ADVERTISEMENT

ಎರಡನೇ ಮಗುವಿನ ನಿರೀಕ್ಷೆಯಲ್ಲಿ ನಟ ರಾಮ್ ಚರಣ್- ಉಪಾಸನಾ ದಂಪತಿ: ವಿಡಿಯೊ ಇಲ್ಲಿದೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 23 ಅಕ್ಟೋಬರ್ 2025, 9:48 IST
Last Updated 23 ಅಕ್ಟೋಬರ್ 2025, 9:48 IST
<div class="paragraphs"><p>ರಾಮ್ ಚರಣ್ ತೇಜ್ ಕುಟುಂಬ</p></div>

ರಾಮ್ ಚರಣ್ ತೇಜ್ ಕುಟುಂಬ

   

ಚಿತ್ರ: ಇನ್‌ಸ್ಟಾಗ್ರಾಮ್

ಟಾಲಿವುಡ್ ನಟ ರಾಮ್ ಚರಣ್ ಮತ್ತು ಪತ್ನಿ ಉಪಾಸನಾ ದಂಪತಿ ಎರಡೆರಡು ಸಂಭ್ರಮದ ಖುಷಿಯಲ್ಲಿದ್ದಾರೆ. ಒಂದು ದೀಪಾವಳಿ ಸಂಭ್ರಮದಲ್ಲಿದ್ದರೆ ಮತ್ತೊಂದು, ನಟ ರಾಮ್ ಚರಣ್ ಮತ್ತು ಪತ್ನಿ ಉಪಾಸನಾ ತಮ್ಮ ಎರಡನೇ ಮಗುವಿನ ನಿರೀಕ್ಷೆಯಲ್ಲಿದ್ದಾರೆ. 2023ರಲ್ಲಿ ದಂಪತಿ ತಮ್ಮ ಮೊದಲ ಮಗುವಿಗೆ ಜನ್ಮ ನೀಡಿದ್ದರು. ಜೂನ್ 30ರಂದು ಮೊದಲ ಮಗಳಿಗೆ ಕ್ಲೀಂ ಕಾರ ಎಂದು ನಾಮಕರಣ ಮಾಡಿದ್ದರು.

ADVERTISEMENT

ಇದೀಗ ಎರಡನೇ ಮಗುವಿನ ನಿರೀಕ್ಷೆಯಲ್ಲಿರುವ ಉಪಾಸನಾ ಅವರಿಗೆ ಕೊನಿಡೇಲಾ ನಿವಾಸದಲ್ಲಿ ದೀಪಾವಳಿ ಹಬ್ಬದ ಜೊತೆಗೆ ಸೀಮಂತ ಕಾರ್ಯಕ್ರಮವನ್ನು ಮಾಡಿದ್ದಾರೆ. ಈ ಖುಷಿಯ ವಿಚಾರವನ್ನು ನಟ ರಾಮ್ ಚರಣ್ ಹಾಗೂ ಉಪಾಸನ ದಂಪತಿ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ. ವಿಡಿಯೊ ಜೊತೆಗೆ ‘ಈ ದೀಪಾವಳಿ ಆಚರಣೆ ಇಮ್ಮಡಿಗೊಂಡಿದೆ. ಪ್ರೀತಿಯನ್ನು ಹೆಚ್ಚು ಮಾಡಿದೆ. ಜೊತೆಗೆ ಆಶೀರ್ವಾದಗಳನ್ನು ದುಪ್ಪಟ್ಟು ಮಾಡಿದೆ’ ಎಂದು ಶೀರ್ಷಿಕೆ ನೀಡಿದ್ದಾರೆ.

ಉಪಾಸನಾ ಹಂಚಿಕೊಂಡ ವಿಡಿಯೊದಲ್ಲಿ ಇಡೀ ಚಿರಂಜೀವಿ ಕುಟುಂಬಸ್ಥರು ಕಾರ್ಯಕ್ರಮದಲ್ಲಿ ಭಾಗಿಯಾಗಿರುವುದನ್ನು ಕಾಣಬಹುದು. ಚಿರಂಜೀವಿ ಅವರ ಪತ್ನಿ ಸುರೇಖಾ, ವರುಣ್ ತೇಜ್, ಲಾವಣ್ಯ ತ್ರಿಪಾಠಿ, ವೆಂಕಟೇಶ್ ದಗ್ಗುಬಾಟಿ, ನಯನತಾರಾ, ವಿಘ್ನೇಶ್ ಶಿವನ್ ಅವರ ಇಬ್ಬರು ಮಕ್ಕಳು, ಪವನ್ ಕಲ್ಯಾಣ್ ದಂಪತಿ ಕೂಡ ಹಾಜರಿದ್ದರು. ಇನ್ನು, ಇದೇ ವಿಡಿಯೊ ಎಲ್ಲೆಡೆ ಹರಿದಾಡುತ್ತಿದ್ದು, ಅಭಿಮಾನಿಗಳು ಮತ್ತು ಸಿನಿ ತಾರೆಯರು ದಂಪತಿಗೆ ಕಾಮೆಂಟ್ ಮೂಲಕ ಶುಭ ಹಾರೈಸುತ್ತಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.