
ವಿಜಯ್ ದೇವರಕೊಂಡ, ನಟಿ ರಶ್ಮಿಕಾ ಮಂದಣ್ಣ
ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ಮದುವೆಯ ಬಗ್ಗೆ ಇಷ್ಟು ದಿನ ಹರಿದಾಡುತ್ತಿದ್ದ ಊಹಾಪೋಹಗಳಿಗೆ, ಗಾಳಿ ಸುದ್ದಿಗಳಿಗೆ ಕೊನೆಗೂ ತೆರೆ ಬಿದ್ದಿದೆ.
ಸ್ವತಃ ರಶ್ಮಿಕಾ ಅವರೇ ಸಾಮಾಜಿಕ ಮಾಧ್ಯಮ ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್ ಹಂಚಿಕೊಳ್ಳುವ ಮೂಲಕ ವಿಜಯ್ ದೇವರಕೊಂಡ ಜತೆ ಮದುವೆಯಾಗುತ್ತಿರುವ ಬಗ್ಗೆ ಖಚಿತಪಡಿಸಿದ್ದಾರೆ.
ಫೆ.26ರಂದು ಮದುವೆ ನಡೆಯಲಿದೆ ಎಂದು ವರದಿಯಾಗಿದೆ. ಆದರೆ ರಶ್ಮಿಕಾ ಪೋಸ್ಟ್‌ನಲ್ಲಿ ಮದುವೆ ದಿನಾಂಕವನ್ನು ಉಲ್ಲೇಖಿಸಿಲ್ಲ.
ರಶ್ಮಿಕಾ ಪೋಸ್ಟ್‌ನಲ್ಲಿ ಏನಿದೆ?
ಅಭಿಮಾನಿಗಳನ್ನು ಉದ್ದೇಶಿಸಿ ಪೋಸ್ಟ್ ಹಂಚಿಕೊಂಡಿರುವ ರಶ್ಮಿಕಾ, ’ನಾವು ಏನಾದರೂ ಹೊಸದನ್ನು ಮಾಡುವ ಮೊದಲು, ಹೊಸದನ್ನು ಆರಿಸಿಕೊಳ್ಳುವ ಮೊದಲು ನೀವು ನಮ್ಮೊಂದಿಗೆ ಇರುತ್ತೀರಿ. ನೀವೇ ಪ್ರೀತಿಯಿಂದ ನಮಗೆ ‘VIROSH’ (ವಿರೋಶ್) ಎಂದು ಕರೆದಿದ್ದೀರಿ. ಆದ್ದರಿಂದ ಇಂದು, ನಾವು ಒಂದಾಗುತ್ತಿರುವ ಈ ಶುಭ ಸಂದರ್ಭಕ್ಕೆ ಅದೇ ಹೆಸರನ್ನು ಇಡುತ್ತಿದ್ದೇವೆ. ನಾವೀಗ ಇದನ್ನು 'The Wedding of VIROSH’ ಎಂದು ಕರೆಯಲು ಬಯಸುತ್ತೇವೆ, ನಮಗೆ ಇಷ್ಟೊಂದು ಪ್ರೀತಿ ಕೊಟ್ಟಿದ್ದೀರಿ. ನೀವು ಎಂದಿಗೂ ನಮ್ಮ ಬದುಕಿನ ಭಾಗವಾಗಿರುತ್ತೀರಿ’ ಎಂದು ಬರೆದುಕೊಂಡಿದ್ದಾರೆ.
'VIROSH' ಎಂದರೆ…
ಅಭಿಮಾನಿಗಳು ರಶ್ಮಿಕಾ ಮತ್ತು ವಿಜಯ್ ದೇವರಕೊಂಡ ಹೆಸರನ್ನು ಸೇರಿಸಿ ವಿರೋಶ್- ‘VIROSH’ ಎಂದು ಕರೆದಿದ್ದಾರೆ. ಅಂದರೆ VIjay + ROSHmika ಎಂದರ್ಥವಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.