
ನಟಿ ನಯನತಾರಾ, ವಿಘ್ನೇಶ್ ಶಿವನ್
ಚಿತ್ರ: ಇನ್‌ಸ್ಟಾಗ್ರಾಮ್
ದಕ್ಷಿಣ ಭಾರತದ ಲೇಡಿ ಸೂಪರ್ ಸ್ಟಾರ್ ನಯನತಾರಾ 41ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಈ ಹಿನ್ನೆಲೆಯಲ್ಲಿ ಅವರ ಪತಿ ವಿಘ್ನೇಶ್ ಶಿವನ್ ಅವರು ನಯನತಾರಾಗೆ ದುಬಾರಿ ಕಾರೊಂದನ್ನು ಉಡುಗೊರೆಯಾಗಿ ನೀಡಿದ್ದಾರೆ.
ಈ ಕುರಿತು ಸಾಮಾಜಿಕ ಮಾಧ್ಯಮ ಇನ್‌ಸ್ಟಾಗ್ರಾಮ್‌ನಲ್ಲಿ ಮಾಹಿತಿ ಹಂಚಿಕೊಂಡಿರುವ ವಿಘ್ನೇಶ್ ಶಿವನ್, ‘ಜನ್ಮದಿನದ ಶುಭಾಶಯಗಳು ನನ್ನ ಸ್ನೇಹಿತೆ ನಯನತಾರಾ. ನಿನ್ನನ್ನು ನಿಜವಾಗಿಯೂ ಹುಚ್ಚನಂತೆ ಪ್ರೀತಿಸುತ್ತೇನೆ. ಆಳವಾಗಿ ನಿನ್ನನ್ನು ಪ್ರೀತಿಸುತ್ತೇನೆ. ಮಕ್ಕಳಾದ ಉಯಿರ್, ಉಲಾಗ್ ಕಡೆಯಿಂದ ಹಾಗೂ ಹೃದಯಪೂರ್ವಕವಾಗಿ ಮತ್ತು ಪ್ರೀತಿ ತುಂಬಿದ ಜನರ ವತಿಯಿಂದ ಹುಟ್ಟುಹಬ್ಬದ ಶುಭಾಶಯಗಳು’ ಎಂದು ಬರೆದುಕೊಂಡಿದ್ದಾರೆ.
ನಯನತಾರಾ ಹುಟ್ಟುಹಬ್ಬದ ಪ್ರಯುಕ್ತ ನಿರ್ದೇಶಕ ವಿಘ್ನೇಶ್ ಶಿವನ್ ಅವರು ರೋಲ್ಸ್ ರಾಯ್ಸ್ ಬ್ಲ್ಯಾಕ್ ಬ್ಯಾಡ್ಜ್ ಸ್ಪೆಕ್ಟರ್ (Rolls-Royce Black Badge Spectre) ಕಾರನ್ನು ಉಡುಗೊರೆಯಾಗಿ ನೀಡಿದ್ದಾರೆ. ವಿಘ್ನೇಶ್ ಶಿವನ್ ಅವರು ಹೊಸ ಕಾರಿನ ಜೊತೆಗೆ ಕ್ಲಿಕ್ಕಿಸಿಕೊಂಡ ಚಿತ್ರಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ.
ಇನ್ನು, ಹುಟ್ಟುಹಬ್ಬದಂದೇ ನಟಿ ನಯನತಾರಾ ಅವರ ಮುಂದಿನ ಚಿತ್ರದ ಪೋಸ್ಟರ್ ಅನ್ನು ಚಿತ್ರತಂಡ ಬಿಡುಗಡೆ ಮಾಡಿತ್ತು. ತೆಲುಗು ನಟ ನಂದಮೂರಿ ಬಾಲಕೃಷ್ಣ ಜೊತೆ ಮುಂದಿನ ಸಿನಿಮಾದಲ್ಲಿ ನಟಿ ನಯನತಾರಾ ಅಭಿನಯಿಸುತ್ತಿದ್ದು, 7 ವರ್ಷಗಳ ನಂತರ ಈ ಜೋಡಿ ಮತ್ತೆ ಒಂದಾಗುತ್ತಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.