ಚಿತ್ರ: mutant_raghu
ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ‘ಕ್ವಾಟ್ಲೆ ಕಿಚನ್’ ರಿಯಾಲಿಟಿ ಶೋನಲ್ಲಿ ನಟ ರಾಘವೇಂದ್ರ ಎಸ್ ಹೊಂಡದಕೇರಿ ಅವರು ಫೈನಲಿಸ್ಟ್ ಆಗಿ ಆಯ್ಕೆಯಾಗಿದ್ದಾರೆ.
ಚಿತ್ರ: mutant_raghu
ಈ ಮಧ್ಯೆ ನಟ, ಸೆಲೆಬ್ರೆಟಿ ಜಿಮ್ ಕೋಚ್ ಆಗಿರುವ ರಾಘವೇಂದ್ರ ಅವರು ಸಾಮಾಜಿಕ ಜಾಲತಾಣದಲ್ಲಿ ಸಂಭಾವನೆ ವಿಚಾರಕ್ಕೆ ಬೇಸರ ವ್ಯಕ್ತಪಡಿಸಿದ್ದಾರೆ. ಕನ್ನಡದಲ್ಲಿ 'ಕ್ರಾಂತಿ', 'ಕಾಟೇರ' ಸಿನಿಮಾಗಳಲ್ಲಿ ನಟಿಸಿರುವ ನಟ ರಾಘವೇಂದ್ರ, ಸುಮಾರು ಐದಾರು ಗಂಟೆ ಪ್ರಾಸ್ಥೆಟಿಕ್ ಮೇಕಪ್ (ಕಠಿಣವಾದ) ಮಾಡಿಕೊಂಡು ನಟಿಸಿದರು, ಸಂಭಾವನೆ ನೀಡಿಲ್ಲ ಎಂದು ಇನ್‌ಸ್ಟಾಗ್ರಾಮ್‌ನಲ್ಲಿ ಅಳಲು ತೊಡಿಕೊಂಡಿದ್ದಾರೆ.
ನಟ ರಾಘವೇಂದ್ರ ಹೇಳಿದ್ದೇನು?
‘ನಾವು ಮಾಡಿದ ಕೆಲಸಕ್ಕೆ ಪ್ರೋತ್ಸಾಹ, ಮೆಚ್ಚುಗೆ ಸಿಗಲಿಲ್ಲ ಅಂದರೆ ಎಷ್ಟು ಬೇಸರ ಆಗುತ್ತೆ. ನಮ್ಮನ್ನ ಹುಳ ತರ ನೋಡಿಕೊಂಡಿದ್ದಾರೆ. ತುಂಬಾ ಬೇಸರ ಆಗುತ್ತಿದೆ. ನಾನು ಸಿನಿಮಾದಲ್ಲಿ ನಟಿಸೋಕೆ ಬಹಳ ಕಷ್ಟಪಟ್ಟಿದ್ದೆ. ಐದಾರು ಗಂಟೆ ಮೇಕಪ್ ಮಾಡಿಕೊಂಡು, ರಾತ್ರಿಯಿಂದ ಬೆಳಗಿನ ಜಾವ 6 ಗಂಟೆವರೆಗೂ ಹಾಗೇ ಇಟ್ಟುಕೊಂಡು ನಟಿಸಿದ್ದೇನೆ’ ಎಂದಿದ್ದಾರೆ.
ಮುಂದುವರೆದು, ‘ಈ ಮೇಕಪ್‌ನಿಂದ ನನ್ನ ಕಣ್ಣುಗಳು ಹಾಳಾಗಿ ಆಸ್ಪತ್ರೆಗೆ ಸೇರುವ ಹಾಗಾಯಿತು. ಈ ಪಾತ್ರಕ್ಕೆ ಮೇಕಪ್ ಮಾಡುವಾಗ ನನ್ನ ಚರ್ಮ ಸುಡುತ್ತಿರುವ ಅನುಭವ ಆಗಿತ್ತು. 15 ದಿನ ಶೂಟಿಂಗ್‌ನಲ್ಲಿ ತುಂಬಾ ಅನುಭವಿಸಿದ್ದೇನೆ. ಆದರೆ ಒಂದೂವರೆ ವರ್ಷ ಕಳೆದರೂ ಇನ್ನೂ ನನಗೆ ಹಣ ಕೊಟ್ಟಿಲ್ಲ. ನಮ್ಮವರೇ ನಮಗೆ ಸಪೋರ್ಟ್ ಮಾಡಿಲ್ಲ. ಮಲಯಾಳಂ ಹಾಗೂ ತೆಲುಗು ಟೀಮ್‌ಗೆ ಸಂಭಾವನೆ ನೀಡಿದ್ದಾರೆ. ಆದರೆ ಕನ್ನಡದ ಟೀಮ್‌ಗೆ ಮಾತ್ರ ಹಣ ಕೊಟ್ಟಿಲ್ಲ’.
‘ಮತ್ತೆ ನನಗೆ ಹೊಸ ಪ್ರೊಡಕ್ಷನ್ ಟೀಂ ಬಂದಿದೆ ಅಂತ ಕರೆ ಬಂತು. ಆಗ ಮೂರು ದಿನ ಶೂಟಿಂಗ್ ಇದೆ ಅಂದರು. ನನಗೆ 5 ಲಕ್ಷ ಸಿಗಬೇಕಿತ್ತು. ಆದರೆ, 2 ಲಕ್ಷ ಆದ್ರೂ ಕೊಡಿ ಅಂತ ಕೇಳಿದೆ. ಆಗ ಅವರು, ನಾವು ಕೊಡೋಕೆ ಆಗಲ್ಲ ಅಂತ ಹೇಳಿದ್ರು. ಸಿನಿಮಾ ಸೆಟ್‌ನಲ್ಲಿ ಕೆಲಸ ಮಾಡೋರಿಗೂ ಇನ್ನೂ ಹಣ ಕೊಟ್ಟಿಲ್ಲ’.
‘ನಾನು ಈ ವಿಡಿಯೊ ಮಾಡಿರುವುದು 'ವೃಷಭ' ಚಿತ್ರದ ಬಗ್ಗೆ. ಮೋಹನ್ ಲಾಲ್ ನಟನೆಯ ಚಿತ್ರಕ್ಕೆ ನಂದ ಕಿಶೋರ್ ಆಕ್ಷನ್ ಕಟ್ ಹೇಳಿದ್ದಾರೆ. 2 ವರ್ಷಗಳ ಹಿಂದೆ ಕರೆ ಮಾಡಿ, ‘ಈ ಚಿತ್ರದಲ್ಲಿ ಪ್ರಮುಖ ಪಾತ್ರ ಇದೆ, ವಿಲನ್ ಪಾತ್ರ ಎಂದರು. ಅದಕ್ಕೆ ನೀವು ಪ್ರಾಸ್ಥೆಟಿಕ್ ಮೇಕಪ್ (ಕಠಿಣವಾದ) ಹಾಕಿಕೊಳ್ಳಬೇಕು, ಇದೇ ಮೊದಲ ಬಾರಿಗೆ ಭಾರತದಲ್ಲಿ ಮಾಡ್ತಿರೋದು ಅಂತ ಹೇಳಿದರು. ಆಗ ಎಲ್ಲದ್ದಕ್ಕೂ ಒಪ್ಪಿಕೊಂಡೆ. ಬಳಿಕ 15 ದಿನಗಳ ಕಾಲ ಶೂಟಿಂಗ್ ಮಾಡಿದ್ರು. ಕಾರಣಾಂತರಗಳಿಂದ ಸಿನಿಮಾ ನಿಂತು ಹೊಯ್ತು’ ಎಂದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.