ADVERTISEMENT

ಪ್ರಫುಲ್‌ ಪಟೇಲ್‌ ಮಗನ ಮದುವೆ: ಹೆಜ್ಜೆ ಹಾಕಿದ ಸಲ್ಮಾನ್‌ ಖಾನ್‌, ಶಿಲ್ಪಾ ಶೆಟ್ಟಿ

​ಪ್ರಜಾವಾಣಿ ವಾರ್ತೆ
Published 19 ಡಿಸೆಂಬರ್ 2021, 9:34 IST
Last Updated 19 ಡಿಸೆಂಬರ್ 2021, 9:34 IST
ಸಲ್ಮಾನ್‌ ಖಾನ್‌, ಶಿಲ್ಪಾ ಶೆಟ್ಟಿ
ಸಲ್ಮಾನ್‌ ಖಾನ್‌, ಶಿಲ್ಪಾ ಶೆಟ್ಟಿ   

ಜೈಪುರ: ಎನ್‌ಸಿಪಿ ನಾಯಕ ಹಾಗೂ ಮಾಜಿ ಕೇಂದ್ರ ಸಚಿವ ಪ್ರಫುಲ್ ಪಟೇಲ್‌ ಪುತ್ರನ ಮದುವೆ ಕಾರ್ಯಕ್ರಮದಲ್ಲಿ ಬಾಲಿವುಡ್‌ ನಟನಟಿಯರು ಅದ್ದೂರಿಯಾಗಿ ನೃತ್ಯ ಮಾಡಿದ್ದಾರೆ. ಆ ವಿಡಿಯೊಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.

ಜೈಪುರದ ರಾಂಬಾಗ್‌ ಅರಮನೆಯಲ್ಲಿ ಪ್ರಫುಲ್‌ ಪಟೇಲ್‌ ಪುತ್ರ ಪ್ರಜಯ್‌ ಪಟೇಲ್‌ ಅವರು ಉದ್ಯಮಿ ಶಿರೀಸ್‌ ಅವರ ಪುತ್ರಿ ಸಿರಿಕಾ ಅವರನ್ನು ಮದುವೆಯಾಗಿದ್ದಾರೆ.

ಸಮಾರಂಭದಲ್ಲಿ ಬಾಲಿವುಡ್‌ ನಟನಟಿಯರು. ರಾಜಕಾರಣಿಗಳು, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಸಚಿವರು ಮತ್ತು ಉದ್ಯಮಿಗಳು ಭಾಗವಹಿಸಿದ್ದರು.

ADVERTISEMENT

ಬಾಲಿವುಡ್‌ ನಟರಾದ ಅನಿಲ್ ಕಪೂರ್‌, ಸಲ್ಮಾನ್‌ ಖಾನ್, ಶಿಲ್ಪಾ ಶೆಟ್ಟಿ ಸೇರಿದಂತೆ ಹಲವಾರು ಗಣ್ಯರು ಭಾಗವಹಿಸಿದ್ದರು. ಪ್ರಜಯ್‌ ಪಟೇಲ್‌ ಅವರು ಸಲ್ಮಾನ್‌ ಖಾನ್ ಅಭಿಮಾನಿಯಾಗಿದ್ದರಿಂದ ಅವರಿಗೆ ವಿಶೇಷ ಆತಿಥ್ಯ ನೀಡಲಾಯಿತು ಎಂದು ಪ್ರಜಯ್‌ ಕುಟುಂಬದವರು ಹೇಳಿದ್ದಾರೆ.

ಈ ಸಮಾರಂಭದಲ್ಲಿ ಅನಿಲ್ ಕಪೂರ್‌, ಸಲ್ಮಾನ್‌ ಖಾನ್, ಶಿಲ್ಪಾ ಶೆಟ್ಟಿ ಅವರು ಬಾಲಿವುಡ್‌ ಹಾಡಿಗೆ ಹೆಜ್ಜೆ ಹಾಕಿದರು.

ಈ ಮದುವೆಗೆ 30ಕ್ಕೂ ಹೆಚ್ಚು ವಿಶೇಷ ವಿಮಾನಗಳ ಮೂಲಕ ಅತಿಥಿಗಳು ಆಗಮಿಸಿದ್ದರು. ಹಲವರು ಹೆಲಿಕಾಪ್ಟರ್‌ಗಳಮೂಲಕ ಮದುವೆ ಕಾರ್ಯಕ್ರಮಕ್ಕೆ ಬಂದಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.