
ಇಂದು (ಡಿಸೆಂಬರ್ 12) ನಟಿ ರುಕ್ಮಿಣಿ ವಸಂತ್ ಅವರ ಜನ್ಮದಿನ. ಈ ಹಿನ್ನೆಲೆಯಲ್ಲಿ ಅವರ ಸ್ನೇಹಿತೆಯಾಗಿರುವ ಚೈತ್ರಾ ಆಚಾರ್ ಅವರು, ‘ನನ್ನ ಒಂದು ಜಗತ್ತು ರುಕ್ಕಮ್ಮ‘ ಎಂದು ಬರೆದುಕೊಂಡು ಸಾಮಾಜಿಕ ಮಾಧ್ಯಮ ಇನ್‌ಸ್ಟಾಗ್ರಾಂನಲ್ಲಿ ಶುಭ ಕೋರಿದ್ದಾರೆ.
ರುಕ್ಮಿಣಿ ವಸಂತ್ ಜತೆಗಿನ ಒಡನಾಟವನ್ನು ಹಂಚಿಕೊಂಡ ನಟಿ ಚೈತ್ರಾ ಆಚಾರ್, ‘ನನ್ನ ಒಂದು ಜಗತ್ತು ರುಕ್ಕಮ್ಮನ ಬಗ್ಗೆ ಮಾತನಾಡಲು ಎಲ್ಲಿಂದ ಆರಂಭಿಸಬೇಕು. ನಾನು ನಿನ್ನನ್ನು ಎಷ್ಟು ಇಷ್ಟ ಪಡುತ್ತೀನಿ ಎಂದು ನಿನಗೆ ಗೊತ್ತೆ ಇದೆ. ಆ ಪ್ರೀತಿ ದಿನದಿಂದ ದಿನಕ್ಕೆ ಹೆಚ್ಚುತ್ತಾ ಹೋಗುತ್ತದೆ. ನೀನು ಎಲ್ಲಿದ್ದರೂ, ಏನೇ ಮಾಡುತ್ತಿದ್ದರೂ ನಿನ್ನ ಪ್ರತಿಭೆಗೆ, ಅದಕ್ಕಿಂತ ಮುಖ್ಯವಾಗಿ ನಿನ್ನ ವ್ಯಕ್ತಿತ್ವಕ್ಕೆ ನಾನೇ ನಿನ್ನ ದೊಡ್ಡ ಚಿಯರ್‌ಲೀಡರ್, ಅಭಿಮಾನಿಯಾಗಿ ಇರುತ್ತೇನೆ‘ ಎಂದು ಬರೆದುಕೊಂಡಿದ್ದಾರೆ.
‘ನನ್ನ ಹಾಸ್ಯಕ್ಕೆ ಯಾರೇ ನಗದಿದ್ದರೂ ನೀನು ಸಂತೋಷವಾಗುತ್ತೀಯಾ. ನೀನು ನನಗೆ ಆತ್ಮೀಯ ಗೆಳತಿಯಾಗಿ ಸಿಕ್ಕಿರುವುದಕ್ಕೆ, ನೀನು ನೀನಾಗಿರುವುದಕ್ಕೆ ಧನ್ಯವಾದಗಳು. ನಿನ್ನ ಸುಖ, ದುಃಖಗಳಲ್ಲಿ ಸದಾ ನಾನು ನಿನ್ನ ಜೊತೆ ಇರುತ್ತೇನೆ‘ ಎಂದು ಬರೆದುಕೊಂಡು ಶುಭ ಹಾರೈಸಿದ್ದಾರೆ.
ರಕ್ಷಿತ್ ಶೆಟ್ಟಿ ನಟನೆಯ ‘ಸಪ್ತ ಸಾಗರದಾಚೆ ಎಲ್ಲೋ’ ಸೈಡ್ಎ' ಅಲ್ಲಿ ಪ್ರಿಯಾ ಪಾತ್ರಧಾರಿಯಾಗಿ ರುಕ್ಮಿಣಿ ವಸಂತ್ ನಟಿಸಿದ್ದರೆ, ‘ಸಪ್ತ ಸಾಗರದಾಚೆ ಎಲ್ಲೋ’ ಸೈಡ್ ಬಿ‘ ಅಲ್ಲಿ ನಟಿ ಚೈತ್ರಾ ಆಚಾರ್ ಸುರಭಿ ಪಾತ್ರದಲ್ಲಿ ನಟಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.