ADVERTISEMENT

'ಅಪ್ಪು ಸಾವಿನ ದಿನ ನೆನಪಿಕೊಂಡರೆ ಈಗಲೂ ದುಃಖ ಉಮ್ಮಳಿಸುತ್ತೆ' : ಗಾಯಕ ಗುರುಕಿರಣ್

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 26 ನವೆಂಬರ್ 2025, 13:17 IST
Last Updated 26 ನವೆಂಬರ್ 2025, 13:17 IST
   

ಅಶ್ವಿನಿ ಪುನೀತ್ ರಾಜ್‌ಕುಮಾರ್ ಒಡೆತನದ ಪಿಆರ್‌ಕೆ ಆ್ಯಪ್ ಸಂದರ್ಶನದಲ್ಲಿ ಗಾಯಕ ಗುರುಕಿರಣ್ ಮಾತನಾಡಿ, ಅಪ್ಪು ಅವರ ಜತೆಗಿನ ಒಡನಾಟವನ್ನು ಹಂಚಿಕೊಂಡಿದ್ದಾರೆ.

ಅಪ್ಪು ಜತೆಗಿನ ಒಡನಾಟವನ್ನು ಸ್ಮರಿಸಿಕೊಂಡಿರುವ ಗಾಯಕ ಗುರುಕಿರಣ್ , ‘ಪುನೀತ್ ರಾಜ್‌ಕುಮಾರ್ ನಟನೆಯ ಅಭಿ ಚಿತ್ರದ ‘ಮಮ ಮಾ ಮಜಾ ಮಾಡು’ ಹಾಡನ್ನು ಅನೇಕರು ವಿರೋಧಿಸಿದ್ದರು. ಆದರೆ ಅಣ್ಣಾವ್ರು ಮಾತ್ರ ಆ ಹಾಡಿಗೆ ಸಾಥ್ ನೀಡಿದ್ದರು. ಅಷ್ಟು ಮಾತ್ರವಲ್ಲ. ಸಮಯ ಸಿಕ್ಕಗೆಲ್ಲಾ ಅಪ್ಪು ನಾನು ಜತೆ ಸೇರಿ ಬೆಂಗಳೂರು ಸುತ್ತುತ್ತಿದ್ದೆವು’ ಎಂದು ಹಳೆಯ ನೆನಪುಗಳನ್ನು ಮೆಲುಕು ಹಾಕಿದ್ದಾರೆ.

‘ಅಪ್ಪು ಅವರು ಸಾಯುವ ಒಂದು ದಿನಕ್ಕೂ ಮೊದಲು ನನ್ನ ಹುಟ್ಟು ಹಬ್ಬದ ಪಾರ್ಟಿಯಲ್ಲಿ ಭಾಗಿಯಾಗಿ ಸಂಭ್ರಮಿಸಿದ್ದರು. ಆ ದಿನ ನನ್ನ ಪತ್ನಿ ಪಲ್ಲವಿ, ಇವತ್ತಿನ ಕಾರ್ಯಕ್ರಮ ಎಲ್ಲವೂ ಚೆನ್ನಾಗಿ ಆಯಿತು ಆದಷ್ಟು ಬೇಗ ಮತ್ತೆ ಸೇರೊಣ ಎಂದು ಅಶ್ವಿನಿ ಅವರಿಗೆ ಸಂದೇಶ ಕಳುಹಿಸಿದ್ದರು. ಪುನೀತ್ ರಾಜ್‌ಕುಮಾರ್ ಅವರು ರಾತ್ರಿ ಎಲ್ಲರ ಜತೆ ಸಂಭ್ರಮದಿಂದ ಇದ್ದರು. ನನಗೆ ಅಪ್ಪುಗೆ ನೀಡಿ ಅವರು ಮನೆಗೆ ಹೋಗಿದ್ದರು.

ಅದೇ ಮರುದಿನವೇ ಅವರಿಗೆ ಹೃದಯಾಘಾತ ಆಗಿತ್ತು. ನನಗೆ ಅನೇಕರು ಅವರ ಸಾವಿನ ಸುದ್ದಿ ಬಗ್ಗೆ ಫೋನ್ ಮಾಡಿ ಹೇಳಿದಾಗ ನಂಬಲು ಆಗುತ್ತಿರಲಿಲ್ಲ. ಆದಿನ ನೆನಪಿಸಿಕೊಂಡರೆ ಈಗಲೂ ದುಃಖವಾಗುತ್ತೆ’ ಎಂದು ಬೇಸರ ವ್ಯಕ್ತ ಪಡಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.