ. ಸದನ್, ಲಾವಣ್ಯ, ರಾಜ ರವೀಂದ್ರ, ರಾಜಶ್ರೀ ತಾರಾಗಣದಲ್ಲಿದ್ದಾರೆ. ಮಲೋಡಿ ಕಿಂಗ್ ಮಣಿಶರ್ಮ ಸಂಗೀತವಿದೆ. ಈಶ್ವರ್ ಅವರ ಛಾಯಾಗ್ರಹಣ, ರವಿಮನ್ಲ ಸಂಕಲನ, ಸಂಭಾಷಣೆ ಪವನ್‌ ಕೆ.ಅಚಲ ಅವರದ್ದು. ತ್ವರಿತವಾಗಿ ಚಿತ್ರೀಕರಣ ನಡೆಸಲು ತಂಡವು ಯೋಜನೆ ಹಾಕಿಕೊಂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.