ರಾಬರ್ಟ್ ರೆಡ್‌ಫೋರ್ಡ್
ಲಾಸ್ ಏಂಜಲೀಸ್: ‘ಬುಚ್ ಕ್ಯಾಸಿಡಿ ಅಂಡ್ ದಿ ಸನ್‌ಡಾನ್ಸ್ ಕಿಡ್’, ‘ದಿ ಸ್ಟಿಂಗ್’, ‘ಆಲ್ ದಿ ಪ್ರೆಸಿಡೆಂಟ್ಸ್ ಮೆನ್’ ಮತ್ತು ‘ಆರ್ಡಿನರಿ ಪೀಪಲ್’ ಸಿನಿಮಾಗಳ ಮೂಲಕ ಖ್ಯಾತಿ ಗಳಿಸಿದ್ದ ನಟ, ನಿರ್ದೇಶಕ ರಾಬರ್ಟ್ ರೆಡ್‌ಫೋರ್ಡ್ (89) ಅವರು ಇಂದು (ಮಂಗಳವಾರ) ನಿಧನರಾಗಿದ್ದಾರೆ.
ರಾಬರ್ಟ್ ರೆಡ್‌ಫೋರ್ಡ್ ನಿಧನದ ಬಗ್ಗೆ ರೋಜರ್ಸ್ & ಕೋವನ್ ಪಿಎಂಕೆ ಸಂಸ್ಥೆಯ ಮುಖ್ಯ ಕಾರ್ಯನಿರ್ವಾಹಕ ಸಿಂಡಿ ಬರ್ಗರ್ ಮಾಹಿತಿ ಹಂಚಿಕೊಂಡಿದ್ದಾರೆ.
ಅಮೆರಿಕದ ಒರೆಮ್ ನಗರದ ಉತಾಹ್‌ನಲ್ಲಿರುವ ತಮ್ಮ ನಿವಾಸದಲ್ಲಿ ರಾಬರ್ಟ್ ರೆಡ್‌ಫೋರ್ಡ್ ಕೊನೆಯುಸಿರೆಳೆದಿದ್ದಾರೆ ಎಂದು ಬರ್ಗರ್ ತಿಳಿಸಿದ್ದಾರೆ.
ರಾಬರ್ಟ್ ಕೊನೆಯ ಬಾರಿಗೆ ‘ಅವೆಂಜರ್ಸ್: ಎಂಡ್‌ಗೇಮ್’ ಚಿತ್ರದಲ್ಲಿ ಕಾಣಿಸಿಕೊಂಡಿದ್ದರು. ಈ ಚಿತ್ರದಲ್ಲಿ ಅವರು ಅಲೆಕ್ಸಾಂಡರ್ ಪಿಯರ್ಸ್ ಪಾತ್ರವನ್ನು ನಿರ್ವಹಿಸಿದ್ದರು.
1962ರಲ್ಲಿ ರಾಬರ್ಟ್ ಅವರು ‘ವಾರ್ ಹಂಟ್’ ಚಿತ್ರದ ಮೂಲಕ ಚಲನಚಿತ್ರಕ್ಕೆ ಪದಾರ್ಪಣೆ ಮಾಡಿದ್ದರು. ಮತ್ತೊಬ್ಬ ಯುವ ನಟ ಸಿಡ್ನಿ ಪೊಲಾಕ್ ಅವರೊಂದಿಗೆ ಕಾಣಿಸಿಕೊಂಡರು, ಅವರು ದಿ ಎಲೆಕ್ಟ್ರಿಕ್ ಹಾರ್ಸ್‌ಮ್ಯಾನ್ ಮತ್ತು ಅಕಾಡೆಮಿ ಪ್ರಶಸ್ತಿ ವಿಜೇತ ಔಟ್ ಆಫ್ ಆಫ್ರಿಕಾ ಸೇರಿದಂತೆ ಏಳು ಚಲನಚಿತ್ರಗಳಲ್ಲಿ ರೆಡ್‌ಫೋರ್ಡ್ ಅವರನ್ನು ನಿರ್ದೇಶಿಸಿದರು.
1972ರಲ್ಲಿ ತೆರೆಕಂಡಿದ್ದ ‘ದಿ ಹಾಟ್ ರಾಕ್’ ಮತ್ತು ‘ದಿ ಕ್ಯಾಂಡಿಡೇಟ್’ ಚಿತ್ರಗಳು ರಾಬರ್ಟ್ ಅವರಿಗೆ ‘ಸೂಪರ್‌ಸ್ಟಾರ್’ ಖ್ಯಾತಿಯನ್ನು ತಂದುಕೊಟ್ಟಿದ್ದವು.
1980ರಲ್ಲಿ ಬಿಡುಗಡೆಯಾಗಿದ್ದ ‘ಆರ್ಡಿನರಿ ಪೀಪಲ್’ ಚಿತ್ರದ ಮೂಲಕ ರಾಬರ್ಟ್ ಆಸ್ಕರ್ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.