ADVERTISEMENT

‘ಪ್ಯಾಟೆ ಮಂದಿ ಕಾಡಿಗೆ ಬಂದ್ರು’ ವಿಜೇತ ಶರತ್ ಪ್ರಕಾಶ್ ಸಿನಿಮಾ ಫೆ.13ಕ್ಕೆ ತೆರೆಗೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 10 ಫೆಬ್ರುವರಿ 2026, 7:26 IST
Last Updated 10 ಫೆಬ್ರುವರಿ 2026, 7:26 IST
   

ಗಾಂಧಿನಗರದಲ್ಲಿ ಈಗ ಹೊಸಬರ ಹವಾ ಜೋರಾಗಿದೆ. ಇದೇ ಫೆಬ್ರುವರಿ 13ಕ್ಕೆ ಸ್ಯಾಂಡಲ್‍ವುಡ್ ಅಂಗಳದಲ್ಲಿ ಸಂಪೂರ್ಣ ಹೊಸಬರೇ ಸೇರಿಕೊಂಡು ನಿರ್ಮಿಸಿರುವ ‘ಸ್ಟಾರ್ ಸಿಂಬಲ್‌’ ಇರೋ ಸಿನಿಮಾ ತೆರೆಗೆ ಬರಲು ಸಜ್ಜಾಗಿದೆ.

ರಿಯಾಲಿಟಿ ಸ್ಟಾರ್ ಮತ್ತು ಪತ್ರಕರ್ತನ ಜುಗಲ್ ಬಂದಿ!

ಚಿತ್ರದ ನಾಯಕನಾಗಿ ‘ಪ್ಯಾಟೆ ಮಂದಿ ಕಾಡಿಗೆ ಬಂದ್ರು’ ರಿಯಾಲಿಟಿ ಶೋ ವಿನ್ನರ್ ಶರತ್ ಪ್ರಕಾಶ್ ಅಖಾಡಕ್ಕಿಳಿದಿದ್ದಾರೆ. ಜೊತೆಗೆ ಬಂಡವಾಳ ಕೂಡ ಶರತ್‌ ಪ್ರಕಾಶ್‌ ಅವರೇ ಹೂಡಿದ್ದಾರೆ. ನವ ಪ್ರತಿಭೆ ರಜತ ರಕ್ಷಾ ನಾಯಕಿಯಾಗಿ ಸಾಥ್ ನೀಡಿದ್ದಾರೆ.

ADVERTISEMENT

ಸ್ಮಶಾನ ಟು ರೌಡಿಸಂ ಕಥೆ!

ಸಾಮಾನ್ಯವಾಗಿ ರೌಡಿಸಂ ಮಾಡಿದವರು ಕೊನೆಗೆ ಸ್ಮಶಾನ ಸೇರುತ್ತಾರೆ. ಆದರೆ ಇಲ್ಲಿ ಸ್ಮಶಾನದಿಂದಲೇ ರೌಡಿಸಂಗೆ ಬಂದವರ ಕಥೆಯನ್ನು ನಿರ್ದೇಶಕ ವಿಜಯಸೂರ್ಯ ಹೇಳಲು ಹೊರಟಿದ್ದಾರೆ. ವಿಕಾಸ್ ವಸಿಷ್ಠ ಅವರ ಮ್ಯೂಸಿಕ್ ಮತ್ತು ವಿನು ಮನಸ್ಸು ಅವರ ಹಿನ್ನೆಲೆ ಸಂಗೀತ ಚಿತ್ರದ ಹೈಲೈಟ್. ಶಶಿಧರ್ ಪುಟ್ಟೇಗೌಡ ಅವರ ಎಡಿಟಿಂಗ್ ಕೆಲಸ ಕೂಡ ಟ್ರೇಲರ್‌ನಲ್ಲಿ ಎದ್ದು ಕಾಣುತ್ತಿದೆ.

ಖಾಸಗಿ ಸುದ್ದಿವಾಹಿನಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ವಾಸುದೇವ್ ಅವರು 'ಧ್ರುವ' ಎನ್ನುವ ಪಾತ್ರವೊಂದರಲ್ಲಿ ಕಾಣಿಸಿಕೊಂಡಿದ್ದಾರೆ. ಪ್ರದೀಪ್ ಪರಾಕ್ರಮ ಮತ್ತು ಬಲರಾಮ್ ಸೇರಿ ಹಲವು ಹೊಸಬರೇ ಪ್ರಮುಖ ಪಾತ್ರಗಳಲ್ಲಿದ್ದಾರೆ. ಒಟ್ಟಿನಲ್ಲಿ ಈ 'ಸ್ಟಾರ್' ತಂಡ ಫೆ. 13ಕ್ಕೆ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲು ಸಿದ್ಧವಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.