ADVERTISEMENT

ಸಾಂತಾ ಕ್ಲಾಸ್‌ ಅವತಾರದಲ್ಲಿ 'ಅಪ್ಪು' ; ಅಭಿಮಾನಿಗಳ ಮೆಚ್ಚುಗೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 25 ಡಿಸೆಂಬರ್ 2025, 13:02 IST
Last Updated 25 ಡಿಸೆಂಬರ್ 2025, 13:02 IST
   

ನಟ ಪುನೀತ್‌ ರಾಜ್‌ಕುಮಾರ್ ಅವರು ಸಾಂತಾ ಕ್ಲಾಸ್‌ ಅವತಾರದಲ್ಲಿರುವ ಕೃತಕ ಬುದ್ಧಿಮತ್ತೆ (ಎಐ) ಆಧಾರಿತ ವಿಡಿಯೊವನ್ನು ಪಿಆರ್‌ಕೆ ಆ್ಯಪ್‌ನಲ್ಲಿ ಬಿಡುಗಡೆ ಮಾಡಲಾಗಿದೆ.

ಸಾಮಾಜಿಕ ಜಾಲತಾಣದಲ್ಲಿ ವಿಡಿಯೊ ಹರಿದಾಡುತ್ತಿದ್ದು, ನೆಚ್ಚಿನ ನಟನನ್ನು ನೋಡಿ ಅಭಿಮಾನಿಗಳು ಪುಳಕಗೊಂಡಿದ್ದಾರೆ.

ಮಂಜಿನಿಂದ ಕೂಡಿರುವ ಬೆಂಗಳೂರಿನಲ್ಲಿ ಸಾಂತಾ ಕ್ಲಾಸ್‌ ಅವತಾರದಲ್ಲಿ ಬರುವ ಪುನೀತ್‌, ಮಕ್ಕಳಿಗೆ ಚಾಕೊಲೇಟ್ ಹಂಚುವ ದೃಶ್ಯ ಈ ಎಐ ವಿಡಿಯೊದಲ್ಲಿದೆ. ಈ ವಿಡಿಯೊಗೆ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

ADVERTISEMENT

ಇಂದು (ಗುರುವಾರ) ಬಿಡುಗಡೆಯಾಗಿರುವ ಸಾಂತಾ ಕ್ಲಾಸ್‌ ಅವತಾರದ ಅಪ್ಪು ವಿಡಿಯೊ 2ಸಾವಿರಕ್ಕೂ ಅಧಿಕ ವೀಕ್ಷಣೆ ಕಂಡಿದೆ.

ಅಪ್ಪು ಸಾಂತಾ ಕ್ಲಾಸ್‌ ಅವತಾರದ ಕೃತಕ ಬುದ್ಧಿಮತ್ತೆ ವಿಡಿಯೊ ಹಂಚಿಕೊಳ್ಳುವ ಮೂಲಕ ಪಿಆರ್‌ಕೆ ತಂಡ ಕ್ರಿಸ್‌ಮಸ್‌ ಹಬ್ಬಕ್ಕೆ ಶುಭಕೋರಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.