ADVERTISEMENT

ಕಡೆಗೂ ಬೇರೆ ಬೇರೆಯಾದ ನಾಗ ಚೈತನ್ಯ ಹಾಗೂ ಸಮಂತಾ: ಡಿವೋರ್ಸ್ ಘೋಷಣೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 2 ಅಕ್ಟೋಬರ್ 2021, 11:06 IST
Last Updated 2 ಅಕ್ಟೋಬರ್ 2021, 11:06 IST
ನಾಗ ಚೈತನ್ಯ ಹಾಗೂ ಸಮಂತಾ
ನಾಗ ಚೈತನ್ಯ ಹಾಗೂ ಸಮಂತಾ   

ಬೆಂಗಳೂರು: ತೆಲುಗು ಸಿನಿಮಾ ನಟ ನಾಗ ಚೈತನ್ಯ ಹಾಗೂ ಖ್ಯಾತ ನಟಿ ಸಮಂತಾ ನಡುವಿನ ದಾಂಪತ್ಯ ಮುರಿದು ಬಿದ್ದಿದೆ. ವಿಚ್ಛೇದನಪಡೆಯುದಾಗಿ ತಾರಾ ಜೋಡಿ ಶನಿವಾರಘೋಷಿಸಿದೆ.

ಸ್ವತಃ ಈ ವಿಷಯವನ್ನು ಇಂದು ಟ್ವಿಟರ್‌ನಲ್ಲಿ ಪ್ರಕಟಿಸಿರುವ ನಾಗ ಚೈತನ್ಯ, ‘ಹೆಚ್ಚು ಆಲೋಚನೆ ನಂತರ ಸಮಂತಾ ಮತ್ತು ನಾನು ನಮ್ಮ ಸ್ವಂತ ದಾರಿಯನ್ನು ಅನುಸರಿಸಲು ಹೆಜ್ಜೆ ಇಟ್ಟಿದ್ದೇವೆ. ಈ ಮೂಲಕ ಗಂಡ ಮತ್ತು ಹೆಂಡತಿಯಾಗಿ ಬೇರೆಯಾಗಲು ನಿರ್ಧರಿಸಿದ್ದೇವೆ‘ ಎಂದು ಘೋಷಿಸಿದ್ದಾರೆ.

‘ಒಂದು ದಶಕದ ಈ ಸ್ನೇಹವನ್ನು ಅನುಭವಿಸಲು ನಾವು ಅದೃಷ್ಟಶಾಲಿಯಾಗಿದ್ದೇವು. ಅದು ನಮ್ಮ ಸಂಬಂಧದ ತಳಹದಿ. ಯಾವಾಗಲೂ ನಮ್ಮ ನಡುವೆ ಅದು ವಿಶೇಷ ಬಾಂಧವ್ಯವನ್ನು ಹೊಂದಿರುತ್ತದೆ. ಈ ಕಷ್ಟದ ಸಮಯದಲ್ಲಿ ನಮ್ಮ ಅಭಿಮಾನಿಗಳು, ಹಿತೈಷಿಗಳು ಮತ್ತು ಮಾಧ್ಯಮಗಳು ನಮ್ಮನ್ನು ಬೆಂಬಲಿಸಬೇಕು‘ ಎಂದು ನಾಗ ಚೈತನ್ಯ ಧನ್ಯವಾದ ಸಲ್ಲಿಸಿ ಟ್ವೀಟ್ ಮಾಡಿದ್ದಾರೆ.

ADVERTISEMENT

ಅಲ್ಲದೇ ನಮ್ಮ ಖಾಸಗಿತನ ಗೌರವಿಸಬೇಕು ಎಂದು ಅಭಿಮಾನಿಗಳಿಗೆ ಹಾಗೂ ಮಾಧ್ಯಮಗಳಿಗೆಮನವಿ ಮಾಡಿದ್ದಾರೆ. 2017 ರಲ್ಲಿ ನಾಗ ಚೈತನ್ಯ ಹಾಗೂ ಸಮಂತಾ ಅದ್ಧೂರಿಯಾಗಿ ಮದುವೆಯಾಗಿದ್ದರು.

ಸಮಂತಾ ಕೂಡ ಇನ್‌ಸ್ಟಾಗ್ರಾಂನಲ್ಲಿ ನಾಗ ಚೈತನ್ಯ ಹಾಕಿರುವ ಪೋಸ್ಟ್‌ನ್ನೇ ಹಾಕಿವಿಚ್ಚೇದನವನ್ನು ಖಚಿತಪಡಿಸಿದ್ದಾರೆ.ಕಳೆದ ಕೆಲವು ತಿಂಗಳಿನಿಂದ ಸಮಂತಾ ಹಾಗೂ ನಾಗಚೈತನ್ಯವಿಚ್ಚೇದನ ಪಡೆದುಕೊಳ್ಳಲಿದ್ದಾರೆ ಎಂಬ ವದಂತಿ ದಕ್ಷಿಣ ಭಾರತ ಚಿತ್ರರಂಗದಲ್ಲಿ ಜೋರಾಗಿ ನಡೆದಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.