ADVERTISEMENT

ಹುಟ್ಟುಹಬ್ಬದ ಸಂಭ್ರಮದಲ್ಲಿ ಸೂಪರ್‌ಸ್ಟಾರ್: ತಲೈವಾ ನಟನೆಯ ಪಡಿಯಪ್ಪ ಮರು ಬಿಡುಗಡೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 12 ಡಿಸೆಂಬರ್ 2025, 6:20 IST
Last Updated 12 ಡಿಸೆಂಬರ್ 2025, 6:20 IST
<div class="paragraphs"><p>ಸೂಪರ್‌ಸ್ಟಾರ್ ರಜನಿಕಾಂತ್</p></div>

ಸೂಪರ್‌ಸ್ಟಾರ್ ರಜನಿಕಾಂತ್

   

ತಮಿಳು ಸೂಪರ್‌ಸ್ಟಾರ್ ರಜನಿಕಾಂತ್ ಅವರ ಅಭಿಮಾನಿಗಳಿಗೆ ಒಂದೇ ದಿನ ಮೂರು ಶುಭ ಸುದ್ದಿ ಸಿಕ್ಕಿದೆ. ಮೊದಲನೆಯದಾಗಿ ರಜನಿಕಾಂತ್ ಅವರ 75ನೇ ಹುಟ್ಟುಹಬ್ಬ. ಎರಡನೆಯದು ಅವರು ಚಿತ್ರರಂಗಕ್ಕೆ ಪದಾರ್ಪಣೆ ಮಾಡಿ ಇಂದಿಗೆ 50 ವರ್ಷ ಪೂರೈಸಿದ್ದಾರೆ. ಮೂರನೆಯದು ಅವರ ಜನ್ಮದಿನದ ಪ್ರಯುಕ್ತ ‘ಪಡಿಯಪ್ಪ’ ಸಿನಿಮಾ ಮರು ಬಿಡುಗಡೆ ಮಾಡಲಾಗಿದೆ.

ರಜನಿಕಾಂತ್ ಜನ್ಮದಿನದ ಪ್ರಯುಕ್ತ ಇದೇ ಡಿಸೆಂಬರ್ 12ರಂದು 4ಕೆ ಹಾಗೂ ಅತ್ಯಾಧುನಿಕ ಸೌಂಡ್ ತಂತ್ರಜ್ಞಾನದೊಂದಿಗೆ ‘ಪಡಿಯಪ್ಪ’ ಮರು ಬಿಡುಗಡೆ ಮಾಡಲಾಗುವುದು ಎಂದು ರಜನಿಕಾಂತ್ ಪುತ್ರಿ ಐಶ್ವರ್ಯ ಮಾಹಿತಿ ಹಂಚಿಕೊಂಡಿದ್ದರು. ಅದರಂತೆ, 1995ರ ಏಪ್ರಿಲ್ 10ರಂದು ಬಿಡುಗಡೆಯಾಗಿದ್ದ ಪಡಿಯಪ್ಪ ಸಿನಿಮಾ ಇಂದು ಮರು ಬಿಡುಗಡೆಯಾಗಿದೆ.

ADVERTISEMENT

ಅಂದಿನ ಕಾಲದಲ್ಲೇ ಪಡಿಯಪ್ಪ ಸಿನಿಮಾ ತಮಿಳುನಾಡು ಸೇರಿದಂತೆ ದೇಶದ ಅನೇಕ ಕಡೆ 150ಕ್ಕೂ ಹೆಚ್ಚು ದಿನಗಳ ಯಶಸ್ವಿ ಪ್ರದರ್ಶನ ಕಂಡಿತ್ತು. ಇದೀಗ 4ಕೆ ಹಾಗೂ ಅತ್ಯಾಧುನಿಕ ಸೌಂಡ್ ತಂತ್ರಜ್ಞಾನದೊಂದಿಗೆ ಮತ್ತೆ ಪಡಿಯಪ್ಪ ಸಿನಿಮಾವನ್ನು ಪ್ರೇಕ್ಷಕರು ಕಣ್ಣು ತುಂಬಿಕೊಳ್ಳುತ್ತಿದ್ದಾರೆ.

ಈ ಚಿತ್ರದಲ್ಲಿ ರಜನಿಕಾಂತ್ ಅವರಿಗೆ ಜೊತೆಯಾಗಿ ರಮ್ಯ ಕೃಷ್ಣನ್, ಸೌಂದರ್ಯ, ಶಿವಾಜಿ ಗಣೇಶನ್, ನಾಸರ್ ಮುಂತಾದವರು ಅಭಿನಯಿಸಿದ್ದರು. ಎ.ಆರ್. ರೆಹಮಾನ್ ಅವರ ಸಂಗೀತ ಚಿತ್ರಕ್ಕಿತ್ತು. ಅರುಣಾಚಲ ಸಿನಿ ಕ್ರಿಯೇಷನ್ಸ್‌ ನಿರ್ಮಾಣ ಮಾಡಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.