ADVERTISEMENT

ಶೋಗೆ ತಡವಾಗಿ ಬಂದ ನೇಹಾ ಕಕ್ಕರ್: ಪ್ರೇಕ್ಷಕರ ಬೊಬ್ಬೆಗೆ ಗಳಗಳನೆ ಅತ್ತ ಗಾಯಕಿ

ಪಿಟಿಐ
Published 25 ಮಾರ್ಚ್ 2025, 13:18 IST
Last Updated 25 ಮಾರ್ಚ್ 2025, 13:18 IST
<div class="paragraphs"><p>ವೇದಿಕೆ ಮೇಲೆ ಗಳಗಳನೆ ಅತ್ತ ಗಾಯಕಿ&nbsp;ನೇಹಾ ಕಕ್ಕರ್</p></div>

ವೇದಿಕೆ ಮೇಲೆ ಗಳಗಳನೆ ಅತ್ತ ಗಾಯಕಿ ನೇಹಾ ಕಕ್ಕರ್

   

ನವದೆಹಲಿ: ಬಾಲಿವುಡ್‌ ಗಾಯಕಿ ನೇಹಾ ಕಕ್ಕರ್‌ ಅವರು ಆಸ್ಟ್ರೇಲಿಯಾದ ಮೆಲ್ಬರ್ನ್‌ನಲ್ಲಿ ಆಯೋಜಿಸಿದ್ದ ಸಂಗೀತ ಕಾರ್ಯಕ್ರಮಕ್ಕೆ 3 ತಾಸು ತಡವಾಗಿ ಬಂದ ಕಾರಣ ಪ್ರೇಕ್ಷಕರು ಆಕ್ರೊಶ ಹೊರಹಾಕಿದ್ದಾರೆ. ಇದರಿಂದ ನೇಹಾ ವೇದಿಕೆ ಮೇಲೆಯೇ ಗಳಗಳನೆ ಅತ್ತಿದ್ದಾರೆ.

ಸಾಮಾಜಿಕ ಮಾಧ್ಯಮದಲ್ಲಿ ಬಳಕೆದಾರರು ಕೆಲವು ವಿಡಿಯೊಗಳನ್ನು ಹಂಚಿಕೊಂಡಿದ್ದಾರೆ. ವಿಡಿಯೊದಲ್ಲಿ ನೇಹಾ ವೇದಿಕೆಗೆ ಬರುತ್ತಿದ್ದಂತೆ ಪ್ರೇಕ್ಷಕರು ಬೊಬ್ಬೆ ಹಾಕಿದ್ದಾರೆ, ಕೆಲವರು ‘ವಾಪಸ್‌ ಹೋಗಿ’ ಎಂದು ಕಿರುಚಿದ್ದಾರೆ ಅದನ್ನು ನೋಡಿ ನೇಹಾ ಏಕಾಏಕಿ ಅಳಲು ಆರಂಭಿಸಿರುವುದನ್ನು ಕಾಣಬಹುದು.

ADVERTISEMENT

‘ನೀವೆಲ್ಲಾ ಬಹಳ ತಾಳ್ಮೆಯಿಂದ ಕಾದಿದ್ದೀರಿ, ನಾನು ಜೀವನದಲ್ಲಿ ಯಾರನ್ನೂ ನನಗಾಗಿ ಕಾಯುವಂತೆ ಮಾಡಿಲ್ಲ, ಅದನ್ನು ದ್ವೇಷಿಸುತ್ತೇನೆ ಕೂಡ. ನನ್ನನ್ನು ಕ್ಷಮಿಸಿ. ನೀವೇ ನನ್ನ ಪ್ರಪಂಚ. ಈಗ ಆಗಿರುವುದಕ್ಕೆ ನನಗೆ ಬೇಸರವಿದೆ. ಈ ಕಾರ್ಯಕ್ರಮವನ್ನು ಎಂದಿಗೂ ಮರೆಯುವುದಿಲ್ಲ. ನನಗಾಗಿ ನಿಮ್ಮ ಅಮೂಲ್ಯ ಸಮಯವನ್ನು ಮೀಸಲಿಟ್ಟಿದ್ದೀರಿ. ಅದಕ್ಕಾಗಿ ನೀವು ನೃತ್ಯ ಮಾಡುವಂತೆ ರಂಜಿಸುತ್ತೇನೆ’ ಎಂದು ನೇಹಾ ವೇದಿಕೆ ಮೇಲೆ ಹೇಳಿದ್ದಾರೆ.

ನೇಹಾ ಕ್ಷಮೆ ಕೇಳಿದರೂ ಪ್ರೇಕ್ಞಕರು ಅದನ್ನು ಒಪ್ಪಿಕೊಳ್ಳದೆ ಕಿರುಚಾಡಿದ್ದಾರೆ.

ಪ್ರೇಕ್ಷಕರೊಬ್ಬರು, ‘ಇದು ಭಾರತವಲ್ಲ, ನೀವು ಆಸ್ಟ್ರೇಲಿಯಾದಲ್ಲಿದ್ದೀರಿ. ವಾಪಸ್‌ ಹೋಗಿ ವಿಶ್ರಾಂತಿ ತೆಗೆದುಕೊಳ್ಳಿ. ನಾವು ಇಷ್ಟುಹೊತ್ತು ಕಾದಿದ್ದೇವೆ. ಒಳ್ಳೆಯ ನಟನೆ ಮಾಡಿದ್ದೀರಿ, ಆದರೆ ಇದು ಇಂಡಿಯನ್‌ ಐಡಲ್‌ ಸ್ಪರ್ಧೆಯಲ್ಲ’ ಎಂದಿದ್ದಾರೆ. 

ಇನ್ನೊಬ್ಬ ಬಳಕೆದಾರ, ನೇಹಾ ವೇದಿಕೆ ಮೇಲೆ ನಿಂತು ಅಳುತ್ತಿರುವ ಫೋಟೊ ಶೇರ್‌ ಮಾಡಿಕೊಂಡು, ‘ಸಂಜೆ7.30ರ ಕಾರ್ಯಕ್ರಮಕ್ಕೆ ರಾತ್ರಿ 10 ಗಂಟೆಗೆ ಬಂದಿದ್ದಾರೆ. ಬಳಿಕ ಅಳುವ ನಾಟಕವಾಡಿದ್ದಾರೆ. ನಂತರ ಒಂದು ಗಂಟೆಯೊಳಗೆ ಕಾರ್ಯಕ್ರಮ ಮುಗಿಸಿದ್ದಾರೆ. ಎಷ್ಟು ಕೆಟ್ಟ ಸಂಗೀತ ಕಾರ್ಯಕ್ರಮ’ ಎಂದು ಬರೆದುಕೊಂಡಿದ್ದಾರೆ. 

ಮತ್ತೊಬ್ಬರು, ನೇಹಾ ಕಕ್ಕರ್‌ ಸಂಗೀತ ಕಾರ್ಯಕ್ರಮಕ್ಕೆ ಬರುವುದು ‘ಹಣ ಮತ್ತು ಸಮಯ ವ್ಯರ್ಥ’ ಎಂದು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.