ADVERTISEMENT

Pushpa-2 | ₹1,508 ಕೋಟಿ ಗಳಿಕೆ: ನಿಮ್ಮ ಪ್ರೀತಿಗೆ ಧನ್ಯವಾದ ಎಂದ ಅಲ್ಲು ಅರ್ಜುನ್

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 21 ಡಿಸೆಂಬರ್ 2024, 4:45 IST
Last Updated 21 ಡಿಸೆಂಬರ್ 2024, 4:45 IST
ನಟ ಅಲ್ಲು ಅರ್ಜುನ್
ನಟ ಅಲ್ಲು ಅರ್ಜುನ್   

ಹೈದರಾಬಾದ್‌: ಸುಕುಮಾರ್ ನಿರ್ದೇಶನದ ತೆಲುಗು ನಟ ಅಲ್ಲು ಅರ್ಜುನ್‌, ರಶ್ಮಿಕಾ ಮಂದಣ್ಣ ಅಭಿನಯದ ಪುಷ್ಪ–2 ಚಿತ್ರ ಬಿಡುಗಡೆಗೊಂಡ 15 ದಿನಗಳಲ್ಲಿ ₹1,508 ಕೋಟಿ ಗಳಿಕೆ ಕಂಡಿದೆ ಎಂದು ಚಿತ್ರತಂಡ ತಿಳಿಸಿದೆ.

ಈ ಸಂಬಂಧ ಇನ್‌ಸ್ಟಾಗ್ರಾಮ್‌ನಲ್ಲಿ ನಟ ಅಲ್ಲು ಅರ್ಜುನ್‌ ಪೋಸ್ಟ್‌ ಹಂಚಿಕೊಂಡು ಮಾಹಿತಿ ನೀಡಿದ್ದಾರೆ.

'ಪುಷ್ಪ–2 ಚಿತ್ರದ ಮೇಲೆ ನೀವು (ಅಭಿಮಾನಿಗಳು) ತೋರಿದ ಪ್ರೀತಿ ಮತ್ತು ಅಭಿಮಾನಕ್ಕೆ ಧನ್ಯವಾದಗಳು' ಎಂದು ಅಲ್ಲು ಪೋಸ್ಟ್‌ನಲ್ಲಿ ಬರೆದುಕೊಂಡಿದ್ದಾರೆ

ADVERTISEMENT

ಸದ್ಯ ಬಾಕ್ಸ್‌ ಆಫೀಸ್‌ನಲ್ಲಿ ಸದ್ದು ಮಾಡುತ್ತಿರುವ ‘ಪುಷ್ಪ–2 ದಿ ರೂಲ್‌’ ಚಿತ್ರ ಬಿಡುಗಡೆಯಾಗಿ ₹1,508 ಕೋಟಿ ಗಳಿಸಿದೆ ಎಂದು ಚಿತ್ರತಂಡ ತಿಳಿಸಿದೆ.

ಪುಷ್ಪ–2 ಅತ್ಯುತ್ತಮ ಪ್ರದರ್ಶನ ಕಾಣುತ್ತಿದ್ದು, ಬುಕ್‌ಮೈಶೋನಲ್ಲಿಯೂ ಅತ್ಯಧಿಕ ಟಿಕೆಟ್‌ ಬುಕಿಂಗ್ ಆಗಿದೆ ನಿಮ್ಮ ಬೆಂಬಲಕ್ಕಾಗಿ ಧನ್ಯವಾದಗಳು’ ಎಂದಿದೆ.

ಪುಷ್ಪ-2 ಚಿತ್ರದಲ್ಲಿ ಅಲ್ಲು ಅರ್ಜುನ್‌ ಜೊತೆ ರಶ್ಮಿಕಾ ಮಂದಣ್ಣ, ಫಹಾದ್ ಫಾಸಿಲ್, ಜಗಪತಿ ಬಾಬು, ಡಾಲಿ ಧನಂಜಯ ಸೇರಿದಂತೆ ಅನೇಕ ಖ್ಯಾತನಾಮರು ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.

ಡಿ.4ರಂದು ವಿಶ್ವದಾದ್ಯಂತ ಸಿನಿಮಾ ತೆರೆಕಂಡು ಪ್ರದರ್ಶನ ಕಾಣುತ್ತಿದೆ. ಈ ಚಿತ್ರ ತೆಲುಗು, ತಮಿಳು, ಕನ್ನಡ, ಹಿಂದಿ, ಬೆಂಗಾಳಿ, ಮಲಯಾಳ ಭಾಷೆಗಳಲ್ಲಿ ತೆರೆ ಕಂಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.