ADVERTISEMENT

ಪ್ರವಾಸಿ ಮಾರ್ಗದರ್ಶಕರಾಗಿದ್ದಾರೆ ನಟಿ ಸಾರಾ ಆಲಿ ಖಾನ್

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 6 ಆಗಸ್ಟ್ 2021, 6:45 IST
Last Updated 6 ಆಗಸ್ಟ್ 2021, 6:45 IST
ನಟಿ ಸಾರಾ ಆಲಿ ಖಾನ್-ಇನ್‌ಸ್ಟಾಗ್ರಾಂ ಪೋಸ್ಟ್
ನಟಿ ಸಾರಾ ಆಲಿ ಖಾನ್-ಇನ್‌ಸ್ಟಾಗ್ರಾಂ ಪೋಸ್ಟ್   

ಬೆಂಗಳೂರು: ನಟ ಸೈಫ್ ಆಲಿ ಖಾನ್ ಪುತ್ರಿ ಸಾರಾ ಆಲಿ ಖಾನ್ ಈಗ ಪ್ರವಾಸಿ ಮಾರ್ಗದರ್ಶಕರಾಗಿದ್ದಾರೆ.

'ನಮಸ್ತೇ ದರ್ಶಕೋ' ಎಂಬ ಸರಣಿಯಲ್ಲಿ ಅವರು ಮತ್ತೆ ಕಾಣಿಸಿಕೊಂಡಿದ್ದು, ತಮ್ಮ ಇನ್‌ಸ್ಟಾಗ್ರಾಂನಲ್ಲಿ ಕಿರು ವಿಡಿಯೊ ಒಂದನ್ನು ಪೋಸ್ಟ್ ಮಾಡಿದ್ದಾರೆ.

ಸಾರಾ ಆಲಿ ಖಾನ್ ಇತ್ತೀಚೆಗೆ ವೈಷ್ಣೋ ದೇವಿ, ರಿಷಿಕೇಶ, ಇಂಡಿಯಾ ಗೇಟ್, ಬಿಹಾರದ ಒಂದು ಹಳ್ಳಿ ಮತ್ತು ಜೈಪುರ ಹಾಗೂ ಗೋವಾಗೆ ಭೇಟಿ ನೀಡಿದ್ದರು.

ADVERTISEMENT

ಈ ಬಾರಿ ಸಾರಾ ಆಲಿ ಖಾನ್ ಜಮ್ಮು ಮತ್ತು ಕಾಶ್ಮೀರದಿಂದ ದೆಹಲಿ, ಮತ್ತು ಅಲ್ಲಿಂದ ಬಿಹಾರವಾಗಿ ಗೋವಾಗೆ ತೆರಳಿದ್ದ ಪ್ರವಾಸದ ವಿವಿಧ ಸಂದರ್ಭಗಳ ಕಿರು ಅವಧಿಯ ವಿಡಿಯೊಗಳನ್ನು ಜೋಡಿಸಿ ನಮಸ್ತೇ ದರ್ಶಕ್ ಸರಣಿಯಲ್ಲಿ 2:30 ನಿಮಿಷದ ವಿಡಿಯೊವನ್ನು ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದಾರೆ.

ಅಲ್ಲದೆ, ಹಿಂದು ಧಾರ್ಮಿಕ ತಾಣಗಳಿಗೂ ಭೇಟಿ ನೀಡಿ ಸಾರಾ ಆಲಿ ಖಾನ್ ಸುದ್ದಿಯಾಗಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.