ADVERTISEMENT

ಕನ್ನಡ ಸಿನಿಮಾಗಳಲ್ಲೂ ನಟಿಸಿದ್ದ ಮಹಾಭಾರತದ ‘ಕರ್ಣ’ ಪಂಕಜ್ ಧೀರ್‌ ಇನ್ನಿಲ್ಲ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 15 ಅಕ್ಟೋಬರ್ 2025, 10:27 IST
Last Updated 15 ಅಕ್ಟೋಬರ್ 2025, 10:27 IST
<div class="paragraphs"><p>ಚಿತ್ರ ಕೃಪೆ:&nbsp;<a href="https://x.com/The_anishsingh">@The_anishsingh</a></p></div>

ಚಿತ್ರ ಕೃಪೆ: @The_anishsingh

   

ಮುಂಬೈ: 'ಮಹಾಭಾರತ' ಕರ್ಣನಾಗಿ ‘ಚಂದ್ರಕಾಂತ’ದಲ್ಲಿ ರಾಜ ಶಿವದತ್ ಪಾತ್ರದಲ್ಲಿ ನಟಿಸಿದ್ದ ನಟ ಪಂಕಜ್ ಧೀರ್ (68) ಇಂದು (ಬುಧವಾರ) ಬೆಳಿಗ್ಗೆ ನಿಧನರಾದರು.

ಕ್ಯಾನ್ಸರ್‌ನಿಂದ ಬಳಲುತ್ತಿದ್ದ ಅವರು, ಕೆಲವು ತಿಂಗಳಿನಿಂದ ಚಿಕಿತ್ಸೆಗಾಗಿ ಆಸ್ಪತ್ರೆಯಲ್ಲಿ ದಾಖಲಾಗಿದ್ದರು ಎಂದು ನಿರ್ಮಾಪಕ ಅಶೋಕ್ ಪಂಡಿತ್ ಪಿಟಿಐಗೆ ತಿಳಿಸಿದ್ದಾರೆ.

ADVERTISEMENT

ಪಂಜಾಬ್ ಮೂಲದ ಧೀರ್, 1980ರ ದಶಕದಲ್ಲಿ ನಟನಾಗಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದ ಇವರು ಅನೇಕ ಚಲನಚಿತ್ರಗಳಲ್ಲಿ ಪೋಷಕ ಪಾತ್ರಗಳ ಮೂಲಕ ಪ್ರೇಕ್ಷಕರ ಗಮನ ಸೆಳೆದಿದ್ದಾರೆ.

ಕನ್ನಡದಲ್ಲಿ ‘ವಿಷ್ಣು ವಿಜಯ‘, ‘ವಿಷ್ಣು ಸೇನಾ‘ ಚಿತ್ರದಲ್ಲಿ ವಿಷ್ಣುವರ್ಧನ್ ಅವರ ಜತೆ ನಟ ಪಂಕಜ್ ಧೀರ್ ಬಣ್ಣ ಹಚ್ಚಿದ್ದಾರೆ.

‘ಮಹಾಭಾರತ'ದಲ್ಲಿ ನಟಿಸಿದ ಬಳಿಕ ಕಿರುತೆರೆಯಲ್ಲಿ ಇನ್ನಷ್ಟು ಖ್ಯಾತಿ ಪಡೆದು ‘ಸಡಕ್’, ‘ಸನಮ್ ಬೇವಾಫಾ‘ ‘ಆಶಿಕ್ ಆವಾರ‘ ಸೇರಿದಂತೆ ಅನೇಕ ಚಲನಚಿತ್ರಗಳಲ್ಲಿ ಅಭಿನಯಿಸಿದ್ದಾರೆ.

ಅಷ್ಟೆ ಅಲ್ಲದೇ ಖ್ಯಾತ ನಟರಾದ ಬಾಬಿ ಡಿಯೋಲ್ ಅವರ ‘ಸೋಲ್ಜರ್’, ಶಾರುಖ್ ಖಾನ್ ಅವರ ‘ಬಾದ್‌ಶಾ’ , ಅಕ್ಷಯ್ ಕುಮಾರ್ ಅವರ ‘ಅಂದಾಜ್", ಅಜಯ್ ದೇವಗನ್ ಅವರ ‘ಜಮೀನ್‘ ಹಾಗೂ ‘ಟಾರ್ಜನ್‘ ಚಿತ್ರದಲ್ಲಿ ಹಾಗೂ ‘ತೀನ್ ಬಹುರಾನಿಯಾ‘, ‘ರಾಜಾ ಕಿ ಆಯೇಗಿ ಬಾರಾತ್‘ ಮತ್ತು ‘ಸಸುರಲ್ ಸಿಮರ್ ಕಾ‘ ಧಾರಾವಾಹಿಗಳಲ್ಲಿ ನಟಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.