ADVERTISEMENT

ಅಜ್ಜಿ ಒಬ್ಬರು ಅಪ್ಪು ಅವರನ್ನು ಚೆನ್ನಾಗಿ ನೋಡಿಕೊಳ್ಳಿ ಎಂದಿದ್ದರು: ಸಂತೋಷ್

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 2 ಡಿಸೆಂಬರ್ 2025, 6:08 IST
Last Updated 2 ಡಿಸೆಂಬರ್ 2025, 6:08 IST
   

ಅಶ್ವಿನಿ ಪುನೀತ್ ರಾಜ್‌ಕುಮಾರ್ ಒಡೆತನದ ಪಿಆರ್‌ಕೆ ಆ್ಯಪ್ ಸಂದರ್ಶನದಲ್ಲಿ ನಿರ್ದೇಶಕ ಸಂತೋಷ್‌ ಆನಂದ್‌ ರಾಮ್‌ ಅವರು, ಅಪ್ಪು ಜತೆಗಿನ ತಮ್ಮ ಆತ್ಮೀಯ ಒಡನಾಟದ ಬಗ್ಗೆ ಹೇಳಿಕೊಂಡಿದ್ದಾರೆ.

ಪುನೀತ್ ರಾಜ್‌ಕುಮಾರ್ ಜತೆಗಿನ ಒಡನಾಟವನ್ನು ಹಂಚಿಕೊಂಡಿರುವ ಸಂತೋಷ್ ಅವರು, ‘ಹೀಗೆ ಒಂದು ದಿನ ಮಾಲ್ ಒಂದರಲ್ಲಿ ‘ಯುವರತ್ನ’ ಚಿತ್ರವನ್ನು ಪ್ರಚಾರ ಮಾಡುವಾಗ ಅಜ್ಜಿ ಒಬ್ಬರು ಬಂದು ಅಪ್ಪು ಅವರನ್ನು ಚೆನ್ನಾಗಿ ನೋಡಿಕೊಳ್ಳಿ ಅಂಥ ಹೇಳಿದ್ದರು. ಅವರು ಯಾಕೆ ಹಾಗೆ ಹೇಳಿದ್ರು ಅಂಥ ಆ ಸಮಯದಲ್ಲಿ ಗೊತ್ತಾಗಲಿಲ್ಲ’  ಎಂದು ಸಂತೋಷ್ ಬೇಸರ ವ್ಯಕ್ತಪಡಿಸಿದ್ದಾರೆ.

‘ಯುವರತ್ನ’ ಸಿನಿಮಾವನ್ನು ಕಾಲೇಜ್ ಒಂದರಲ್ಲಿ ಚಿತ್ರೀಕರಣ ಮಾಡುತ್ತಿದ್ದೆವು. ಬಿಡುವು ಸಿಕ್ಕಾಗೆಲ್ಲಾ ಅಭಿಮಾನಿಗಳ ಜತೆ ಕಾಲ ಕಳೆಯಲು ಸಮಯವನ್ನು ನಿಗದಿ ಮಾಡಿಕೊಂಡಿದ್ದರು. ಅವರ ಆ ಗುಣಗಳು ಅಣ್ಣಾವರನ್ನು ನೆನಪಿಸುತ್ತಿತ್ತು’ ಎಂದು ಹೇಳಿಕೊಂಡಿದ್ದಾರೆ.

ಅದೇ ಸಿನಿಮಾದ  ಒಂದು ದೃಶ್ಯಕ್ಕಾಗಿ 12 ಟೇಕ್ ತೆಗೆದುಕೊಂಡಾಗಲೂ ಅದೇ ಹುಮ್ಮಸ್ಸಿನಿಂದ ಅಪ್ಪು ಕೆಲಸ ಮಾಡುತ್ತಿದ್ದರು. 

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.