ADVERTISEMENT

‘ಜೊತೆಗಿರದ ಜೀವ ಎಂದಿಗೂ ಜೀವಂತ’: ಅಪ್ಪು ಜತೆಗೆ ಯೋಗರಾಜ್ ಭಟ್ ಒಡನಾಟ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 6 ನವೆಂಬರ್ 2025, 12:25 IST
Last Updated 6 ನವೆಂಬರ್ 2025, 12:25 IST
<div class="paragraphs"><p>ಚಿತ್ರ ಕೃಪೆ:&nbsp;<strong><a href="https://www.instagram.com/prkstarfandom/">prkstarfandom</a></strong></p></div>

ಚಿತ್ರ ಕೃಪೆ: prkstarfandom

   

ಅಶ್ವಿನಿ ಪುನೀತ್ ರಾಜ್‌ಕುಮಾರ್ ಒಡೆತನದ ಪಿಆರ್‌ಕೆ ಆ್ಯಪ್‌ ಸಂದರ್ಶನದಲ್ಲಿ ಯೋಗರಾಜ್‌ ಭಟ್ ಮಾತನಾಡಿ, ಅಪ್ಪು ಅವರ ಸರಳತೆ, ಮುಗ್ದತೆ ಬಗ್ಗೆ ಕೊಂಡಾಡಿದ್ದಾರೆ.

‘ನನಗೆ ಪುನೀತ್ ರಾಜ್‌ಕುಮಾರ್ ಅವರು ನೆನಪಾಗದೇ ಇರೋ ದಿನವೇ ಇಲ್ಲ. ಜೊತೆಗಿರದ ಜೀವ ಎಂದಿಗೂ ಜೀವಂತ . ನಾನು ಅವರಿಗಾಗಿ ‘ಲಗೋರಿ’ ಎಂಬ ಸಿನಿಮಾದ ಕಥೆಯನ್ನು ಬರೆದಿದ್ದೆ' ಎಂದು ಯೋಗರಾಜ್‌ ಹೇಳಿಕೊಂಡಿದ್ದಾರೆ.

ADVERTISEMENT

‘ಹೀಗೆ ಒಂದು ದಿನ ನಡು ರಾತ್ರಿಯಲ್ಲಿ ಸಂಗೀತ ನಿರ್ದೇಶಕ ಮನೋಮೂರ್ತಿ ಅವರ ಮನೆಯನ್ನು ಹುಡುಕಿಕೊಂಡು ಹೋಗಿದ್ದೆ. ಆ ದಿನ ಸದಾಶಿವನಗರ ಸುತ್ತಮುತ್ತ ಕರೆಂಟ್ ಇರ್ಲಿಲ್ಲ. ದಾರಿ ಬದಿ ಫೋನ್‌ನಲ್ಲಿ ಮಾತನಾಡುತ್ತಿದ್ದ ಅಪರಿಚಿತರ ಒಬ್ಬರ ಬಳಿ ಮನೋಮೂರ್ತಿ ಅವರ ಮನೆ ವಿಳಾಸ ಕೇಳಿದ್ದೆ. ಆ ಸಮಯದಲ್ಲಿ ಅಪ್ಪು ಅವರಿಗೆ ನನ್ನ ಪರಿಚಯ ಇರಲಿಲ್ಲ. ಆದರೂ ನಾನು ಕೇಳಿದ ವಿಳಾಸವನ್ನು ನಡು ರಾತ್ರಿಯಲ್ಲಿ ತೋರಿಸಿದ್ದರು’ ಎಂದು ಯೋಗರಾಜ್‌ ಅವರು ಪುನೀತ್ ಅವರ ಸರಳತೆ ಬಗ್ಗೆ ಕೊಂಡಾಡಿದ್ದಾರೆ.

‘ಕೆಲವು ಸಾವುಗಳು.. ಸಾವು ಎನ್ನಲಾಗುವುದಿಲ್ಲ.. ಇದು ಸಾವಲ್ಲ.. ಅವರ ಹುಟ್ಟು ಅನ್ನಬಹುದಲ್ಲ..

ಹೆಚ್ಚಿಗೆ ಹೇಳುವುದು ಏನಿಲ್ಲ.. ವಿಷಯ ಇಷ್ಟೆ. ಅಪ್ಪು ಎಲ್ಲಿಗೂ ಹೋಗಿಲ್ಲ.. ಆತ ಎಲ್ಲಿಗೂ ಹೋಗಲ್ಲ..

ಅಪ್ಪು ಅಜರಾಮರ..ಅವಿಸ್ಮರಣೀಯ..ಪರಮ ಪುನೀತ ಎಂದರೆ ತಪ್ಪೇನಿಲ್ಲ’ ಎಂದು ಯೋಗರಾಜ್ ಭಟ್ ಅವರು ಪಿಆರ್‌ಕೆ ಆ್ಯಪ್‌ ಸಂದರ್ಶನದಲ್ಲಿ ಸಾಲುಗಳನ್ನು ಬರೆದು ಅಪ್ಪು ಅವರನ್ನು ನೆನಪಿಸಿಕೊಂಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.