ADVERTISEMENT

‘ಕಿಂಗ್’ ಶೂಟಿಂಗ್ ವೇಳೆ ಶಾರುಕ್‌ಗೆ ಗಂಭೀರ ಗಾಯ; ಚಿತ್ರೀಕರಣ 1 ತಿಂಗಳು ಮುಂದಕ್ಕೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 19 ಜುಲೈ 2025, 9:44 IST
Last Updated 19 ಜುಲೈ 2025, 9:44 IST
<div class="paragraphs"><p>ಶಾರುಕ್‌ ಖಾನ್‌</p></div>

ಶಾರುಕ್‌ ಖಾನ್‌

   

ಚಿತ್ರಕೃಪೆ: ಎಕ್ಸ್‌

ಮುಂಬೈ: ‘ಕಿಂಗ್’ ಚಿತ್ರದ ಸಾಹಸ ದೃಶ್ಯದ ಚಿತ್ರೀಕರಣದ ವೇಳೆ ಬಾಲಿವುಡ್ ನಟ ಶಾರುಕ್ ಖಾನ್‌ ಅವರು ತೀವ್ರವಾಗಿ ಗಾಯಗೊಂಡಿದ್ದು, ಚಿಕಿತ್ಸೆಗಾಗಿ ಅಮೆರಿಕಕ್ಕೆ ತೆರಳಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.

ADVERTISEMENT

ಡ್ಯೂಪ್‌ ಇಲ್ಲದೇ ಅಪಾಯಕಾರಿ ಸಾಹಸ ದೃಶ್ಯದಲ್ಲಿ ಸ್ಟಂಟ್ಸ್‌ ಮಾಡುವ ವೇಳೆ ಶಾರುಕ್‌ ಅವರ ಬೆನ್ನಿಗೆ ಗಾಯವಾಗಿದೆ ಎಂದು ವರದಿಗಳು ತಿಳಿಸಿವೆ.

ಶಾರುಕ್‌ ಅವರು ಚೇತರಿಸಕೊಳ್ಳುವವರೆಗೂ ಒಂದು ತಿಂಗಳ ಕಾಲ ಚಿತ್ರೀಕರಣವನ್ನು ಮುಂದೂಡಲಾಗಿದೆ ಎಂದು ಮೂಲಗಳು ತಿಳಿಸಿವೆ.

ಸಿದ್ದಾರ್ಥ್ ಆನಂದ್‌ ನಿರ್ದೇಶನದ ಕಿಂಗ್‌ ಚಿತ್ರದಲ್ಲಿ ಶಾರುಕ್‌ ಮತ್ತು ಅವರ ಮಗಳು ಸುಹಾನಾ ಖಾನ್ ನಟಿಸುತ್ತಿದ್ದಾರೆ. ಚಿತ್ರವು ದೊಡ್ಡ ತಾರಾಬಳಗವನ್ನು ಹೊಂದಿದ್ದು, ದೀಪಿಕಾ ಪಡುಕೋಣೆ, ಅಭಿಷೇಕ್‌ ಬಚ್ಚನ್, ರಾಣಿ ಮುಖರ್ಜಿ, ಅನಿಲ್‌ ಕಪೂರ್‌ ಸೇರಿದಂತೆ ಹಲವು ನಟ–ನಟಿಯರು ಅಭಿನಯಿಸಲಿದ್ದಾರೆ.

ಜವಾನ್‌, ಪಠಾಣ್‌ ಚಿತ್ರದ ಯಶಸ್ವಿನ ನಂತರ ಶಾರುಕ್‌ ಕಿಂಗ್ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಬಹುತೇಕ ಚಿತ್ರೀಕರಣ ಪೂರ್ಣಗೊಂಡಿರುವುದರಿಂದ ಚಿತ್ರ ಮುಂದಿನ ವರ್ಷ ಬಿಡುಗಡೆಗೊಳ್ಳುವ ಸಾಧ್ಯತೆಯಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.