ಚಿತ್ರ ಕೃಪೆ: divyaspandana
ಸ್ಯಾಂಡಲ್ವುಡ್ ನಟಿ ರಮ್ಯಾ ಅವರು ಇತ್ತೀಚೆಗೆ ಇನ್‌ಸ್ಟಾಗ್ರಾಮ್‌ನಲ್ಲಿ ಸಾಕಷ್ಟು ಚಿತ್ರಗಳನ್ನು ಹಂಚಿಕೊಂಡಿದ್ದರು. ಅದರಲ್ಲಿ ರಾಘವೇಂದ್ರ ರಾಜ್‌ಕುಮಾರ್ ಅವರ ಹಿರಿಯ ಪುತ್ರ, ನಟ ವಿನಯ್ ರಾಜ್‌ಕುಮಾರ್ ಜೊತೆಗೆ ಆತ್ಮೀಯವಾಗಿ ಕಾಣಿಸಿಕೊಂಡಿದ್ದರು. ಇದೇ ಫೋಟೊಗಳು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿವೆ.
ಚಿತ್ರ ಕೃಪೆ: divyaspandana
ನಟಿ ರಮ್ಯಾ ಅವರು ಹಂಚಿಕೊಂಡ ಫೋಟೊಗಳ ಜೊತೆಗೆ ‘ನಾನು ನನ್ನ ಬೆಸ್ಟ್ ಕಂಪೆನಿ ಜೊತೆ ಎಂದು ವಿನಯ್ ರಾಜ್‌ಕುಮಾರ್ ಅವರನ್ನು ಟ್ಯಾಗ್ ಮಾಡಿದ್ದರು. ಇದೇ ಚಿತ್ರಗಳನ್ನು ನೋಡಿದ ಕೆಲವರು ನಟಿ ರಮ್ಯಾ ಹಾಗೂ ವಿನಯ್ ಅವರ ಫೋಟೊಗಳನ್ನ ಟ್ರೋಲ್ ಮಾಡುತ್ತಿದ್ದಾರೆ. ಅದರಲ್ಲಿ ನಟಿ ರಮ್ಯಾ, ವಿನಯ್ ರಾಜ್‌ಕುಮಾರ್ ತೆಗೆದ ಒಂದು ಸೆಲ್ಪಿಯನ್ನು ಸಿಕ್ಕಾಪಟ್ಟೆ ಟ್ರೋಲ್ ಮಾಡಿದ್ದಾರೆ.
ಇನ್ನು, ಟ್ರೋಲ್ ಹೆಚ್ಚಾಗುತ್ತಿದ್ದಂತೆ ನಟಿ ರಮ್ಯಾ ಸ್ಪಷ್ಟನೆ ಕೊಟ್ಟಿದ್ದಾರೆ. ‘‘ನೀವು ತುಂಬಾ ತಮಾಷೆ ಮಾಡುತ್ತಿದ್ದೀರಾ. ವಿನಯ್ ನನ್ನ ಚಿಕ್ಕ ತಮ್ಮನಿದ್ದಂತೆ. ನಿಮ್ಮ ಕಲ್ಪನೆ, ಮಾತುಗಳ ಬಗ್ಗೆ ಹಿಡಿತವಿರಲಿ’’ ಎಂದು ಟ್ರೋಲ್ ಮಾಡುತ್ತಿರುವವರಿಗೆ ನಟಿ ರಮ್ಯಾ ತಿರುಗೇಟು ಕೊಟ್ಟಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.