ಕಾರ್ಯಕ್ರಮದಲ್ಲಿ ನಟ ಶಿವರಾಜ್‌ಕುಮಾರ್
‘ಕಲಾವಿದರಿಗೆ ತಂತ್ರಜ್ಞರಿಗೆ ಈ ರೀತಿ ಪ್ರಶಸ್ತಿಗಳು ಪ್ರೋತ್ಸಾಹ ನೀಡುತ್ತವೆ ಎಂದು ನಟ ಶಿವರಾಜ್‌ಕುಮಾರ್ ಹೇಳಿದರು.
ಪ್ರಜಾವಾಣಿ ಕನ್ನಡ ಸಿನಿ ಸಮ್ಮಾನದ ಮೂರನೇ ಆವೃತ್ತಿಯಲ್ಲಿ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದ ಅವರು, ಪ್ರಶಸ್ತಿಗಳು ಮುಂದಿನ ಹೆಜ್ಜೆ ಇಡಲು ಒಂದು ರೀತಿ ಔಷಧದಂತೆ ಕೆಲಸ ಮಾಡುತ್ತವೆ. ಪ್ರಸ್ತುತ ನಮ್ಮ ಕನ್ನಡ ಚಿತ್ರರಂಗ ಇರುವ ಪರಿಸ್ಥಿತಿಯಲ್ಲಿ ಇಂತಹ ಪ್ರಶಸ್ತಿಗಳು ಬಹುಮುಖ್ಯ. ಯಾವುದೇ ಸಿನಿಮಾ ಬರಲಿ ಮೊದಲು ‘ಪ್ರಜಾವಾಣಿ’ ಹಾಗೂ ‘ಡೆಕ್ಕನ್ ಹೆರಾಲ್ಡ್’ ವಿಮರ್ಶೆಗಳನ್ನೇ ನೋಡುತ್ತೇವೆ. ಇವುಗಳಿಂದ ಕಲಿತಿದ್ದೇವೆ ತಿದ್ದುಕೊಂಡಿದ್ದೇವೆ. ಪ್ರಾಮಾಣಿಕವಾಗಿ ಇಲ್ಲಿನ ಲೇಖನಗಳು ವಿಮರ್ಶೆಗಳು ಇರುತ್ತವೆ ನಾವು ಸ್ಪರ್ಧಾತ್ಮಕವಾಗಿದ್ದರಷ್ಟೇ ಗೆಲ್ಲಲು ಸಾಧ್ಯ. ಇಂತಹ ಸಮಾರಂಭಗಳ ಅಗತ್ಯ ಬಹಳಷ್ಟಿದೆ ಎಂದರು.
ನಿರೂಪಕಿ ಅನುಶ್ರೀ ಅವರ ಒಂದು ಪದದ ಪ್ರಶ್ನೆಗಳಿಗೆ ಉತ್ತರಿಸಿದ ಶಿವಣ್ಣ ‘ಆನಂದ್ ಎಂದರೆ ಅಮ್ಮ 45 ಎಂದರೆ ಅರ್ಜುನ್ ಜನ್ಯ ಅಪ್ಪಾಜಿ ಎಂದರೆ ಮುತ್ತು ಗೀತಕ್ಕ ಎಂದರೆ ಜೀವನ ಕರುನಾಡು ಎಂದರೆ ಬೆಳೆಸಿದ ಊರು ಚಕ್ರವರ್ತಿ ಎಂದರೆ ಜನಗಳು ಡಾನ್ಸ್ ಎಂದರೆ ಅಪ್ಪು ಲಾಂಗ್ ಎಂದರೆ ಲೈಫ್’ ಎಂದರು. ವಯಸ್ಸಿನ ಪ್ರಶ್ನೆಗೆ ‘63 ಆಗಿದೆ ಆದರೆ ರಿವರ್ಸ್ ಮಾಡಬಹುದು’ ಎಂದರು. ‘ಎಲ್ಲರ ಪ್ರೀತಿ ಆಶೀರ್ದಾದಿಂದಾಗಿ ನಾನು ಇಂದು ಮರಳಿದ್ದೇನೆ’ ಎಂದ ಶಿವರಾಜ್‌ಕುಮಾರ್ ಭಾವುಕರಾದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.