ನಟಿ ಸಮಂತಾ ರುತ್ ಪ್ರಭು
ಚಿತ್ರ ಕೃಪೆ: ಇನ್‌ಸ್ಟಾಗ್ರಾಂ
ಎರಡು ವರ್ಷಗಳ ವಿರಾಮದ ಬಳಿಕ ನಟಿ ಸಮಂತಾ ರುತ್ ಪ್ರಭು ನಟನೆಯ ತೆಲುಗಿನ ‘ಮಾ ಇಂಟಿ ಬಂಗಾರಂ’ ಸಿನಿಮಾ ಮೇ 15 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ ಎಂದು ಚಿತ್ರತಂಡ ಭಾನುವಾರ ಘೋಷಿಸಿದೆ.
ತೆಲುಗಿನ ಆಕ್ಷನ್ ಥ್ರಿಲ್ಲರ್ ಸಿನಿಮಾ ಮಾ ಇಂಟಿ ಬಂಗಾರಂನ ಬಿಡುಗಡೆಯ ಪೋಸ್ಟರ್ ಅನ್ನು ತಮ್ಮ ಸಾಮಾಜಿಕ ಮಾಧ್ಯಮ ಇನ್‌ಸ್ಟಾಗ್ರಾಂನಲ್ಲಿ ಸಮಂತಾ ರುತ್ ಪ್ರಭು ಹಂಚಿಕೊಂಡಿದ್ದಾರೆ. ಪೋಸ್ಟ್‌ನ ಅಡಿಬರಹದಲ್ಲಿ ‘ಈ ಬೇಸಿಗೆಯಲ್ಲಿ ಚಿತ್ರಮಂದಿರದಲ್ಲಿ ಭೇಟಿಯಾಗೋಣ’ ಎಂದು ಬರೆದಿದ್ದಾರೆ.
ಬಿ.ವಿ. ನಂದಿನಿ ರೆಡ್ಡಿ ನಿರ್ದೇಶನದಲ್ಲಿ ಸಿನಿಮಾ ಮೂಡಿಬಂದಿದ್ದು, ಸಂತೋಷ್ ನಾರಾಯಣನ್ ಸಂಗೀತ ಸಂಯೋಜಿಸಿದ್ದಾರೆ.
ಸಿನಿಮಾದಲ್ಲಿ ಸಮಂತಾ ಪತಿಯ ಪಾತ್ರದಲ್ಲಿ ಕನ್ನಡದ ನಟ ದಿಗಂತ್ ಅವರು ನಟಿಸಿದ್ದಾರೆ. ಈ ಸಿನಿಮಾವನ್ನು ಸಮಂತಾ ಅವರ ಪತಿ, ನಿರ್ದೇಶಕ ರಾಜ್ ನಿಧಿಮೋರು, ಸಮಂತಾ ರುತ್ ಪ್ರಭು ಮತ್ತು ಹಿಮಂಕ್ ದುಡ್ಡುರು ನಿರ್ಮಿಸಿದ್ದಾರೆ. ಈ ಸಿನಿಮಾದಲ್ಲಿ ಸಮಂತಾ ಜೊತೆಗೆ ಗುಲ್ಕನ್ ದೇವಯ್ಯ, ಹಿರಿಯ ನಟರಾದ ಗೌತಮಿ ಮತ್ತು ಮಂಜುಷಾ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಜನವರಿ 9ರಂದು ಸಿನಿಮಾದ ಟ್ರೇಲರ್ ಬಿಡುಗಡೆಯಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.