ಚಿತ್ರ ಕೃಪೆ: @PRK_Productions
ಪುನೀತ್ ರಾಜ್‌ಕುಮಾರ್ ನಟನೆಯ ಜಾಕಿ ಸಿನಿಮಾ ಬಿಡುಗಡೆಯಾಗಿ 15 ವರ್ಷ ಆಗಿರುವ ಬಗ್ಗೆ ಪಿಆರ್‌ಕೆ ಪ್ರೊಡಕ್ಷನ್ಸ್ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಈ ಚಿತ್ರದ ಪೋಸ್ಟರ್ ಹಂಚಿಕೊಂಡಿದೆ.
ಪೂರ್ಣಿಮಾ ಎಂಟರ್‌ಪ್ರೈಸಸ್ ನಿರ್ಮಾಣದಲ್ಲಿ ತೆರೆಕಂಡ ಪ್ರೇಕ್ಷಕರ ನೆಚ್ಚಿನ ಚಿತ್ರ ಇದಾಗಿದೆ. ‘ಪಟಾಕಿ ಯಾವಂದೇ ಆಗಿರಲಿ...ಅಂಟ್ಸೋರು ನವಾಗಿರಬೇಕು' ಎಂದು ಸಾಮಾಜಿಕ ಜಾಲತಾಣ (ಎಕ್ಸ್)ನಲ್ಲಿ ಬರೆದುಕೊಂಡಿದೆ.
ಪುನೀತ್ ರಾಜ್‌ಕುಮಾರ್ ಅವರಿಗೆ ಜೋಡಿಯಾಗಿ ಭಾವನಾ ನಟಿಸಿರುವ, ಸೂರಿ ನಿರ್ದೇಶನದ ಜಾಕಿ ಸಿನಿಮಾವು 2010ರಲ್ಲಿ ಮೊದಲ ಬಾರಿಗೆ ತೆರೆ ಕಂಡಿತ್ತು.
ಅಪ್ಪು ನಿಧನದ ಬಳಿಕ ಅವರ ಹುಟ್ಟುಹಬ್ಬದಂದು ಪುನಿತ್ ರಾಜಕುಮಾರ್ ನಟನೆಯ ಒಂದೊಂದು ಸಿನಿಮಾಗಳನ್ನು ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡುವುದಾಗಿ ಅವರ ಪತ್ನಿ ಅಶ್ವಿನಿ ಹೇಳಿದ್ದರು.
ಅದರಂತೆ ಕಳೆದ ವರ್ಷ ಪುನೀತ್ ರಾಜ್‌ಕುಮಾರ್ ಅವರ ಜನ್ಮದಿನದ ಪ್ರಯುಕ್ತ ಜಾಕಿ ಸಿನಿಮಾವನ್ನು ರಿರಿಲೀಸ್ ಮಾಡಲಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.