


ನಟಿ ರಾಧಿಕಾ ಪಂಡಿತ್ ಮಕ್ಕಳು ಹಾಗೂ ಪತಿ ಯಶ್ ಜತೆಗಿನ ಚಿತ್ರಗಳನ್ನು ಸಾಮಾಜಿಕ ಮಾಧ್ಯಮ ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.
‘ಕಣ್ಣುಗಳಲ್ಲಿನ ಆ ಹೊಳಪು, ಹೆಜ್ಜೆಯಲ್ಲಿ ವಸಂತ, ಪ್ರಾಮಾಣಿಕ ನಗು, ನಿಷ್ಕಲ್ಮಶ ಪ್ರೀತಿ ನಮ್ಮೆಲ್ಲರಿಗೂ ಸ್ಫೂರ್ತಿಯಾಗಲಿ ಎಂದು ಬರೆದುಕೊಂಡಿದ್ದಾರೆ.
ರಾಧಿಕಾ ಪಂಡಿತ್ ಕನ್ನಡ ಚಿತ್ರರಂಗದಲ್ಲಿ ತಮ್ಮ ನಟನೆ ಮೂಲಕ ಪ್ರೇಕ್ಷಕರ ಮನಗೆದ್ದಿದ್ದರು.
ಮದುವೆಗೂ ಮೊದಲು ರಾಧಿಕಾ ಪಂಡಿತ್ ಅವರು ಯಶ್ ಜತೆ, ರಾಮಾಚಾರಿ, ಸಂತು ಸ್ಟ್ರೇಟ್ ಫಾರ್ವರ್ಡ್, ಮೊಗ್ಗಿನ ಮನಸ್ಸು, ಡ್ರಾಮ ಚಿತ್ರದಲ್ಲಿ ನಟಿಸಿದ್ದರು
ಅಷ್ಟೆ ಅಲ್ಲ, ಕನ್ನಡ ಚಿತ್ರರಂಗದ ಅನೇಕ ನಟರ ಜತೆ ಚಿತ್ರಗಳಲ್ಲಿ ನಟಿಸಿದ್ದಾರೆ.
ಅದ್ದೂರಿ, ದೊಡ್ಮನೆ ಹುಡ್ಗ, ಅಲೆಮಾರಿ, ಸೇರಿದಂತೆ ಅನೇಕ ಚಿತ್ರಗಳಲ್ಲಿ ಬಣ್ಣ ಹಚ್ಚಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.