ADVERTISEMENT

ನಾನುಮ್ ರೌಡಿ ಧಾನ್ ವಿವಾದ: ನಯನತಾರಾ ದಂಪತಿ ವಿರುದ್ಧ ಕೋರ್ಟ್ ಮೆಟ್ಟಿಲೇರಿದ ಧನುಷ್

ಇ.ಟಿ.ಬಿ ಶಿವಪ್ರಿಯನ್‌
Published 27 ನವೆಂಬರ್ 2024, 14:09 IST
Last Updated 27 ನವೆಂಬರ್ 2024, 14:09 IST
<div class="paragraphs"><p>ಧನುಷ್ ಮತ್ತು ನಯನತಾರಾ</p></div>

ಧನುಷ್ ಮತ್ತು ನಯನತಾರಾ

   

ಚೆನ್ನೈ: ನಟಿ ನಯನತಾರಾ ಅವರ ಬದುಕನ್ನು ಆಧರಿಸಿ ನೆಟ್‌ಫ್ಲಿಕ್ಸ್‌ನಲ್ಲಿ ಪ್ರಸಾರವಾಗುತ್ತಿರುವ ಸಾಕ್ಷ್ಯಚಿತ್ರದಲ್ಲಿ (Nayanthara: Beyond the Fairytale) ತಮ್ಮ ʼನಾನುಮ್‌ ರೌಡಿ ಧಾನ್‌ʼ ಚಿತ್ರದ ದೃಶ್ಯ ಬಳಸಿರುವುದು ಹಕ್ಕ ಸ್ವಾಮ್ಯ ಉಲ್ಲಂಘನೆ ಎಂದು ಆರೋಪಿಸಿ ನಟ ಧನುಷ್‌ ಅವರು ನಯನತಾರಾ ಹಾಗೂ ಅವರ ಪತಿ ವಿಘ್ನೇಶ್‌ ಶಿವನ್‌ ವಿರುದ್ಧ ಮದ್ರಾಸ್‌ ಹೈಕೋರ್ಟ್‌ ಮೆಟ್ಟಿಲೇರಿದ್ದಾರೆ.

2015ರಲ್ಲಿ ಬಿಡುಗಡೆಯಾಗಿದ್ದ 'ನಾನುಮ್ ರೌಡಿ ಧಾನ್ʼ ಚಿತ್ರವನ್ನು ವಂಡರ್ ಬಾರ್ ಫಿಲ್ಮ್ ಸಂಸ್ಥೆಯ ಬ್ಯಾನರ್ ಅಡಿಯಲ್ಲಿ ಧನುಷ್ ನಿರ್ಮಿಸಿದ್ದರು. ಚಿತ್ರದಲ್ಲಿ ನಯನತಾರಾ ನಾಯಕಿಯಾಗಿ ಕಾಣಿಸಿಕೊಂಡಿದ್ದರು. ಆದರೆ, ನಯನತಾರಾ ಕುರಿತಾದ ಸಾಕ್ಷ್ಯಚಿತ್ರದಲ್ಲಿ ತಮ್ಮ ಅನುಮತಿ ಪಡೆಯದೆ 'ನಾನುಮ್ ರೌಡಿ ಧಾನ್ʼ ಚಿತ್ರದ ತುಣುಕನ್ನು ಬಳಸಲಾಗಿದೆ ಎಂಬುದು ಧನುಷ್‌ ಅವರ ಆರೋಪ.

ADVERTISEMENT

ಇದೇ ಪ್ರಕರಣ ಸಂಬಂಧ ಕೆಲವು ದಿನಗಳ ಹಿಂದೆ ₹10 ಕೋಟಿಗೆ ಬೇಡಿಕೆ ಇಟ್ಟು ನಯನತಾರಾ ಅವರಿಗೆ ಧನುಷ್ ಲೀಗಲ್ ನೋಟಿಸ್ ಕಳುಹಿಸಿದ್ದರು. ಈ ಕುರಿತು ನಯನತಾರಾ ಕೆಂಡಾಮಂಡಲರಾಗಿದ್ದರು.

‘ನಾನುಮ್ ರೌಡಿ ಧಾನ್’ ಚಿತ್ರದ ದೃಶ್ಯಗಳನ್ನು ಬಳಕೆ ಮಾಡಲು ಧನುಷ್ ಅವರಲ್ಲಿ ಅನುಮತಿ ಕೇಳಿದ್ದೆ. ಆದರೆ ಎಲ್ಲ ಪ್ರಯತ್ನಗಳು ವಿಫಲವಾದವು. ಧನುಷ್ ಅನುಮತಿ ನಿರಾಕರಿಸಿದ್ದರಿಂದ ಸಾಕ್ಷ್ಮಚಿತ್ರವನ್ನು ಮರು ಚಿತ್ರೀಕರಿಸಿರುವುದಾಗಿ ನಯನತಾರಾ ತಿಳಿಸಿದ್ದರು.

ಪ್ರೀತಿ ಹಾಗೂ ಮದುವೆ ಸೇರಿದಂತೆ ಜೀವನದ ಅಮೂಲ್ಯ ಕ್ಷಣಗಳ ಸಾಕ್ಷ್ಯಚಿತ್ರದಲ್ಲಿ ಬಳಸಲಾದ ದೃಶ್ಯಗಳನ್ನು ಜನರ ಫೋನ್‌ಗಳಿಂದ ಚಿತ್ರೀಕರಿಸಲಾಗಿದೆ ಎಂದು ನಯನತಾರಾ ಸ್ಪಷ್ಟಪಡಿಸಿದ್ದರು.

ಅಭಿಮಾನಿಗಳು ನೋಡಿದ ಧನುಷ್ ಬೇರೆ... ಅಸಲಿ ಧನುಷ್ ಬೇರೆಯೇ ಆಗಿದ್ದಾರೆ. ಇಷ್ಟು ಕೀಳುಮಟ್ಟಕ್ಕೆ ಇಳಿದಿದ್ದಾರೆ ಎಂದು ನಯನತಾರಾ ವಾಗ್ದಾಳಿ ನಡೆಸಿದ್ದರು.

ಸಿನಿಮಾದಲ್ಲಿ ಯಾವುದೇ ಹಿನ್ನೆಲೆಯಿಲ್ಲದೆ, ಒಂಟಿ ಮಹಿಳೆಯಾಗಿ ಈ ಮಟ್ಟಕ್ಕೆ ಬೆಳೆದು ಬಂದಿದ್ದೇನೆ. ಅಭಿಮಾನಿಗಳ ಬೆಂಬಲದಿಂದ ಈ ಹಂತಕ್ಕೆ ತಲುಪಿದ್ದೇನೆ. ಧನುಷ್ ಅವರ ಲೀಗಲ್ ನೋಟಿಸ್‌ಗೆ ತಕ್ಕ ಪ್ರತ್ಯುತ್ತರ ನೀಡುತ್ತೇನೆ ಎಂದಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.