
ಚಿತ್ರ ಕೃಪೆ: yuva_rajkumar
ಅಪ್ಪು ಅವರ ಜತೆಗಿನ ಉತ್ತಮ ನಂಟಿನ ಬಗ್ಗೆ ರಾಘವೇಂದ್ರ ರಾಜಕುಮಾರ್ ಮಕ್ಕಳು ನಟ ಯುವ ಹಾಗೂ ವಿನಯ್ ಅನೇಕ ಕಡೆಗಳಲ್ಲಿ ಹೇಳಿಕೊಂಡಿದ್ದಾರೆ. ಪುನೀತ್ ರಾಜ್‌ಕುಮಾರ್ ಜತೆಗೆ ಉತ್ತಮ ಬಾಂಧವ್ಯ ಹಾಗೂ ಅವರ ಫಿಟ್ನೆಸ್ ರಹಸ್ಯವನ್ನು ನಟ ವಿನಯ್ ಅವರು ತಮ್ಮ ಸಾಮಾಜಿಕ ಮಾಧ್ಯಮ ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.
ಇಂದು ಪುನೀತ್ ರಾಜ್‌ಕುಮಾರ್ ಅವರ ನಾಲ್ಕನೇ ವರ್ಷದ ಪುಣ್ಯಸ್ಮರಣೆ. ಅಪ್ಪು ಜತೆಗಿನ ಬಾಂಧವ್ಯದ ಬಗ್ಗೆ ಹಂಚಿಕೊಂಡ ಯುವ ಹಾಗೂ ವಿನಯ್, ‘ಮರೆತರೆ ಮರೆಯಲಾಗದ ನೆನಪು.. ತಿಳಿದರೂ ತಿಳಿಯಲಾಗದ ಒಗಟು.. ಹೃದಯಕ್ಕೆ ತಿಳಿಯದ ನೋವು .. ಬರೆದರು ಮುಗಿಸಲಾಗದ ಕವಿತೆ’ ಎಂದು ಭಾವನಾತ್ಮಕ ಸಾಲುಗಳನ್ನು ಬರೆದುಕೊಂಡಿದ್ದಾರೆ.
ವಿನಯ್ ಹಂಚಿಕೊಂಡ ವಿಡಿಯೊದಲ್ಲಿ ಮಾತನಾಡಿದ್ದ ಅಪ್ಪು, ಬಿಡುವಿದ್ದಾಗಲೆಲ್ಲ ವ್ಯಾಯಾಮ- ಧ್ಯಾನ ಮಾಡುತ್ತಿರುತ್ತೇವೆ ಎಂದಿದ್ದಾರೆ.
ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಅವರು ಡ್ಯಾನ್ಸ್, ಫೈಟ್, ಆ್ಯಕ್ಟಿಂಗ್, ನಿರೂಪಕ, ಗಾಯಕ, ಹೀಗೆ ಎಲ್ಲದಕ್ಕೂ ಸೈ ಎನಿಸಿಕೊಂಡಿದ್ದರು. ಸಿನಿಮಾ ಮಾತ್ರವಲ್ಲದೇ ಅನೇಕ ಸಮಾಜ ಸೇವೆಯ ಕಾರ್ಯದಲ್ಲೂ ತೊಡಗಿಸಿಕೊಂಡಿದ್ದರು. ಅಪ್ಪು ಅವರು ಆಗಲಿದ್ದರೂ ಅವರ ಹೆಸರು ಅಜಾರಮರ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.