ADVERTISEMENT

ಸಲ್ಮಾನ್ ಖಾನ್‌ ಕಾರು ಸ್ಫೋಟಿಸುವುದಾಗಿ ಜೀವ ಬೆದರಿಕೆ: ಪ್ರಕರಣ ದಾಖಲು

ಪಿಟಿಐ
Published 14 ಏಪ್ರಿಲ್ 2025, 9:54 IST
Last Updated 14 ಏಪ್ರಿಲ್ 2025, 9:54 IST
ಸಲ್ಮಾನ್ ಖಾನ್‌
ಸಲ್ಮಾನ್ ಖಾನ್‌   

ಮುಂಬೈ: ಬಾಲಿವುಡ್‌ ನಟ ಸಲ್ಮಾನ್‌ ಖಾನ್‌ಗೆ ಸೋಮವಾರ ಮತ್ತೆ ಜೀವ ಬೆದರಿಕೆ ಸಂದೇಶ ಬಂದಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಸಲ್ಮಾನ್‌ ಖಾನ್‌ ಕಾರನ್ನು ಸ್ಫೋಟಿಸುವುದಾಗಿಯೂ ಹಾಗೂ ಅವರ ಮನೆಗೆ ನುಗ್ಗಿ ಥಳಿಸುವುದಾಗಿಯೂ ಮುಂಬೈ ಟ್ರಾಫಿಕ್‌ ಪೊಲೀಸರಿಗೆ ಬೆದರಿಕೆ ಸಂದೇಶ ಬಂದಿತ್ತು. ಈ ಸಂಬಂಧ ಅಪರಿಚಿತ ವ್ಯಕ್ತಿಯ ವಿರುದ್ಧ ಪ್ರಕರಣ ದಾಖಲಿಸಲಾಗಿದ್ದು, ತನಿಖೆ ನಡೆಸುತ್ತಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ಈ ಹಿಂದೆಯೂ ಟ್ರಾಫಿಕ್‌ ಪೊಲೀಸರಿಗೆ ಸಲ್ಮಾನ್‌ ಖಾನ್‌ ಜೀವಕ್ಕೆ ಅಪಾಯ ಮಾಡುವ ಕುರಿತಾದ ಸಂದೇಶಗಳು ಬಂದಿದ್ದವು.

ADVERTISEMENT

ಗ್ಯಾಂಗ್‌ಸ್ಟರ್‌ ಲಾರೆನ್ಸ್‌ ಬಿಷ್ಣೋಯಿ ಗ್ಯಾಂಗ್‌ನಿಂದ ಸಲ್ಮಾನ್‌ ಖಾನ್‌ಗೆ ಹಲವು ಬಾರಿ ಜೀವ ಬೆದರಿಕೆ ಕರೆಗಳು ಬಂದಿವೆ. 2024ರ ಏಪ್ರಿಲ್‌ನಲ್ಲಿ ಎರಡು ಬೈಕ್‌ಗಳಲ್ಲಿ ಬಂದಿದ್ದ ಇಬ್ಬರು ಆರೋಪಿಗಳು ಮುಂಜಾನೆ 5 ಗಂಟೆ ವೇಳೆಗೆ ಮುಂಬೈನ ಬಾಂದ್ರಾ ಪ್ರದೇಶದಲ್ಲಿರುವ ಗ್ಯಾಲಕ್ಸಿ ಅಪಾರ್ಟ್‌ಮೆಂಟ್‌ ಎದುರು ನಾಲ್ಕು ಸುತ್ತು ಗುಂಡು ಹಾರಿಸಿ, ಸ್ಥಳದಿಂದ ಪರಾರಿಯಾಗಿದ್ದರು. ಅದಾದ ಬಳಿಕ ಸಲ್ಮಾನ್‌ ಮನೆ ಸುತ್ತ ಭದ್ರತೆಯನ್ನು ಹೆಚ್ಚಿಸಲಾಗಿದೆ.

ಈದ್‌ ಉಲ್‌ ಫಿತ್ರ್‌ ಹಬ್ಬದಂದು ಸಂಪ್ರದಾಯದಂತೆ ತಮ್ಮ ಮುಂಬೈನ ಬಾಂದ್ರಾದ ಗ್ಯಾಲಾಕ್ಸಿ ಮನೆಯಿಂದ ಹೊರಗೆ ಬಂದು ಬುಲೆಟ್ ಪ್ರೂಫ್ ಗಾಜಿನ ಬಾಗಿಲೊಳಗೆ ನಿಂತು ಅಭಿಮಾನಿಗಳಿಗೆ ಕೈ ಬೀಸಿ ಶುಭಾಶಯ ತಿಳಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.