ADVERTISEMENT

ಪವರ್‌ಲಿಫ್ಟಿಂಗ್: 1 ಚಿನ್ನ, 2 ಬೆಳ್ಳಿ ಪದಕ ಗೆದ್ದ ನಟಿ ಪ್ರಗತಿ ಮಹಾವಾದಿ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 8 ಡಿಸೆಂಬರ್ 2025, 11:44 IST
Last Updated 8 ಡಿಸೆಂಬರ್ 2025, 11:44 IST
<div class="paragraphs"><p>ನಟಿ ಪ್ರಗತಿ ಮಹಾವಾದಿ</p></div>

ನಟಿ ಪ್ರಗತಿ ಮಹಾವಾದಿ

   

ಚಿತ್ರ: ಇನ್‌ಸ್ಟಾಗ್ರಾಂ

ದಕ್ಷಿಣ ಭಾರತದ ಜನಪ್ರಿಯ ನಟಿ ಪ್ರಗತಿ ಮಹಾವಾದಿ ಅವರು ಪವರ್‌ಲಿಫ್ಟಿಂಗ್ ವಿಭಾಗದಲ್ಲಿ ಬೆಳ್ಳಿ ಪದಕ ಗೆದ್ದುಕೊಂಡಿದ್ದಾರೆ. ಇತ್ತೀಚೆಗೆ ನಡೆದ ಏಷ್ಯನ್ ಓಪನ್ ಮತ್ತು ಮಾಸ್ಟರ್ಸ್ ಪವರ್‌ಲಿಫ್ಟಿಂಗ್ ಚಾಂಪಿಯನ್‌ಶಿಪ್‌ನಲ್ಲಿ ನಟಿ ಪ್ರಗತಿ ಮಹಾವಾದಿ ಭಾಗವಹಿಸಿದ್ದರು. ಪವರ್‌ಲಿಫ್ಟಿಂಗ್ ವಿಭಾಗದಲ್ಲಿ ಬೆಳ್ಳಿ ಪದಕ ಗೆದ್ದಿದ್ದಾರೆ.

ADVERTISEMENT

ಈ ಖುಷಿಯ ವಿಚಾರವನ್ನು ನಟಿ ತಮ್ಮ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ. ‘ಏಷ್ಯನ್ ಗೇಮ್ಸ್‌ನಲ್ಲಿ ಒಟ್ಟಾರೆಯಾಗಿ 2 ಬೆಳ್ಳಿ ಪದಕ ಗೆದ್ದೆ. ಡೆಡ್‌ಲಿಫ್ಟ್‌ನಲ್ಲಿ 1 ಬಂಗಾರದ ಪದಕ ಗೆದ್ದೆ. ನೀವು ಕನಸು ಕಾಣಿರಿ, ಅದಕ್ಕಾಗಿ ಶ್ರಮಿಸಿ, ಮತ್ತು ಅದನ್ನು ಸಾಧಿಸಿ’ ಎಂದು ಬರೆದುಕೊಂಡಿದ್ದಾರೆ. ನಟಿ ಈ ಪೋಸ್ಟ್‌ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಅಭಿಮಾನಿಗಳು ನಟಿಗೆ ಅಭಿನಂದನೆಗಳನ್ನು ತಿಳಿಸುತ್ತಿದ್ದಾರೆ.

ನಟಿ, ಮಾಜಿ ಮಾಡೆಲ್, ತೆಲುಗು, ತಮಿಳು ಮತ್ತು ಕನ್ನಡ ಸಿನಿಮಾಗಳಲ್ಲಿ ಪೋಷಕ ಪಾತ್ರಗಳನ್ನು ಅಭಿನಯಿಸಿರುವ ಪ್ರಗತಿ ಮಹಾವಾದಿ ಅವರು ಸಾಮಾಜಿಕ ಮಾಧ್ಯಮದಲ್ಲಿ ಫಿಟ್‌ನೆಸ್ ಕುರಿತ ವಿಡಿಯೊಗಳನ್ನು ಹಂಚಿಕೊಳ್ಳುತ್ತಲೇ ಇದ್ದರು. ‌ಜೊತೆಗೆ ಅಭಿಮಾನಿಗಳು ಹಾಗೂ ಅನುಯಾಯಿಗಳಿಗೂ ಫಿಟ್‌ನೆಸ್‌ ಬಗ್ಗೆ ತಿಳಿಸಿಕೊಡುತ್ತಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.