ADVERTISEMENT

ಜಪಾನ್‌ ಪ್ರಕೃತಿ ಮಡಿಲಲ್ಲಿ ನಟಿ ಸಾಯಿ ಪಲ್ಲವಿ ಮೋಜು ಮಸ್ತಿ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 10 ಫೆಬ್ರುವರಿ 2026, 12:43 IST
Last Updated 10 ಫೆಬ್ರುವರಿ 2026, 12:43 IST
<div class="paragraphs"><p>ಜಪಾನ್‌ನಲ್ಲಿ ನಟಿ ಸಾಯಿ ಪಲ್ಲವಿ</p></div>

ಜಪಾನ್‌ನಲ್ಲಿ ನಟಿ ಸಾಯಿ ಪಲ್ಲವಿ

   

ಕೃಪೆ: ಇನ್‌ಸ್ಟಾಗ್ರಾಂ 

ನಸುಗೆಂಪು ಕೆನ್ನೆ, ಅತಿ ಮೇಕಪ್‌ ಇಲ್ಲದ ಸಹಜ ಸೌಂದರ್ಯ, ನೃತ್ಯ, ನಟನೆಯ ಮೂಲಕ ಗಮನ ಸೆಳೆದಿರುವ ನಟಿ ಸಾಯಿ ಪಲ್ಲವಿ ಅವರು ಜಪಾನ್‌ ಪ್ರವಾಸ ಕೈಗೊಂಡಿದ್ದಾರೆ.

ADVERTISEMENT

ಜಪಾನ್‌ನಲ್ಲಿ ಹಿಮ ಬೀಳುತ್ತಿದ್ದ ಅದನ್ನು ಆನಂದಿಸಿದ ಕ್ಷಣಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

ಸಾಯಿಪಲ್ಲವಿ ಅವರು ಹಂಚಿಕೊಂಡ ವಿಡಿಯೊದಲ್ಲಿ ‘ಹಿಮದ ಮೇಲೆ ಕುಣಿದು ಕುಪ್ಪಳಿಸಿದ್ದಾರೆ. ಹಿಮ ಮಳೆಯನ್ನು ತಮ್ಮ ಮೊಬೈಲ್‌ನಲ್ಲಿ ಸೆರೆ ಹಿಡಿದಿದ್ದಾರೆ. ಹಿಮದ ಮೇಲೆ ಸ್ಕೀಯಿಂಗ್ ಮಾಡಿದ್ದಾರೆ. ಪೆಂಗ್ವಿನ್‌ಗಳ ಆಟ, ಸೂರ್ಯಾಸ್ತದ ಕ್ಷಣಗಳನ್ನು ಸೆರೆ ಹಿಡಿಯುವ ಮೂಲಕ ಎಂಜಾಯ್‌ ಮಾಡಿದ ದೃಶ್ಯಗಳನ್ನು ಕಾಣಬಹುದು.

ಸದ್ಯ, ಸಾಯಿ ಪಲ್ಲವಿ ಅವರು ಅಮಿರ್ ಖಾನ್ ಬ್ಯಾನರ್ ಅಡಿಯಲ್ಲಿ ನಿರ್ಮಾಣವಾಗುತ್ತಿರುವ ‘ಏಕ್ ದಿನ್’ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರವನ್ನು ಸುನಿಲ್ ಪಾಂಡೆ ಅವರು ನಿರ್ದೇಶಿಸಿದ್ದಾರೆ. ಈ ಚಿತ್ರವು ಮೇ 1ರಂದು ತೆರೆಗೆ ಬರಲಿದೆ.

ಇದಲ್ಲದೆ ಬಹುನಿರೀಕ್ಷಿತ ‘ರಾಮಾಯಣ‘ ಚಿತ್ರದಲ್ಲಿ ಸಾಯಿ ಪಲ್ಲವಿ ಅವರು ಸೀತೆ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ. ಈಗಾಗಲೇ ಈ ಚಿತ್ರದ ಟೀಸರ್ ಬಿಡುಗಡೆಯಾಗಿದ್ದು ಲಕ್ಷಕ್ಕೂ ಅಧಿಕ ವೀಕ್ಷಣೆ ಕಂಡು ಪ್ರೇಕ್ಷಕರ ಗಮನ ಸೆಳೆದಿದೆ.

ಸಾಯಿ ಪಲ್ಲವಿ ಅವರು ‘ಪ್ರೇಮಂ’, ‘ಫಿದಾ’,‘ಅಮರನ್’, ‘ಗಾರ್ಗಿ’ ‘ಶ್ಯಾಮ್ ಸಿಂಗ ರಾಯ್’ ಸೇರಿದಂತೆ ಹಲವು ಹಿಟ್ ಚಿತ್ರಗಳಲ್ಲಿ ನಟಿಸಿ ಪ್ರೇಕ್ಷಕರ ಮನ ಗೆದ್ದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.