
ವಿಜಯ್ ದೇವರಕೊಂಡ, ರಶ್ಮಿಕಾ ಮಂದಣ್ಣ
ಚಿತ್ರ: ಇನ್‌ಸ್ಟಾಗ್ರಾಂ
ನಟ ವಿಜಯ್ ದೇವರಕೊಂಡ ಹಾಗೂ ನಟಿ ರಶ್ಮಿಕಾ ಮಂದಣ್ಣ ಫೆ.26ರಂದು ಹೊಸ ಜೀವನಕ್ಕೆ ಕಾಲಿಟ್ಟಿದ್ದಾರೆ. ಮದುವೆ ಬೆನ್ನಲ್ಲೆ ವಿರೋಶ್ ಜೋಡಿ ಅಭಿಮಾನಿಗಳನ್ನು ಭೇಟಿಯಾಗುವ ಖುಷಿಯಲ್ಲಿದ್ದಾರೆ.
ಈ ನಡುವೆ ಸಾಮಾಜಿಕ ಮಾಧ್ಯಮದಲ್ಲಿ ರಶ್ಮಿಕಾ ಮಂದಣ್ಣ ಹಾಗೂ ವಿಜಯ್ ದೇವರಕೊಂಡ ತಮ್ಮ ಮದುವೆಯ ಸಂಗೀತ ಪಾರ್ಟಿಯ ಫೋಟೊಗಳನ್ನು ಹಂಚಿಕೊಂಡಿದ್ದಾರೆ.
ಸಂಗೀತ ಕಾರ್ಯಕ್ರಮದ ಹಲವಾರು ಫೋಟೊಗಳನ್ನು ಹಂಚಿಕೊಂಡ ಈ ಜೋಡಿ ‘ಪ್ರೀತಿ, ಕಣ್ಣೀರು, ನಗು, ಸಂಗೀತ, ಹಾಡುಗಾರಿಕೆ, ಮಿಂಚುಗಳಿಂದ ತುಂಬಿದ ಇಡೀ ರಾತ್ರಿ ನಾವು ನೃತ್ಯ ಮಾಡಿದೆವು. ಅದು ನಿಜಕ್ಕೂ ಅತ್ಯಂತ ಮೋಜಿನ ರಾತ್ರಿಯಾಗಿತ್ತು’ ಎಂದು ಬರೆದುಕೊಂಡಿದ್ದಾರೆ.
ಫೆಬ್ರುವರಿ 26ರಂದು ಉದಯಪುರದ ಐಟಿಸಿ ಮೆಮೆಂಟೋಸ್‌ನಲ್ಲಿ ನಡೆದ ರಶ್ಮಿಕಾ ಹಾಗೂ ವಿಜಯ್ ಅವರ ಮದುವೆಗೆ ಕೆಲ ಸೆಲೆಬ್ರಿಟಿಗಳು, ರಾಜಕೀಯ ನಾಯಕರು ಸೇರಿ 100 ಅತಿಥಿಗಳು ಹಾಜರಿದ್ದರು.
ಎರಡೂ ಕುಟುಂಬಗಳು ಮತ್ತು ಆಪ್ತ ಸ್ನೇಹಿತರ ಸಮ್ಮುಖದಲ್ಲಿ ಈ ಜೋಡಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಸಂಗೀತ ಕಾರ್ಯಕ್ರಮದಲ್ಲಿ ವಿಜಯ್ ಹಾಗೂ ರಶ್ಮಿಕಾ ಇಬ್ಬರ ಕುಟುಂಬದ ಸದಸ್ಯರು ಭಾಗಿಯಾಗಿದ್ದರು.
ವಿಜಯ್ ದೇವರಕೊಂಡ ಜೊತೆಗೆ ವೇದಿಕೆ ಮೇಲೆ ರಶ್ಮಿಕಾ ಮಂದಣ್ಣ ನೃತ್ಯ ಮಾಡುವ ಮೂಲಕ ಎಲ್ಲರ ಗಮನ ಸೆಳೆದರು.
ಈ ಸಂಗೀತ ಪಾರ್ಟಿಯಲ್ಲಿ ವಿರೋಶ್ ಜೋಡಿ ಕುಣಿದು ಕುಪ್ಪಳಿದ್ದಾರೆ. ವಿಶೇಷ ಏನೆಂದರೆ ವಿಜಯ್ ದೇವರಕೊಂಡ ಸಹೋದರನ ಜೊತೆಗೆ ರಶ್ಮಿಕಾ ಮಂದಣ್ಣ ಭರ್ಜರಿಯಾಗಿ ಡ್ಯಾನ್ಸ್ ಮಾಡಿದ್ದಾರೆ.
ಸಂಗೀತ ಕಾರ್ಯಕ್ರಮದಲ್ಲಿ ವಿಜಯ್ ದೇವರಕೊಂಡ ಹಾಗೂ ರಶ್ಮಿಕಾ ಮಂದಣ್ಣ ತುಂಬಾ ಸುಂದರವಾಗಿ ಕಾಣಿಸಿದ್ದರು.
ವಿಜಯ್ ಜೊತೆಗೆ ಕ್ಲಿಕ್ಕಿಸಿಕೊಂಡ ಫೋಟೊಗಳನ್ನು ನಟಿ ರಶ್ಮಿಕಾ ಮಂದಣ್ಣ ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.
ಕುಟುಂಬಸ್ಥರು, ಅತಿಥಿಗಳು, ಸ್ನೇಹಿತರಿಂದ ಕೂಡಿದ ತುಂಬು ಸಮಾರಂಭದಲ್ಲಿ ನವ ಜೋಡಿ ಬಹಳ ಖುಷಿಯಿಂದ ಕಾಲ ಕಳೆದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.