ADVERTISEMENT

ಚಿರಂಜೀವಿ ಸರ್ಜಾ ಮಗ ರಾಯನ್‌ಗೆ ಮೊದಲ ಹುಟ್ಟುಹಬ್ಬ: ಮೇಘನಾ ಮನೆಯಲ್ಲಿ ಸಡಗರ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 22 ಅಕ್ಟೋಬರ್ 2021, 5:27 IST
Last Updated 22 ಅಕ್ಟೋಬರ್ 2021, 5:27 IST
ರಾಯನ್‌ ರಾಜ್‌ ಸರ್ಜಾ ಜೊತೆಗೆ ನಟಿ ಮೇಘನಾ ರಾಜ್‌ (ಇನ್‌ಸ್ಟಾಗ್ರಾಂ ಚಿತ್ರ)
ರಾಯನ್‌ ರಾಜ್‌ ಸರ್ಜಾ ಜೊತೆಗೆ ನಟಿ ಮೇಘನಾ ರಾಜ್‌ (ಇನ್‌ಸ್ಟಾಗ್ರಾಂ ಚಿತ್ರ)   

ಬೆಂಗಳೂರು: ಜ್ಯೂ.ಚಿರು ಎಂದೇ ಕರೆಯಲ್ಪಡುವ ದಿವಂಗತ ನಟ ಚಿರಂಜೀವಿ ಸರ್ಜಾ ಹಾಗೂ ನಟಿ ಮೇಘನಾ ರಾಜ್‌ ಅವರ ಮಗ ರಾಯನ್‌ ರಾಜ್‌ ಸರ್ಜಾಗೆ ಇಂದು (ಶುಕ್ರವಾರ) ಮೊದಲ ಜನ್ಮದಿನದ ಸಂಭ್ರಮ.

ಮಗನ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ನಟಿ ಮೇಘನಾ, ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ರಾಯನ್‌ ಜೊತೆಗಿರುವ ಫೋಟೊವೊಂದನ್ನು ಹಂಚಿಕೊಂಡಿದ್ದು, ಶುಭ ಕೋರಿದ್ದಾರೆ.

‘ನಮ್ಮ ಮಗು, ನಮ್ಮ ಪ್ರಪಂಚ, ನಮ್ಮ ಜಗತ್ತು, ನಮ್ಮ ಸರ್ವಸ್ವ! ಚಿರು.. ನಮ್ಮ ರಾಜಕುಮಾರನಿಗೆ ಈಗ ಒಂದು ವರ್ಷ’ ಎಂಬ ಅಡಿ ಬರಹದೊಂದಿಗೆ ಮಗನ ಹುಟ್ಟುಹಬ್ಬದ ಸಂದೇಶವನ್ನು ಬರದುಕೊಂಡಿದ್ದಾರೆ. ಈ ಪೋಸ್ಟ್‌ಗೆ ನಿರ್ದೇಶಕ ಪನ್ನಗ ಭರಣ ಸೇರಿದಂತೆ ಅನೇಕ ಸೆಲೆಬ್ರಿಟಿಗಳು ಕಾಮೆಂಟ್​ ಮಾಡುವ ಮೂಲಕ ರಾಯನ್‌ಗೆ ಹುಟ್ಟುಹಬ್ಬದ ಶುಭಾಶಯ ತಿಳಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.