ADVERTISEMENT

ಉನ್ನಿ ಮುಕುಂದನ್ ಅಭಿನಯದ ಪ್ರಧಾನಿ ಮೋದಿ ಬಯೋಪಿಕ್ ‘ಮಾ ವಂದೇ’ ಚಿತ್ರೀಕರಣ ಆರಂಭ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 21 ಡಿಸೆಂಬರ್ 2025, 6:23 IST
Last Updated 21 ಡಿಸೆಂಬರ್ 2025, 6:23 IST
   

ನವದೆಹಲಿ: ಮಲಯಾಳ ನಟ ಉನ್ನಿ ಮುಕುಂದನ್ ಅಭಿನಯದ ‘ಮಾ ವಂದೇ’ ಸಿನಿಮಾದ ಚಿತ್ರೀಕರಣ ಆರಂಭವಾಗಿದೆ.

‘ಮಾ ವಂದೇ’ ಸಿನಿಮಾವು ಪ್ರಧಾನಿ ನರೇಂದ್ರ ಮೋದಿ ಅವರ ಜೀವನಾಧರಿತ ಚಲನಚಿತ್ರವಾಗಿದೆ.

ಚಿತ್ರೀಕರಣ ಆರಂಭಕ್ಕೂ ಮುನ್ನ ನಡೆದ ಪೂಜಾ ಕಾರ್ಯಕ್ರಮದ ಫೋಟೊ ಹಾಗೂ ವಿಡಿಯೊಗಳನ್ನು ಚಿತ್ರತಂಡವು ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದೆ.

ADVERTISEMENT

ಮಾ ವಂದೇ ಸಿನಿಮಾದ ಚಿತ್ರೀಕರಣ ಆರಂಭವಾಗಿದೆ. ರಾಷ್ಟ್ರದ ಭವಿಷ್ಯವನ್ನು ರೂಪಿಸಿದ ವ್ಯಕ್ತಿಯ ಕಥೆಯನ್ನು ಹೇಳಲು ಹೊಸ ಅಧ್ಯಾಯ ತೆರೆದುಕೊಳ್ಳಲಿದೆ ಎಂದು ಪೋಸ್ಟ್‌ನಲ್ಲಿ ಬರೆದುಕೊಂಡಿದೆ.

ರಾಷ್ಟ್ರೀಯತೆ, ಮಾತೃಪ್ರೇಮ ಹಾಗೂ ರಾಷ್ಟ್ರದ ಭವಿಷ್ಯವನ್ನು ರೂಪಿಸುವ ದೃಢಸಂಕಲ್ಪವನ್ನು ‘ಮಾ ವಂದೇ’ ಸಿನಿಮಾವು ಒಳಗೊಂಡಿದೆ. ಚಿತ್ರವು ಮೋದಿ ಅವರ ರಾಜಕೀಯ ಹಾಗೂ ಜೀವನದ ನೈಜ ಘಟನೆಗಳ ಕುರಿತಾಗಿದೆ ಎಂದು ಚಿತ್ರ ತಂಡವು ತಿಳಿಸಿದೆ.

ಪ್ರಧಾನಿ ನರೇಂದ್ರ ಮೋದಿ ಅವರ ಜನ್ಮದಿನದಂದು ಸಿನಿಮಾವನ್ನು ಘೋಷಣೆ ಮಾಡಲಾಗಿತ್ತು. ಚಿತ್ರವನ್ನು ಕ್ರಾಂತಿ ಕುಮಾರ್ ಸಿ.ಎಚ್‌ ನಿರ್ದೇಶನ ಮಾಡುತ್ತಿದ್ದು, ಸಿಲ್ವರ್ ಕಾಸ್ಟ್ ಕ್ರಿಯೇಶನ್ ನಿರ್ಮಿಸುತ್ತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.