
ಅಶ್ವಿನಿ ಪುನೀತ್ ರಾಜಕುಮಾರ್
ಚಿತ್ರ: ಇನ್‌ಸ್ಟಾಗ್ರಾಮ್
ದಿ. ಪುನೀತ್ ರಾಜ್‌ಕುಮಾರ್ ಅವರ ಪತ್ನಿ ಅಶ್ವಿನಿ ಪುನೀತ್ ರಾಜ್‌ಕುಮಾರ್ ಅವರು ಪಿಆರ್‌ಕೆ ಆ್ಯಪ್‌ನಲ್ಲಿ ಪ್ರಸಾರವಾಗುತ್ತಿರುವ ‘ನಾ ಕಂಡ ಅಪ್ಪು’ ಸಂದರ್ಶನದಲ್ಲಿ ಮನಬಿಚ್ಚಿ ಮಾತನಾಡಿದ್ದಾರೆ.
‘ನನಗೆ ಕೋಪ ಬಂದಾಗ ಅಪ್ಪು ಆ ಒಂದು ಹಾಡಿ ಸಮಾಧಾನ ಮಾಡುತ್ತಿದ್ದರು’ ಎಂದು ಹೇಳಿದ್ದಾರೆ. ತಮ್ಮ ಒಡೆತನದ ಪಿಆರ್‌ಕೆ ಆ್ಯಪ್ ಸಂದರ್ಶನದಲ್ಲಿ ಅಶ್ವಿನಿ ಪುನೀತ್ ರಾಜ್‌ಕುಮಾರ್ ಅವರು ಭಾಗಿಯಾಗಿ ಈ ವಿಚಾರದ ಬಗ್ಗೆ ಮಾತನಾಡಿದ್ದಾರೆ.
ಪಿಆರ್‌ಕೆ ಆ್ಯಪ್ ಸಾಮಾಜಿಕ ಮಾಧ್ಯಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಪ್ರೊಮೋ ಒಂದನ್ನು ಹಂಚಿಕೊಂಡಿದೆ. ಅದರಲ್ಲಿ ಅಶ್ವಿನಿ ಪುನೀತ್ ರಾಜ್‌ಕುಮಾರ್ ಅವರು, ‘ನಮ್ಮಿಬ್ಬರ ಮಧ್ಯೆ ಜಗಳ ಮಕ್ಕಳಿಂದ ಆಗುತ್ತಿತ್ತು. ನಾನು ಕೋಪ ಮಾಡಿಕೊಂಡಾಗಲೆಲ್ಲ ಒಂದು ಹಾಡನ್ನು ಹಾಡುತ್ತಿದ್ದರು. ಅಪ್ಪಾಜಿ ಅವರ ನಟನೆಯ ‘ಸತ್ಯಭಾಮೆ ಸತ್ಯಭಾಮೆ ಕೋಪವೇಕೆ ನನ್ನಲಿ’ ಹಾಡುತ್ತಿದ್ದರು. ಆಗ ನಾನು ಜೋರಾಗಿ ನಗುತ್ತಿದ್ದೆ’ ಎಂದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.