ಮಂಗಳೂರಿನ ಚರ್ಚ್‌ನಲ್ಲಿ ಉಂಗುರು ಬದಲಿಸಿಕೊಂಡ ತರುಣ್ ಸುಧೀರ್ ಹಾಗೂ ಸೋನಲ್ ಮಾಂತೆರೊ
ಇನ್‌ಸ್ಟಾಗ್ರಾಂ ಚಿತ್ರ
ಬೆಂಗಳೂರಿನ ಅರಮನೆ ಮೈದಾನದಲ್ಲಿ ಆಗಸ್ಟ್ 11ರಂದು ಹಿಂದೂ ಸಂಪ್ರದಾಯದಂತೆ ಸಪ್ತಪದಿ ತುಳಿದಿದ್ದ ಚಂದನವನದ ಜೋಡಿ ನಿರ್ದೇಶಕ ತರುಣ್ ಸುಧೀರ್ ಹಾಗೂ ನಟಿ ಸೋನಲ್ ಮಾಂತೆರೊ, ಇದೀಗ ಮಂಗಳೂರಿನ ಚರ್ಚ್‌ನಲ್ಲಿ ಉಂಗುರು ಬದಲಿಸುವ ಮೂಲಕ ಕ್ರೈಸ್ತ ಸಂಪ್ರದಾಯದಂತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.
ಕುಟುಂಬ ಸದಸ್ಯರು, ಚಿತ್ರರಂಗದ ಸ್ನೇಹಿತರು, ಒಡನಾಡಿಗಳ ಸಮ್ಮುಖದಲ್ಲಿ ತರುಣ್ ಹಾಗೂ ಸೋನಲ್ ಹಸಮಣೆ ಏರಿದ್ದರು
ತರುಣ್ ಸುಧೀರ್ ಅವರ ಕುಟುಂಬದ ಸಂಪ್ರದಾಯದಂತೆ ಅಂದು ಅದ್ಧೂರಿಯ ವಿವಾಹ ಸಮಾರಂಭ ನಡೆದಿತ್ತು
ತರುಣ್ ಕುಟುಂಬದ ಆಪ್ತರೂ ಆಗಿರುವ ನಟರಾದ ಪ್ರೇಮ್ ಹಾಗೂ ಶರಣ್ ಕುಟುಂಬ ಸದಸ್ಯರು ಈ ವಿವಾಹದಲ್ಲೂ ಭಾಗಿಯಾಗಿದ್ದರು
ಇದೀಗ ಸೋನಲ್ ಕುಟುಂಬದ ಸಂಪ್ರದಾಯದಂತೆ ಚರ್ಚ್‌ನಲ್ಲಿ ನವಜೋಡಿ ಉಂಗುರು ಬದಲಿಸಿ, ವೈನ್ ಹೀರಿ ಹೊಸ ಬದುಕು ಆರಂಭಿಸಿದ್ದಾರೆ
ಸೋನಲ್ ಆಪ್ತರೂ ಮಂಗಳೂರಿನ ಸಮಾರಂಭದಲ್ಲಿ ಭಾಗಿಯಾಗಿ ನವಜೋಡಿಗೆ ಶುಭ ಕೋರಿದರು
ವಿವಾಹ ಸಮಾರಂಭದ ನಂತರ ತರುಣ್ ಹಾಗೂ ಮಾಂತೆರೊ ಜೋಡಿ ನರ್ತಿಸಿ ಸಂಭ್ರಮಿಸಿದರು
ಬೆಂಗಳೂರಿನಲ್ಲಿ ನಡೆದ ವಿವಾಹ ಸಮಾರಂಭದಲ್ಲಿ ಹೊಂಬಣ್ಣದ ಸೀರೆ ಹಾಗೂ ಕುರ್ತಾ ಧರಿಸಿದ್ದ ಈ ಜೋಡಿ, ಮಂಗಳೂರಿನ ಸಮಾರಂಭದಲ್ಲಿ ಶ್ವೇತ ವರ್ಣದ ಗೌನ್ ಹಾಗೂ ಸೂಟ್ ತೊಟ್ಟು ವಿವಾಹ ಸಮಾರಂಭದಲ್ಲಿ ಪಾಲ್ಗೊಂಡರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.