ADVERTISEMENT

ವಿಭಿನ್ನ ಲುಕ್‌ನಲ್ಲಿ ನಾನಿ: ‘ದಿ ಪ್ಯಾರಡೈಸ್’ ಚಿತ್ರ ಮುಂದಿನ ವರ್ಷ ತೆರೆಗೆ

​ಪ್ರಜಾವಾಣಿ ವಾರ್ತೆ
Published 28 ಜೂನ್ 2025, 11:41 IST
Last Updated 28 ಜೂನ್ 2025, 11:41 IST
<div class="paragraphs"><p>‘ದಿ ಪ್ಯಾರಡೈಸ್’ ಚಿತ್ರದ ಪೋಸ್ಟರ್</p></div>

‘ದಿ ಪ್ಯಾರಡೈಸ್’ ಚಿತ್ರದ ಪೋಸ್ಟರ್

   

ಮುಂಬೈ: ದಸರಾ ಚಿತ್ರದ ಬಳಿಕ ಮತ್ತೆ ಅದೇ ಚಿತ್ರತಂಡದೊಂದಿಗೆ ಸಿನಿಮಾ ಮಾಡಲು ಮುಂದಾಗಿರುವ ತೆಲುಗು ನಟ ನ್ಯಾಚುರಲ್‌ ಸ್ಟಾರ್‌ ನಾನಿ, ದಿ ಪ್ಯಾರಡೈಸ್ ಸಿನಿಮಾದ ಚಿತ್ರೀಕರಣವನ್ನು ಆರಂಭಿಸಿದ್ದಾರೆ. ಈ ಮೂಲಕ ವಿಭಿನ್ನ ಪಾತ್ರದಲ್ಲಿ ತೆರೆ ಮೇಲೆ ಬರಲಿದ್ದಾರೆ.

2023ರಲ್ಲಿ ಬಿಡುಗಡೆಯಾದ ದಸರಾ ಚಿತ್ರಕ್ಕೆ ಆ್ಯಕ್ಷನ್‌ ಕಟ್‌ ಹೇಳಿರುವ ನಿರ್ದೇಶಕ ಶ್ರೀಕಾಂತ್ ಒಡೆಲಾ ಅವರು ಈ ಚಿತ್ರಕ್ಕೆ ನಿರ್ದೇಶನದ ಜತೆಗೆ ಚಿತ್ರಕಥೆಯನ್ನು ಬರೆದಿದ್ದಾರೆ.

ADVERTISEMENT

ಇಂದು (ಶನಿವಾರ) ನಾನಿ ಚಿತ್ರೀಕರಣದಲ್ಲಿ ಭಾಗಿದ್ದಾರೆ. ಈ ಸಂಬಂಧ ಚಿತ್ರತಂಡ ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್‌ ಹಂಚಿಕೊಂಡಿದೆ. 2026ರ ಮಾರ್ಚ್‌ 26ರಂದು ಚಿತ್ರ ಬಿಡುಗಡೆಯಾಗಲಿದೆ.

ಈ ಹಿಂದೆ ಬಿಡುಗಡೆಯಾಗಿದ್ದ ‘ದಿ ಪ್ಯಾರಡೈಸ್’ ಸಿನಿಮಾದ ಮೊದಲ ಟೀಸರ್‌ನಲ್ಲಿ ಮಾಸ್ ರೂಪದಲ್ಲಿ ನಾನಿ ಕಾಣಿಸಿಕೊಂಡಿದ್ದಾರೆ. ಹಿಂದೆಂದೂ ಕಾಣದ ಹೊಸ ಲುಕ್‌ನಲ್ಲಿ ನಾನಿ ಪ್ರತ್ಯಕ್ಷರಾಗಲಿದ್ದಾರೆ ಎಂದಿದೆ ಚಿತ್ರತಂಡ

‘ದಸರಾ’ ಸಿನಿಮಾ ನಿರ್ಮಿಸಿದ್ದ ಸುಧಾಕರ್ ಚೆರುಕುರಿ ಈ ಚಿತ್ರದ ನಿರ್ಮಾಣದ ಜವಾಬ್ದಾರಿಯನ್ನು ಹೊತ್ತಿದ್ದಾರೆ. ಈ ಚಿತ್ರಕ್ಕೆ ಅನಿರುದ್ಧ ರವಿಚಂದರ್‌ ಸಂಗೀತ ನಿರ್ದೇಶನ, ಜಿ.ಕೆ.ವಿಷ್ಣು ಛಾಯಾಗ್ರಹಣ, ನವೀನ್ ನೂಲಿ ಸಂಕಲನ ಇದೆ. ಪ್ಯಾನ್ ಇಂಡಿಯಾ ಮಟ್ಟದಲ್ಲಿ ಚಿತ್ರ ಮೂಡಿಬರಲಿದ್ದು, ತೆಲುಗು, ಹಿಂದಿ, ತಮಿಳು, ಕನ್ನಡ, ಮಲಯಾಳಂ, ಬಂಗಾಳಿ, ಇಂಗ್ಲಿಷ್ ಮತ್ತು ಸ್ಪ್ಯಾನಿಷ್ ಭಾಷೆಗಳಲ್ಲಿ ಬಿಡುಗಡೆಯಾಗಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.